Advertisement
1895ರಲ್ಲಿ ಪ್ರಾರಂಭಗೊಂಡು 127 ವರ್ಷಗಳ ಇತಿಹಾಸ ಹೊಂದಿದ ಶಾಲೆಯಾಗಿದೆ. 2019-20ರಲ್ಲಿ ನಿರ್ಮಿತಿ ಕೇಂದ್ರ ಅಡಿ ನಿರ್ಮಾಣಗೊಂಡ 4 ಕೊಠಡಿಗಳನ್ನು ಹೊರತುಪಡಿಸಿ ಉಳಿದವು ತೀರಾ ಹಳೆಯದಾಗಿ ಶಿಥಿಲಾವಸ್ಥೆಯಲ್ಲಿದೆ. ಪ್ರಸ್ತುತ ಗಣೇಶೋತ್ಸವ, ಶಾರದೋತ್ಸವ ವೇದಿಕೆ ಸೇರಿದಂತೆ ಎಲ್ಲೆಂದರಲ್ಲಿ ತರಗತಿ ನಡೆಸಲಾಗುತ್ತಿದ್ದು ಮಳೆಗಾಲದಲ್ಲಿ ನೆನೆಯಬೇಕಾಗಿದೆ.
Related Articles
Advertisement
ಮುಂದಿನ ಶೈಕ್ಷಣಿಕ ಸಾಲಿಗೆ ಈಗಾಗಲೇ 180 ಮಂದಿ ನೋಂದಾಯಿಸಿದ್ದಾರೆ. 65 ವಿದ್ಯಾರ್ಥಿಗಳಿಗೆ ಒಂದೇ ಕೊಠಡಿಯಲ್ಲಿ ಬೋಧಿಸುವ ದುಃಸ್ಥಿತಿ ಇದೆ. ಸುಮಾರು 250 ವಿದ್ಯಾರ್ಥಿಗಳು ಸೂಕ್ತ ಪೀಠೊಪಕರಣಗಳಿಲ್ಲದೆ ಬೆಳಗ್ಗಿನಿಂದ ಸಂಜೆಯವರೆಗೂ ನೆಲದಲ್ಲಿ ಕುಳಿತು ಪಾಠ ಕೇಳುತ್ತಿದ್ದಾರೆ. ಇದರಿಂದ ಓದಲು, ಬರೆಯಲು ಕಷ್ಟವಾಗುತ್ತಿದೆ. ಕಳೆದ ಎರಡು ವರ್ಷ ಕೊರೊನಾ ಹಿನ್ನೆಲೆಯಲ್ಲಿ ಶಾಲೆಗೆ ರಜೆ ಇದ್ದುದರಿಂದ ಸಮಸ್ಯೆ ಅಷ್ಟೊಂದು ಬಾಧಿಸಿರಲಿಲ್ಲ. ಆದರೆ ಈ ವರ್ಷ ಗಂಭೀರ ಸ್ವರೂಪ ಪಡೆದಿದೆ. ಪ್ರಸ್ತುತ 14 ಶಿಕ್ಷಕರಿದ್ದು ಶಿಕ್ಷಕರ ಕೊರತೆಯೂ ಕಾಡುತ್ತಿದೆ.
ಆಮೆಗತಿ 55 ಲಕ್ಷ ರೂ. ಅಂದಾಜು ವೆಚ್ಚದಲ್ಲಿ 3 ಕೊಠಡಿಗಳ ಕಟ್ಟಡ ನಿರ್ಮಾಣ ಹಂತದಲ್ಲಿದ್ದು ಹಣದ ಕೊರತೆಯಿಂದ ಆಮೆಗತಿಯಲ್ಲಿದೆ. ಒಂದು ಕೊಠಡಿಯ ಖರ್ಚನ್ನು ಬ್ರಹ್ಮಾವರ ಜಿ.ಎಸ್.ಬಿ. ಸಮಾಜದವರು ಪ್ರಾಯೋಜಿಸುತ್ತಿದ್ದಾರೆ. ಹಳೆ ವಿದ್ಯಾರ್ಥಿಗಳು ನೆರವಿನ ಭರವಸೆ ನೀಡಿದ್ದಾರೆ. ಮೇ ತಿಂಗಳ ಒಳಗಾಗಿ ಕಟ್ಟಡ ಪೂರ್ಣಗೊಳ್ಳಬೇಕಾದ ಅನಿವಾರ್ಯತೆ ಇರುವುದರಿಂದ ಸರಕಾರ ತತ್‌ಕ್ಷಣ ಸ್ಪಂದಿಸಬೇಕಾಗಿ ಪೋಷಕರು ಮನವಿ ಮಾಡಿದ್ದಾರೆ.
ತುರ್ತು ಅಗತ್ಯ
ಶಾಲೆಯಲ್ಲಿ ವರ್ಷದಿಂದ ವರ್ಷಕ್ಕೆ ದಾಖಲಾತಿ ಹೆಚ್ಚುತ್ತಿದೆ. ಪೂರಕವಾಗಿ ಮೂಲ ಸೌಕರ್ಯದ ಅವಶ್ಯಕತೆಯಿದೆ. ಮುಂದಿನ ಶೈಕ್ಷಣಿಕ ವರ್ಷದ ಒಳಗಾಗಿ ತರಗತಿ ಕೊಠಡಿಗಳ ತುರ್ತು ಆವಶ್ಯಕತೆಯಿದೆ. -ಬಿ.ಎನ್. ದೇವ ಕುಮಾರಿ ಮುಖ್ಯ ಶಿಕ್ಷಕಿ
ದಾನಿಗಳ ಸಂಪರ್ಕ
ತರಗತಿ ಕೊಠಡಿಗಳ ನಿರ್ಮಾಣಕ್ಕೆ ಸರಕಾರದ ಅನುದಾನ ಪಡೆಯುವಲ್ಲಿ ಪ್ರಯತ್ನಿಸಲಾಗುತ್ತಿದೆ. ಜತೆಗೆ ದಾನಿಗಳನ್ನು ಸಂಪರ್ಕಿಸಲಾಗಿದ್ದು ನೆರವಿನ ಭರವಸೆ ನೀಡಿದ್ದಾರೆ. ಈ ಕುರಿತು ಸಭೆ ಕರೆದು ಸಮಾಲೋಚಿಸಲಾಗುವುದು. -ಕೆ. ರಘುಪತಿ ಭಟ್, ಶಾಸಕರು