Advertisement

ಸೌಲಭ್ಯವಿಲ್ಲದೇ ಸೊರಗುತ್ತಿದೆ ಮುಶಿಗೇರಿ ಲೈಬ್ರರಿ

04:13 PM Dec 01, 2019 | Team Udayavani |

ಗಜೇಂದ್ರಗಡ: ಸಮೀಪದ ಮುಶಿಗೇರಿ ಗ್ರಾಮದ ಗ್ರಂಥಾಲಯಕ್ಕೆ ಸ್ವಂತ ಕಟ್ಟಡವಿದ್ದು, ನಿರ್ವಹಣೆ ಇಲ್ಲ. ಗ್ರಂಥಾಲಯ ಕಟ್ಟಡ ಸುತ್ತಲೂ ಅನೈರ್ಮಲ್ಯದಿಂದ ಕಲುಷಿತ ವಾತಾವರಣವಿದ್ದು, ಓದುಗರು ಮೂಗು ಮುಚ್ಚಿಕೊಂಡೇ ಹೋಗುವ ಸ್ಥಿತಿ ಇದೆ.

Advertisement

1993-94ನೇ ಸಾಲಿನ ನಬಾರ್ಡ್‌ಯೋಜನೆಯಡಿ ಗ್ರಾಮದಲ್ಲಿ ಗ್ರಂಥಾಲಯ ಆರಂಭಿಸಲಾಗಿದ್ದು, ಕಟ್ಟಡ ನವೀಕರಣಗೊಂಡು ದಶಕ ಕಳೆದಿದೆ. ಆದರೆಸೂಕ್ತ ನಿರ್ವಹಣೆ ಇಲ್ಲದೇ ಕಟ್ಟಡ ಅಲ್ಲಲ್ಲಿಸೋರುತ್ತಿದೆ. ಮಳೆ ಬಂದರೆ, ಗ್ರಂಥಾಲಯ ಸ್ಥಿತಿ ಹೇಳತೀರಾಗಿದೆ. ಈ ಕುರಿತು ಸ್ಥಳೀಯಆಡಳಿತ ಇಚ್ಚಾಶಕ್ತಿ ಪ್ರದರ್ಶಿಸದ ಪರಿಣಾಮಇಂದಿಗೂ ಅದೇ ಪರಿಸ್ಥಿತಿ ಮುಂದುವರಿದಿದೆ. ಒಟ್ಟು 262 ಸದಸ್ಯರಿದ್ದು, 3317 ಪುಸ್ತಕಗಳಿವೆ. ನಿತ್ಯ ಗ್ರಾಮದ ಜನತೆಗ್ರಂಥಾಲಯಕ್ಕೆ ಬಹಳ ಉತ್ಸುಕತೆಯಿಂದಆಗಮಿಸುತ್ತಾರೆ.

ಆದರೆ ಓದುಗರಿಗೆ ಬೇಕಾಗುವ ದಿನಪತ್ರಿಕೆಗಳು, ಮಾಸಪತ್ರಿಕೆಗಳು ಮತ್ತು ಹೊಸ ಪುಸ್ತಕಗಳ ಕೊರತೆ ಕಾಡುತ್ತಿದೆ.ದಿನಪತ್ರಿಕೆ ಕಡಿಮೆ ಬರುವುದರಿಂದ ಇದ್ದ ಎರಡು ದಿನಪತ್ರಿಕೆಗಳನ್ನು ಎಲ್ಲರೂ ಓದುವಂತಾಗಿದೆ.ಗ್ರಾಮಸ್ಥರಿಂದ ಪ್ರತಿ ವರ್ಷ ಗ್ರಂಥಾಲಯ ಕರವೆಂದು ಲಕ್ಷಾಂತರ ರುಪಾಯಿ ವಸೂಲಿಮಾಡುತ್ತೀರಿ, ಆದರೆ ಕುಡಿಯುವ ನೀರು, ಸ್ವಚ್ಛತೆ ಸೇರಿ ಗ್ರಂಥಾಲಯಕ್ಕೆ ಬೇಕಾದಮೂಲ ಸೌಲಭ್ಯ ಕಲ್ಪಿಸುವಲ್ಲಿ ಹಿಂದೇಟು ಏಕೆ ಹಾಕುತ್ತೀರಿ ಎನ್ನುವುದು ಸಾರ್ವಜನಿಕರಪ್ರಶ್ನೆಯಾಗಿದೆ. ಗ್ರಾಮೀಣ ಪ್ರದೇಶದ ಯುವಕರಿಗೆ ಗ್ರಂಥಾಲಯ ಸದುಪಯೋಗ ಆಗುವನಿಟ್ಟಿನಲ್ಲಿ ಸ್ಪರ್ಧಾತ್ಮಕ ಪುಸ್ತಕಗಳ ಜತೆ ಎಲ್ಲ ದಿನಪತ್ರಿಕೆಗಳನ್ನು ಪೂರೈಸಲು ಗ್ರಾಪಂ ಆಡಳಿತ ಮುಂದಾಗಬೇಕಿದೆ.

 

ಅವ್ಯವಸ್ಥೆಯ ಆಗರವಾಗಿರುವ ಗ್ರಾಮದ ವಾಚನಾಲಯ ಕಟ್ಟಡ ದುರಸ್ತಿಗೊಳಿಸಬೇಕು, ಜತೆಗೆ ಮುಂಭಾಗದಲ್ಲಿನ ನೈರ್ಮಲ್ಯ ಸ್ವತ್ಛತೆ ಮಾಡುವುದಲ್ಲದೇ, ಮೂಲ ಸೌಲಭ್ಯಕ್ಕಾಗಿ ಗ್ರಾಪಂನ ಸಾಮಾನ್ಯ ಸಭೆಯಲ್ಲಿ ಆಡಳಿತ ಮಂಡಳಿಗೆ ಒತ್ತಾಯಿಸಲಾಗುವುದು. -ಬಸವರಾಜ ಡಗ್ಗಿ,ಗ್ರಾಪಂ ಸದಸ್ಯ

Advertisement

 

-ಡಿ.ಜಿ. ಮೋಮಿನ್‌

Advertisement

Udayavani is now on Telegram. Click here to join our channel and stay updated with the latest news.

Next