Advertisement
ಪುರಸಭೆ ಚುನಾವಣೆಗೆ ಆ.2ರಂದು ಅಧಿಸೂಚನೆ ಹೊರಡಿಸಲಾಗಿದೆ. ಆ.10ರಿಂದ 17ರವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶ ನೀಡಲಾಗಿದೆ. ತೋಟಗಾರಿಕೆ ಹಿರಿಯ ನಿರ್ದೇಶಕ ಸುರೇಶ, ಬಿಇಒ ಚಂದ್ರಶೇಖರ ಭಂಡಾರಿ, ರೇಷ್ಮೆ ಸಹಾಯಕ ನಿರ್ದೇಶಕ ರಾಜೇಂದ್ರ ದೇವದುರ್ಗ ಅವರನ್ನು ಚುನಾವಣಾಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ. ತೋಟಗಾರಿಕೆ, ಪುರಸಭೆ ಕಚೇರಿ, ಬಿಇಒ ಕಚೇರಿಗಳಲ್ಲಿ ನಾಮಪತ್ರ ಸಲ್ಲಿಕೆಗೆ ಕೇಂದ್ರಗಳನ್ನು ತೆರೆಯಲಾಗುವುದುಎಂದು ಹೇಳಲಾಗುತ್ತಿದೆ. ಆದರೆ ಯಾವ ವಾರ್ಡ್‌ನವರು ಎಲ್ಲಿ ನಾಮಪತ್ರ ಸಲ್ಲಿಸಬೇಕೆಂಬ ಮಾಹಿತಿ ಇಲ್ಲದಾಗಿದೆ.
ಎಂಬದು ಆಕಾಂಕ್ಷಿಗಳ ಆರೋಪವಾಗಿದೆ. ಪ್ರಮಾಣಪತ್ರಕ್ಕೆ ಅಲೆದಾಟ: ಚುನಾವಣೆ ನಿಮಿತ್ತವಾಗಿ ಅಗತ್ಯ ಪ್ರಮಾಣ ಪತ್ರಗಳನ್ನು ತ್ವರಿತಗತಿಯಲ್ಲಿ ನೀಡುವಂತೆ ಚುನಾವಣೆ ಆಯೋಗ ಕಟ್ಟುನಿಟ್ಟಿನ ಸೂಚನೆ ನೀಡಿದ್ದರೂ ಸಹ ಜಾತಿ, ಆದಾಯ, ಬೇಬಾಕಿ ಪ್ರಮಾಣ ಪತ್ರಕ್ಕೆ ಆಕಾಂಕ್ಷಿಗಳು ತಹಶೀಲ್ದಾರ್ ಕಚೇರಿಗೆ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ.
Related Articles
Advertisement
ತಹಶೀಲ್ದಾರರು ಕಚೇರಿಯಲ್ಲಿ ಲಭ್ಯವಿರದ ಕಾರಣ ತಹಶೀಲ್ದಾರ್ ಗ್ರೇಡ್-2 ಅವರಿಂದ ಸಹಿ ಮಾಡಿಸಬಹುದಾಗಿದೆ. ಅವರು ಇದಕ್ಕೆ ಸಹಿ ಮಾಡದ ಕಾರಣ ಪ್ರಮಾಣಪತ್ರ ಪಡೆಯುವಲ್ಲಿ ವಿಳಂಬವಾಗುತ್ತಿದೆ. ಕಡಿಮೆ ಸಮಯ: ನಾಮಪತ್ರ ಸಲ್ಲಿಕೆಗೆ 10ರಿಂದ 17ರವರೆಗೆ ಅವಕಾಶವಿದೆ. ಆದರೆ ಇದರಲ್ಲಿ ನಡುವೆ ಮೂರು ದಿನ ರಜೆ ಇದೆ. ಇರುವ ನಾಲ್ಕು ದಿನಗಳಲ್ಲಿ ಅಗತ್ಯ ದಾಖಲೆಗಳನ್ನು ಹೊಂದಿಸಿಕೊಂಡು ನಾಮಪತ್ರ ಸಲ್ಲಿಕೆ ಮಾಡುವ ಅನಿವಾರ್ಯತೆ ಎದುರಾಗಿದೆ. ಈ ಮಧ್ಯೆ ಅಧಿಕಾರಿ ಗಳು ಮಾಹಿತಿ ನೀಡುವಲ್ಲಿ ವಿಳಂಬ ಮಾಡುತ್ತಿರುವುದರಿಂದ ಆಕಾಂಕ್ಷಿಗಳಿಗೆ ತೊಂದರೆ ಎದುರಾಗಿದೆ
ಚುನಾವಣೆ ನಡೆಯುತ್ತಿದೆಯೋ ಇಲ್ಲವೋ ತಿಳಿಯದಾಗಿದೆ. ತಹಶೀಲ್ದಾರ್ ಕಚೇರಿಗೆ ಹೋದರೂ ಮಾಹಿತಿ ಇಲ್ಲದಾಗಿದೆ. ಆದರೆ ಒಂದೊಂದು ಪ್ರಮಾಣಪತ್ರಕ್ಕಾಗಿ ಕಚೇರಿ ಕಚೇರಿಗೆ ಅಲೆದಾಡುವಂತಾಗಿದೆ. ತಹಶೀಲ್ದಾರರು ನಮ್ಮ ಕರೆ ಸ್ವೀಕರಿಸುತ್ತಿಲ್ಲ. ರುದ್ರಪ್ಪ ಬ್ಯಾಗಿ, ಚುನಾವಣಾ ಸ್ಪರ್ಧಾಕಾಂಕ್ಷಿ ಚುನಾವಣಾಧಿಕಾರಿಯನ್ನಾಗಿ ನೇಮಕ ಮಾಡಿದ್ದಾರೆ ಅಷ್ಟೇ, ಆದರೆ ಕಚೇರಿ ಎಲ್ಲಿ, ನಾಮಪತ್ರ ಸಲ್ಲಿಸುವವರು ಯಾವ ದಾಖಲೆಗಳನ್ನು ಲಗತ್ತಿಸಬೇಕು ಎಂಬುದರ ಬಗ್ಗೆ ಮಾಹಿತಿಯನ್ನು ಇವತ್ತು ಕೊಡಬಹುದು. ಒಂದು ವೇಳೆ
ಕೊಟ್ಟರೆ ಮಾಹಿತಿ ನೀಡುತ್ತೇವೆ.
ಚಂದ್ರಶೇಖರ ಭಂಡಾರಿ, ಚುನಾವಣಾಧಿಕಾರಿ