Advertisement

Lack of facility: 19 ವರ್ಷ ಕಳೆದರೂ ಬಡಾವಣೆಗಿಲ್ಲ ಸೌಕರ್ಯ

04:19 PM Oct 28, 2023 | Team Udayavani |

ಬಾಗೇಪಲ್ಲಿ; ಪಟ್ಟಣದ ಹೊರವಲಯದಲ್ಲಿ ಸುಮಾರು 19 ವರ್ಷಗಳ ಹಿಂದೆ ಪುರಸಭೆ ವತಿಯಿಂದ ನಿರ್ಮಾಣ ಮಾಡಿರುವ ಹೊಸ ಬಡಾವಣೆಯಲ್ಲಿ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದ್ದು, ಇಲ್ಲಿ ಅಭಿವೃದ್ಧಿ ಕಾಣದಾಗಿದೆ. ಪಟ್ಟಣದ ಹೊರವಲಯದ ತೀಮ್ಮಾಕಲಪಲ್ಲಿ ಗ್ರಾಮದ ಬಳಿ ಮನೆ ವಂಚಿತ ಫಲಾಭವಿಗಳಿಗೆ ಸರ್ಕಾರ ನಿವೇಶನಗಳನ್ನು ನೀಡಿ ಮನೆ ನಿರ್ಮಾಣ ಮಾಡಿಕೊಳ್ಳಲು ಆರ್ಥಿಕ ನೆರವು ಒದಗಿಸಿದೆ.

Advertisement

ಈ ಹಿನ್ನೆಲೆಯಲ್ಲಿ ಪಟ್ಟಣದ ಸಾರ್ವಜನಿಕರು ಸುಮಾರು 400 ನಿವೇಶನಗಳನ್ನು ಪಡೆದು ಈಗಾಗಲೇ 300 ಮನೆಗಳನ್ನು ನಿರ್ಮಾಣ ಮಾಡಿಕೊಂಡು ಕುಟುಂಬ ಸಮೇತ ಬಡಾವಣೆಯಲ್ಲಿ ವಾಸ ಮಾಡುತ್ತಿದ್ದಾರೆ. ಆದರೆ, ಬಡಾವಣೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆಯಿಂದ ತಾಂಡವಾಡುತ್ತಿದೆ.

ವಿಷಜಂತುಗಳ ಕಾಟ: ಪಟ್ಟಣಕ್ಕೆ ಹೊಂದಿಕೊಂಡಿರುವ ಬಡಾವಣೆಗೆ ಸರಿಯಾದ ರಸ್ತೆ ಮಾರ್ಗವಿಲ್ಲ, ಬೀದಿದೀಪ ಹಾಗೂ ಮನೆಗಳಿಗೆ ವಿದ್ಯುತ್‌ ಮರೀಚೆಕೆಯಾಗಿದೆ. ಕುಡಿಯುವ ನೀರಿಗಾಗಿ ತೀಮ್ಮಾಕಲಪಲ್ಲಿ ಗ್ರಾಮಕ್ಕೆ ಸುಮಾರು 1ಕೀ.ಮೀ.ಪಾದಯಾತ್ರೆ ಮಾಡಿ ನೀರು ತರಬೇಕಾಗಿದೆ. ರಾತ್ರಿ ವೇಳೆಯಲ್ಲಿ ಹಾವು ಮತ್ತು ಚೇಳುಗಳ ಕಾಟ ವಿಪರೀತವಾಗಿದ್ದು, ಮಕ್ಕಳು, ಮಹಿಳೆಯರು ಹಾಗೂ ವೃದ್ಧರೂ ಭಯದ ವಾತಾವರಣದಲ್ಲಿ ಒಡಾಡುತ್ತಿದ್ದಾರೆ.ಈ ಬಡಾವಣೆಯಲ್ಲಿ 1500 ಜನಸಂಖ್ಯೆ ಇದ್ದು, ಸರ್ಕಾರಿ ಶಾಲೆ, ಅಂಗನವಾಡಿ ಕೇಂದ್ರಗಳು ಇಲ್ಲದಿರುವುದರಿಂದ ಮಕ್ಕಳು ಪ್ರಾಥಮಿಕ ಹಂತದಲ್ಲೆ ಶಿಕ್ಷಣದಿಂದ ವಂಚಿತರಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಚರಂಡಿ ವ್ಯವಸ್ಥೆ ಇಲ್ಲ: ಬಡಾವಣೆಯಲ್ಲಿ ಚರಂಡಿಗಳ ವ್ಯವಸ್ಥೆ ಇಲ್ಲದೆ ಮನೆಗಳಿಂದ ಹೊರ ಬರುವ ಕೊಚ್ಚೆ ನೀರು ರಸ್ತೆ ಸಣ್ಣ ಕಾಲುವೆಗಳ ಮೂಲಕ ಹೊರ ಬಿಡಲಾಗುತ್ತಿದೆ ಇದರಿಂದ ಬಡಾವಣೆಯಲ್ಲಿ ಸೊಳ್ಳೆಗಳ ಹಾವಳಿ ಹೆಚ್ಚಾಗಿದೆ.

ನನ್ನ ಅನುದಾನದಲ್ಲಿ ಈ ಬಡಾವಣೆಯ ಅಭಿವೃದ್ಧಿಗೆ 1ಕೋಟಿ ರೂ. ಬಿಡುಗಡೆ ಮಾಡಿದ್ದೇನೆ. ಆದರೆ ಈ ಬಡಾವಣೆಯ ನಿವೇಶನಗಳು ಪುರಸಭೆ ವ್ಯಾಪ್ತಿಯಲ್ಲಿವೆ. ಜಮೀನು ಪರಗೋಡು ಗ್ರಾಪಂ ವ್ಯಾಪ್ತಿಯಲ್ಲಿವೆ. ಇದರಿಂದಲೇ ಈ ಅನುದಾನ ಖರ್ಚು ಮಾಡಿ ಅಭಿವೃದ್ಧಿ ಕೆಲಸಗಳನ್ನು ಮಾಡಲು ಸಾಧ್ಯವಾಗುತ್ತಿಲ್ಲ. ಇದನ್ನು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಪ್ರತ್ಯೇಕವಾಗಿ ಗೆಜಟ್‌ ನೋಟಿಫಿಕೆಷನ್‌ ಮಾಡಿಸಿದ ನಂತರ ಅಭಿವೃದ್ಧಿ ಕೆಲಸಗಳು ಮಾಡಬಹುದಾಗಿದೆ. – ಎಸ್‌.ಎನ್‌.ಸುಬ್ಟಾರೆಡ್ಡಿ, -ಶಾಸಕರು

Advertisement

ಜಿ.ಎಂ.ಗುರುಮೂರ್ತಿ

Advertisement

Udayavani is now on Telegram. Click here to join our channel and stay updated with the latest news.

Next