Advertisement

ಆರೋಗ್ಯ ವಿಚಾರಕ್ಕೆ ಪ್ರಚಾರ ಕೊರತೆ

01:11 PM Apr 07, 2017 | |

ಹುಬ್ಬಳ್ಳಿ: ಭಾರತದಲ್ಲಿ ಉತ್ಪನ್ನಗಳಿಗೆ ಪ್ರಚಾರ ಸಿಗುವಷ್ಟು ಆರೋಗ್ಯ ರಕ್ಷಣೆ ಕುರಿತ ವಿಷಯಗಳಿಗೆ ಪ್ರಚಾರ ಸಿಗದಿರುವುದು ದುರದೃಷ್ಟಕರ ಸಂಗತಿ ಎಂದು ಇಂಡೋಸಿಸ್‌ ಲೈಫ್ ಸಾಯನ್ಸ್‌ ಸಂಸ್ಥೆಯ ಚೇರನ್‌ ಹಾಗೂ ಅಂತಾರಾಷ್ಟ್ರೀಯ ಆಹಾರ ತಜ್ಞ ಡಾ| ಎಸ್‌. ಎಚ್‌.ಕುಲಕರ್ಣಿ ಹೇಳಿದರು. 

Advertisement

ಗುರುವಾರ ವಕೀಲರ ಸಂಘದ ಸಭಾಭವನದಲ್ಲಿ ಆರೋಗ್ಯ ಚಿಂತನ ಕುರಿತು ಅವರು ಉಪನ್ಯಾಸ ನೀಡಿದರು.  ಬೇರೆ ದೇಶಗಳಲ್ಲಿ ಉತ್ಪನ್ನಗಳೊಂದಿಗೆ ಆರೋಗ್ಯ ರಕ್ಷಣೆ ಕುರಿತು ಪ್ರಚಾರ ಮಾಡಲಾಗುತ್ತದೆ. ಆದರೆ ನಮ್ಮಲ್ಲಿ ಸೆಲೆಬ್ರಿಟಿಗಳನ್ನು ಬಳಸಿಕೊಂಡು ಕಂಪನಿಗಳು  ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುತ್ತವೆ. 

ಆರೋಗ್ಯ ರಕ್ಷಣೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ವಿರಳ ಎಂದರು. ರೋಗ ಬಂದ ನಂತರ ವೈದ್ಯರ ಬಳಿಗೆ ಎಡತಾಕುವುದಕ್ಕಿಂತ ರೋಗ ಬರದಂತೆ ತಡೆಯುವುದು ಹೇಗೆ ಎಂಬುದರ ಬಗ್ಗೆ ತಿಳಿಯುವುದು ಅವಶ್ಯ. ಆಹಾರ, ನೀರು, ವ್ಯಾಯಾಮ, ಜೀವನಶೈಲಿಯಿಂದ ಹೆಚ್ಚಿನ ರೋಗಗಳು ಬರದಂತೆ ತಡೆಯಬಹುದು ಎಂದರು.

ಪ್ರತಿದಿನ ನಾವು ಸೇವಿಸುವ ಆಹಾರದ ಮೂಲಕ ರಾಸಾಯನಿಕ ನಮ್ಮ ದೇಹಕ್ಕೆ ಸೇರುವುದರಿಂದ ಜೀವಕೋಶಗಳ ಸಾಮರ್ಥ್ಯ ಕಡಿಮೆಯಾಗುತ್ತಿದೆ. ಇದು ರೋಗಗಳಿಗೆ ಕಾರಣವಾಗಿದೆ.  ಎಲ್ಲ ರೋಗಗಳಿಗೂ ಜೀವಕೋಶಗಳು ಹಾಳಾಗುವುದೇ ಕಾರಣ ಎಂದರು. ಅಡುಗೆ ಅನಿಲ ಬಳಸಿ ಅಡುಗೆ ಮಾಡುವುದರಿಂದ ಹಲವು ರೋಗಗಳು ಬರುವ ಸಾಧ್ಯತೆ ಇರುತ್ತದೆ.

ಅಡುಗೆ ಅನಿಲದಲ್ಲಿರುವ ಕೆಲ ರಾಸಾಯನಿಕಗಳಿಂದ ಹೆಚ್ಚು ಹೊತ್ತು ಅಡುಗೆ ಮನೆಯಲ್ಲಿ ಕಳೆಯುವ ಮಹಿಳೆಯರಲ್ಲಿ 40-45 ವರ್ಷಕ್ಕೆ ಸಂದು ನೋವು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ ಎಂದರು. ಭಾರತದಲ್ಲಿ ಆರೋಗ್ಯಕ್ಕೆ ಪೂರಕವಾಗುವ ಹಲವಾರು ಉತ್ಪನ್ನಗಳು ಸಿದ್ಧವಾಗುತ್ತಿದ್ದರೂ ಅವುಗಳನ್ನು ವಿದೇಶಗಳಿಗೆ ರಫ್ತು ಮಾಡುವುದೇ ಅಧಿಕ.

Advertisement

ಭಾರತದಲ್ಲಿ ಉತ್ಪಾದಿಸುವ ಚಹಾಗಳಲ್ಲಿ ಶೇ.15ರಷ್ಟು ಚಹಾಗಳಲ್ಲಿ ಆರೋಗ್ಯ ಪೂರಕ ಅಂಶಗಳಿವೆ. ಆದರೆ ಅದು ಭಾರತದಲ್ಲಿ ಅದರ ಮಾರಾಟ ಅತಿ ಕಡಿಮೆ. ದೇಹಕ್ಕೆ ಮಾರಕವಾಗುವ ಶೇ.85 ಚಹಾ ಮಾರುಕಟ್ಟೆಯಲ್ಲಿ ಬಿಕರಿಯಾಗುತ್ತಿದೆ ಎಂದರು. ಜೀವಕೋಶಗಳು ಸಶಕ್ತವಾಗಿರಲು ಪ್ರತಿಯೊಂದು ಮನೆಗಳಲ್ಲಿ ಅಡುಗೆ ವೇಳಾಪಟ್ಟಿ ಹಾಕಿಕೊಳ್ಳಬೇಕು.

ಒಂದೇ ರೀತಿಯ ತರಕಾರಿ, ಧಾನ್ಯ ಬಳಕೆ ಮಾಡುವುದಕ್ಕಿಂತ 2-3 ರೀತಿಯ ತರಕಾರಿ, ಸೊಪ್ಪು, ಧಾನ್ಯ, ಹಣ್ಣು ಬಳಕೆ ಮಾಡುವುದು ಒಳಿತು. ನೋನಿ ಹಣ್ಣಿನ ಜ್ಯೂಸ್‌ ಬಳಕೆ ಮಾಡುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂದರು. ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಅಶೋಕ ಅಣವೇಕರ, ಸಿ.ವಿ.ಮಲ್ಲಾಪುರ ವೇದಿಕೆ ಮೇಲಿದ್ದರು.   

Advertisement

Udayavani is now on Telegram. Click here to join our channel and stay updated with the latest news.

Next