Advertisement
ಶ್ರೀನಿವಾಸಪುರ ತಾಲೂಕು ರೋಣೂರು ಹೋ ಬಳಿ ವ್ಯಾಪ್ತಿ ತಾಡಿಗೋಳ್ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 120 ಮಂದಿಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇದರಲ್ಲಿ 70 ಮಂದಿಹೆಣ್ಣು ಮಕ್ಕಳುಇದ್ದಾರೆ.10 ಕೊಠಡಿಗಳಿದ್ದರೂಬಹಳಷ್ಟು ಕೊಠಡಿಗಳು ಮಳೆಯಿಂದ ಸೋರುತ್ತಿವೆ .ಶಾಲೆಗೆ ಕೌಂಪೌಂಡ್ ಇದ್ದರೂ ಆಟದ ಮೈದಾನವಿಲ್ಲ ತಗ್ಗಿನಲ್ಲಿರುವ ಶಾಲೆಯ ಆವರಣದಲ್ಲಿ ಮಳೆಯಾದರೆ ಕೆರೆಯಾಗುತ್ತದೆ. ನೀರಿನ ವ್ಯವಸ್ಥೆ ಗ್ರಾಪಂ ಕಡೆಯಿಂದಮಾಡಿಕೊಟ್ಟಿದ್ದರೂ ಶುದ್ಧ ಕುಡಿವ ನೀರಿನ ಘಟಬೇಕಾಗಿದೆ. ಇಲ್ಲಿ ಪುಸ್ತಕಗಳ ಸೌಲಭ್ಯವಿದ್ದರೂ ಪ್ರತ್ಯೇಕ ಗ್ರಂಥಾಲಯವಿಲ್ಲ,5ಮಂದಿ ಶಿಕ್ಷಕರಿದ್ದು, ದೈಹಿಕ ಶಿಕ್ಷಕರು ಸೇರಿ ಇನ್ನು ಇಬ್ಬರ ಶಿಕ್ಷಕರ ಅವಶ್ಯಕತೆ ಇದೆಯೆಂದು ತಿಳಿದು ಬರುತ್ತದೆ. ಮುಖ್ಯವಾಗಿ ಇರುವ ಶೌಚಾಲಯ ಶಿಥಿಲವಾಗಿ ಒಂದು ವರ್ಷವಾಗುತ್ತಿದೆ ಹಾಗಾಗಿ ಬಾಲಕ, ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಜರೂರಾಗಿ ಆಗಬೇಕಿದೆ ಎನ್ನುವುದು ಶಿಥಿಲಗೊಂಡ ಶೌಚಾಲಯ ಉದಾಹರಣೆಯಾಗಿದೆ.
Related Articles
Advertisement
ಕೊಠಡಿಗಳಲ್ಲಿ ಮಳೆ ನೀರುಸೋರುತ್ತಿವೆ ಅವರಣಎತ್ತರಿಸಿ ಸಿಮೆಂಟ್ ನೆಲಹಾಸುಹಾಕಿದರೆಅನುಕೂಲವಾಗುತ್ತದೆ.ಕೆಲವು ಸೌಲಭ್ಯಗಳನ್ನು ಅಗತ್ಯವಾಗಿ ಕಲ್ಪಿಸಬೆಕಾಗಿದೆ.– ಸುನಂದಮ್ಮ ಮುಖ್ಯ ಶಿಕ್ಷಕಿ ಸ.ಹಿ.ಪ್ರಾ. ಶಾಲೆ. ತಾಡಿಗೋಳ್