Advertisement
ಹೌದು, ಮಿನಿ ಸರ್ಕಾರವೆಂದು ಪ್ರತಿಬಿಂಬಿಸುವ ಗ್ರಾಪಂ ಕೇಂದ್ರಕ್ಕೆ ಹೊಂದಿಕೊಂಡಿರುವ ಗ್ರಂಥಾ ಲಯದ ಗ್ರಾಮ ಪಂಚಾಯಿತಿ ಮತ್ತು ಗ್ರಂಥಾಲಯ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ತುಂಬ ಶೋಚನೀಯವಾಗಿದ್ದು,ಅವ್ಯವಸ್ಥೆಯಆಗರವಾಗಿದೆ. ಕನಿಷ್ಠ ಸೌಲಭ್ಯಗಳ ಕೊರತೆಯಿಂದ ನರಳುತ್ತಿರುವ ಗ್ರಾಮೀಣ ಗ್ರಂಥಾಲಯ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬ ಸ್ಥಿತಿಗೆ ತಲುಪಿದೆ.
Related Articles
Advertisement
ಶಿಥಿಲವಾಗಿರುವ ಚಾವಣಿ: ಒಂದೆಡೆ ಸಾರ್ವಜನಿಕ ಗ್ರಂಥಾಲಯದಲ್ಲಿ ಕನಿಷ್ಠ ಸೌಲಭ್ಯಗಳಿಲ್ಲ. ಮತ್ತೂಂ ದೆಡೆ ಗ್ರಂಥಾಲಯದ ಸ್ಥಿತಿ ಮಾತ್ರ ಶೋಚನೀಯ ವಾಗಿದ್ದು, ಚಾವಣಿ ಕಿತ್ತುಹೋಗಿ ಶಿಥಿಲವಾಗಿದೆ. ಕಬ್ಬಿಣದ ಸರಳುಗಳು ಎದ್ದು ಕಾಣುತ್ತಿದ್ದು, ನೋಡಲು ಭಯಾನಕ ಸ್ಥಿತಿಯಲ್ಲಿರುವ ಗ್ರಂಥಾಲಯದಲ್ಲಿಪ್ರವೇಶಕ್ಕೆ ಓದುಗರು ಮತ್ತು ವಿದ್ಯಾರ್ಥಿಗಳುಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ. ಗ್ರಂಥಾಲಯದಲ್ಲಿ ಪುಸ್ತಕಗಳನ್ನು ಇಟ್ಟುಕೊಳ್ಳಲು ಸೂಕ್ತ ವ್ಯವಸ್ಥೆಯಿಲ್ಲ. ಒಬ್ಬರನ್ನು ಗ್ರಂಥಪಾಲಕರನ್ನು ನೇಮಕ ಮಾಡಿರುವುದೇ ದೊಡ್ಡ ಸಾಧನೆ ಎಂದು ಗ್ರಂಥಾಲಯದಇಲಾಖಾಧಿಕಾರಿಗಳ ಕಾರ್ಯ ವೈಖರಿಯನ್ನು ಓದುಗರು ಟೀಕಿಸುವಂತಾಗಿದೆ.
ಭಕ್ತರಹಳ್ಳಿ ಗ್ರಂಥಾಲಯ ಬೇರೆಕಟ್ಟಡಕ್ಕೆ ಸ್ಥಳಾಂತರ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸುಮಾರು 151 ಗ್ರಂಥಾಲಯಗಳಿವೆ. 24 ಗ್ರಂಥಾಲಯ ಕಟ್ಟಡ ಸೌಲಭ್ಯಗಳನ್ನು ಹೊಂದಿದೆ. ಇನ್ನುಳಿದಂತೆ ಗ್ರಾಪಂ ಮಟ್ಟದಲ್ಲಿರುವ ಖಾಲಿ ಕಟ್ಟಡಗಳಲ್ಲಿ ಗ್ರಂಥಾಲಯಗಳು ನಡೆಯುತ್ತಿವೆ. ಗ್ರಾಪಂಗಳ ಮೂಲಕವೇ ಗ್ರಂಥಾಲಯಗಳ ನಿರ್ವಹಣೆ ಆಗುತ್ತಿದೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಗ್ರಂಥಾಲಯ ಅಧಿಕಾರಿಎಂ.ಶಂಕರ್ ತಿಳಿಸಿದ್ದಾರೆ.
ಉದಯವಾಣಿಗೆ ಪ್ರತಿಕ್ರಿಯಿಸಿದ ಅವರು, ಗ್ರಾಮೀಣ ಪ್ರದೇಶದಲ್ಲಿರುವ ಗ್ರಂಥಾಲಯದಲ್ಲಿ 7 ಸಾವಿರ ರೂ. ಗೌರವಧನ ನೀಡಿ ಒಬ್ಬರನ್ನು ಗ್ರಂಥಪಾಲಕರನ್ನು ಸರ್ಕಾರ ನೇಮಿಸಿದೆ. ಮಾಸಿಕಪತ್ರಿಕೆಗಳ ಖರೀದಿಗಾಗಿ 400 ರೂ. ನೀಡುತ್ತಿದ್ದೇವೆ. ಸ್ವತ್ಛತೆಗಾಗಿ 100 ರೂ. ನೀಡುತ್ತಿದ್ದೇವೆ. ಭಕ್ತರರಹಳ್ಳಿಯ ಗ್ರಂಥಾಲಯವನ್ನು ಬೇರೆ ಕಟ್ಟಡದಲ್ಲಿ ಸ್ಥಳಾಂತರಿಸುತ್ತೇವೆ. ಅವ್ಯವಸ್ಥೆಗಳನ್ನು ಸರಿಪಡಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ಪಂಚಾಯಿತಿ ಅಧಿಕಾರಿಗಳು ಹೇಳಿದರು.
ಪ್ರತ್ಯೇಕ ಕಟ್ಟಡದ ಸೌಲಭ್ಯ ಇಲ್ಲ : ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಭಕ್ತರಹಳ್ಳಿ ಗ್ರಾಮದಲ್ಲಿ 1994-95ನೇ ಸಾಲಿನಲ್ಲಿನಿರ್ಮಿಸಿರುವ ಗ್ರಾಮ ಪಂಚಾಯಿತಿ ಕಟ್ಟಡವನ್ನುಶಾಸಕ ವಿ.ಮುನಿಯಪ್ಪ ಹಾಗೂ ಅಂದಿನ ಸಂಸದ ಆರ್. ಎಲ್.ಜಾಲಪ್ಪ ಅವರು ಉದ್ಘಾಟಿಸಿದ್ದರು. ಅದೇ ಕಟ್ಟಡದಲ್ಲಿ ಇದೀಗ ಗ್ರಾಮೀಣ ಗ್ರಂಥಾಲಯನಡೆಯುತ್ತಿರುವುದು ಮಾತ್ರ ವಿಶೇಷ ಗ್ರಾಮದಲ್ಲಿ ಗ್ರಂಥಾಲಯಕ್ಕಾಗಿ ಪ್ರತ್ಯೇಕ ಕಟ್ಟಡದ ಸೌಲಭ್ಯವಿಲ್ಲ.
ಗ್ರಾಪಂ ವ್ಯಾಪ್ತಿಯಲ್ಲಿರುವ ಹಳೇ ಸರ್ಕಾರಿ ಶಾಲಾಕಟ್ಟಡವನ್ನು ನವೀ ಕರಣಗೊಳಿಸಿ ಅಲ್ಲಿ ಸಾರ್ವಜನಿಕ ಗ್ರಂಥಾಲಯವನ್ನು ಸ್ಥಳಾಂತರಿಸುವಯೋಜನೆರೂಪಿಸಿ ಕೆಲವೊಂದು ದುರಸ್ತಿ ಕಾಮಗಾರಿಗಳನ್ನು ನಡೆಸಲಾಗಿದೆ. ಶೀಘ್ರವೇ ಗ್ರಂಥಾಲಯ ಸ್ಥಳಾಂತರಿಸಿ ಓದುಗರಿಗೆ ಪೂರಕವಾತಾವರಣ ಮತ್ತು ಅಗತ್ಯಸೌಲಭ್ಯಗಳನ್ನುಕಲ್ಪಿಸಲುಕ್ರಮ ಕೈಗೊಳ್ಳುತ್ತೇವೆ. – ಯಮುನಾ ರಾಣಿ, ಪಿಡಿಒ ಭಕ್ತರಹಳ್ಳಿ ಗ್ರಾಪಂ, ಶಿಡ್ಲಘಟ್ಟ ತಾಲೂಕು
ಗ್ರಾಮದಲ್ಲಿರುವ ಸಾರ್ವಜನಿಕ ಗ್ರಂಥಾ ಲಯವನ್ನು ನವೀಕರಣಗೊಳ್ಳುವಕಟ್ಟಡದಲ್ಲಿ ಸ್ಥಳಾಂತರಿಸಲು ಈಗಾಗಲೇ ಕ್ರಮಕೈಗೊಳ್ಳಲಾಗಿದೆ.ಓದುಗರಿಗೆ ಸಕಲ ಸೌಲಭ್ಯಕಲ್ಪಿಸಲು ಯೋಜನೆ ರೂಪಿಸಿದ್ದೇವೆ. ಮೊದಲು ವ್ಯವಸ್ಥೆಗಳನ್ನು ಸುಧಾರಿಸಿ ಆ ನಂತರ ಗ್ರಂಥಾಲಯ ಅಭಿವೃದ್ಧಿಗೊಳಿಸಲುಕ್ರಮ ಕೈಗೊಳ್ಳುತ್ತೇವೆ. – ಚಿದಾನಂದಮೂರ್ತಿ, ಸದಸ್ಯರು, ಭಕ್ತರಹಳ್ಳಿ ಗ್ರಾಪಂ
ಗ್ರಾಮ ಪಂಚಾಯತಿಯಲ್ಲಿ ಗ್ರಂಥಾಲಯ ಇದ್ದರೂ ಸುಸಜ್ಜಿತವಾಗಿಲ್ಲ. ಗ್ರಾಮೀಣ ಯುವಕರನ್ನು ಆಕರ್ಷಿಸುವಂತಹ ಪುಸ್ತಕಗಳು ಇರಲಿಕ್ಕಿಲ್ಲ. ಆದರೂ ಗ್ರಾಪಂ ಪಿಡಿಒಗಳು ಗ್ರಂಥಾಲಯ ಅಭಿವೃದ್ಧಿಗೆಕ್ರಮಕೈಗೊಳ್ಳಬೇಕು. ಗ್ರಂಥಾಲಯದ ಸೌಲಭ್ಯಎಲ್ಲರಿಗೆಸಿಗುವಂತಾಗಬೇಕು.– ಎಲ್.ಕಾಳಪ್ಪ, ಕಾರ್ಯದರ್ಶಿ ಬಿಎಂವಿ ವಿದ್ಯಾಸಂಸ್ಥೆ ಭಕ್ತರಹಳ್ಳಿ
-ಎಂ.ಎ.ತಮೀಮ್ ಪಾಷ