Advertisement

ಪುರಸಭೆಯಾಗಿ ಮೇಲ್ದರ್ಜೆಗೇರಿದರೂ ಸಿಕ್ಕಿಲ್ಲ ಸೌಲಭ್ಯ

02:33 PM Feb 22, 2020 | Suhan S |

ಕಾರಟಗಿ: ಗ್ರಾಪಂನಿಂದ ಪುರಸಭೆಯಾಗಿ ಮೇಲ್ದರ್ಜೆಗೇರಿದರೂ ಪಟ್ಟಣದ ಕೆಲ ವಾರ್ಡ್‌ ಗಳಲ್ಲಿ ಮೂಲಸೌಕರ್ಯ ಇಲ್ಲದಂತಾಗಿವೆ. ಪಟ್ಟಣದ 2 ಮತ್ತು 3ನೇ ವಾರ್ಡ್‌ನಲ್ಲಿ ಕುಡಿವ ನೀರಿಗಾಗಿ ಕೊರೆಯಿಸಿದ ಬೋರ್‌ವೆಲ್‌ ಗಳಿವೆ. ಆದರೂ ಸಮರ್ಪಕ ಕುಡಿವ ನೀರು ಪೂರೈಕೆಯಿಲ್ಲ. ಕಿರು ನೀರಿನ ತೊಟ್ಟಿಗಳಿವೆ ಆದರೆ ಸಮರ್ಪಕ ನಿರ್ವಹಣೆ ಇಲ್ಲ. ಎರಡು ಕೈಪಂಪ್‌ ಕೊಳವೆಬಾವಿಗಳಿವೆ ಅದರಲ್ಲಿ ಒಂದು ದುರಸ್ತಿಗೀಡಾಗಿ 7 ತಿಂಗಳು ಕಳೆದರೂ ಪುರಸಭೆ ಸಿಬ್ಬಂದಿ ದುರಸ್ತಿಗೆ ಮುಂದಾಗಿಲ್ಲ.

Advertisement

ಗ್ರಾಪಂ ಅಧಿಕಾರವ ಧಿಯಲ್ಲಿ ನಿರ್ಮಿಸಿದ ಮಹಿಳಾ ಶೌಚಾಲಯವಿದೆ. ಆದರೂ ಪುರಸಭೆ ವತಿಯಿಂದ 2, 3ನೇ ವಾರ್ಡ್‌ ಗಳಲ್ಲಿ 2017-18ನೇ ಸಾಲಿನ 14ನೇ ಹಣಕಾಸು ಯೋಜನೆಯಡಿ ನಿರ್ಮಿಸಿದ ಮಹಿಳಾ ಸಮುದಾಯ ಶೌಚಾಲಯಗಳಿಗೆ ನೀರು ಪೂರೈಕೆಯಿಲ್ಲ. ದೀಪದ ವ್ಯವಸ್ಥೆ ಇಲ್ಲ. ಇದರಿಂದಾಗಿ ವಾರ್ಡ್‌ ಮಹಿಳೆಯರು ಹಳೆಯ ಶೌಚಾಲಯವನ್ನೇ ಬಳಸುತ್ತಿದ್ದಾರೆ. ಬೀದಿದೀಪಗಳ ವ್ಯವಸ್ಥೆ ಇಲ್ಲವಾಗಿದೆ.

ನಿರ್ವಹಣೆಗಾರರ ತಾರತಮ್ಯ ನೀತಿಯಿಂದ ಕೆಲ ವಾರ್ಡ್‌ಗಳಲ್ಲಿ ಸೌಲಭ್ಯಗಳು ಕಾಣುವುದು ಅಪರೂಪ. ಬೀದಿ, ದೀಪಗಳಿಲ್ಲದೆ ವಾರ್ಡ್‌ ನಲ್ಲಿ ಕತ್ತಲಲ್ಲಿ ಓಡಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇನ್ನು ಚರಂಡಿಗಳ ತ್ಯಾಜ್ಯಗಳ ನಿರ್ವಹಣೆ ಇಲ್ಲದೇ ಸೊಳ್ಳೆಗಳು ಹುಟ್ಟಿಕೊಂಡು ಸಾಂಕ್ರಾಮಿಕ ರೋಗಗಳು ಕಾಣಿಸಿಕೊಳ್ಳುತ್ತಿವೆ. ಈಗಾಗಲೇ ವಾರ್ಡ್‌ನ ಹಲವಾರು ಜನ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಸಮಸ್ಯೆಗಳ ಕುರಿತು ವಾರ್ಡ್‌ ಸದಸ್ಯರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಪುರಸಭೆಗೆ ಸರಕಾರದಿಂದ ಸಾಕಷ್ಟು ಅನುದಾನ ಬರುತ್ತಿದ್ದರೂ ಅಭಿವೃದ್ಧಿ ಕಾರ್ಯಗಳಿಗೆ ಸಮರ್ಪಕವಾಗಿ ವಿನಿಯೋಗವಾಗದೇ ದುರ್ಬಳಕೆಯಾಗುತ್ತಿದೆ. ಅಲ್ಲದೆ ಸ್ಥಳೀಯವಾಗಿ ಪುರಸಭೆಗೆ ಸಾಕಷ್ಟು ಅದಾಯವಿದೆ ಆದರೂ ಅಧಿಕಾರಿಗಳ ನಿರ್ಲಕ್ಷ್ಯ ‌ದಿಂದ ಅಭಿವೃದ್ಧಿ ಶೂನ್ಯವಾಗಿದೆ ಎನ್ನುತ್ತಾರೆ ವಾರ್ಡ್‌ ನಿವಾಸಿಗಳು. ಯಾರಿಗೆ ಹೇಳಿದರೂ ವಾರ್ಡ್‌ ಸಮಸ್ಯೆ ಪರಿಹಾರವಾಗಿಲ್ಲ. ನೀರಿಗಾಗಿ ಹೊಲಗದ್ದೆಗಳಿಗೆ ಅಲೆಯುವುದು ವಾರ್ಡ್‌ ಸದಸ್ಯರಿಗೆ ನಿತ್ಯ ಕಂಡರೂ ಕೂಡ ಚಕಾರವೆತ್ತುತ್ತಿಲ್ಲ. ವಾರ್ಡ್‌ ಗೆ ಕಾಂಕ್ರೀಟ್‌ ರಸ್ತೆ ನಿರ್ಮಾಣ ಮಾಡಿ, ಕುಡಿವ ನೀರಿಗೆ ಪೈಪ್‌ಲೈನ್‌ ಮಾಡಿಸಿ ಎಂದು ಮನವಿ ಮಾಡಿದ್ದೇವೆ ಆದರೂ ನೀರು ಪೂರೈಕೆ ಮಾಡುತ್ತಿಲ್ಲ ಎಂದು ವಾರ್ಡ್‌ ನಿವಾಸಿ ಕನಕಮ್ಮ ಅಳಲು ತೋಡಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next