Advertisement

ಡಯಾಲಿಸಿಸ್‌ಗೆ ತಿಂಗಳ ಕಾಲ ರೋಗಿಗಳ ಅಲೆದಾಟ

03:35 PM Sep 16, 2020 | Suhan S |

ಕೊಳ್ಳೇಗಾಲ: ಪಟ್ಟಣದ ಉಪವಿಭಾಗ ಆಸ್ಪತ್ರೆಯಲ್ಲಿ ರೋಗಿಗಳು ಡಯಾಲಿಸಿಸ್‌ (ರಕ್ತ ಶುದ್ಧೀಕರಣ) ಮಾಡಿಸಿಕೊಳ್ಳಲು ತಿಂಗಳ ಕಾಲ ಅಲೆದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ಈ ಹಿಂದೆ ಖಾಸಗಿ ಆಸ್ಪತ್ರೆಗಳಲ್ಲಿ ಡಯಾಲಿಸಿಸ್‌ ಮಾಡಿಸಿಕೊಳ್ಳುತ್ತಿದ್ದ ರೋಗಿಗಳು ಕೋವಿಡ್ ಬಿಕ್ಕಟ್ಟಿನಿಂದಾಗಿ ಆರ್ಥಿಕ ಸಮಸ್ಯೆಗೆ ಸಿಲುಕಿ ಸರ್ಕಾರಿ ಆಸ್ಪತ್ರೆಗಳಿಗೆ ಧಾವಿಸುತ್ತಿದ್ದಾರೆ. ಇದರಿಂದ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಈ ನಡುವೆ ಆಸ್ಪತ್ರೆಯಲ್ಲಿರುವ 5 ಡಯಾಲಿಸಿಸ್‌ ಯಂತ್ರಗಳ ಪೈಕಿ2 ಯಂತ್ರಗಳುಕೆಟ್ಟುಹಲವುತಿಂಗಳುಗಳು ಕಳೆದಿವೆ. ಈ ಯಂತ್ರಗಳು ಇದುವರೆಗೂ ದುರಸ್ತಿ ಆಗಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ದುರಸ್ತಿಯಾಗುವ ಲಕ್ಷಣಗಳು ಕಂಡು ಬರುತ್ತಿಲ್ಲ. ಹೀಗಾಗಿ ರೋಗಿಗಳು ಡಯಾಲಿಸಿಸ್‌ಗಾಗಿ ಚಾತಕ ಪಕ್ಷಿಯಂತೆ ಕಾಯಬೇಕಾಗಿದೆ.

ಅತಂತ್ರ ಪರಿಸ್ಥಿತಿ: ಡಯಾಲಿಸಿಸ್‌ಗೆ ಒಳಪಡುವ ರೋಗಿಗಳ ಪೈಕಿ ಹೆಚ್ಚು ಮಂದಿ ಗ್ರಾಮೀಣಪ್ರದೇಶದವರೇ ಆಗಿದ್ದು, ಆರ್ಥಿಕ ಸಮಸ್ಯೆಗಳಿಗೆ ಸಿಲುಕಿರುವುದರಿಂದ ಖಾಸಗಿ  ಆಸ್ಪತ್ರೆಯಲ್ಲಿ ಡಯಾಲಿಸಿಸ್‌ ಮಾಡಿಸಿಕೊಳ್ಳಲು ಆಗುತ್ತಿಲ್ಲ. ಇತ್ತ ಸರ್ಕಾರಿ ಆಸ್ಪತ್ರೆಯಲ್ಲೂ ಸಕಾಲದಲ್ಲಿ ಚಿಕಿತ್ಸೆ ದೊರೆಯದೇ ಅತಂತ್ರ ಪರಿಸ್ಥಿತಿ ಅನುಭವಿಸುತ್ತಿದ್ದಾರೆ. ಹೀಗಾಗಿ ಬೇರೆ ದಾರಿ ಇಲ್ಲದೇ ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆಗೆ ತೆರಳಿ 3 ರಿಂದ 4 ಸಾವಿರ ರೂ. ಪಾವತಿಸಿ ಡಯಾಲಿಸಿಸ್‌ ಮಾಡಿಸಿಕೊಳ್ಳುತ್ತಿದ್ದಾರೆ.

ನೋಂದಣಿ: ಈಗಾಗಲೇ ಡಯಾಲಿಸ್‌ಗಾಗಿ27 ರೋಗಿಗಳು ನೋಂದಾಯಿಸಿಕೊಂಡಿದ್ದು, ದಿನನಿತ್ಯ ಆಸ್ಪತ್ರೆಗೆ ಅಲೆಯುವಂತಾಗಿದೆ. ಯಂತ್ರ ಕೆಟ್ಟಿರುವ ಕಾರಣ ಬಂದ ದಾರಿಗೆ ಸುಂಕವಿಲ್ಲದಂತೆ ವಾಪಸ್‌ ತೆರಳುತ್ತಿರುವುದು ಸಾಮಾನ್ಯವಾಗಿದೆ.

ಯಂತ್ರ ಸರಿಪಡಿಸಿ: ದುಬಾರಿ ವೆಚ್ಚ ನೀಡಿಖಾಸಗಿ ಆಸ್ಪತ್ರೆಯಲ್ಲಿ ಡಯಾಲಿಸಿಸ್‌  ಮಾಡಿಸಿಕೊಳ್ಳಲು ಆಗುತ್ತಿಲ್ಲ. ಹೀಗಾಗಿ ಉಪವಿಭಾಗ ಆಸ್ಪತ್ರೆಯಲ್ಲಿ ಕೆಟ್ಟಿರುವ ಯಂತ್ರ ಗಳನ್ನು ತ್ವರಿತವಾಗಿ ದುರಸ್ತಿ ಪಡಿಸಿ ಸಕಾಲದಲ್ಲಿ ಡಯಾಲಿಸಿಸ್‌ ಮಾಡಿಕೊಳ್ಳಲು ಅವಕಾಶ ನೀಡಬೇಕು. ಈ ಕುರಿತು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Advertisement

ಕೋವಿಡ್ ದಿಂದ ಯಂತ್ರಗಳು ದುರಸ್ತಿ ಆಗಿಲ್ಲ  :  ರಾಜ್ಯದವಿವಿಧಆಸ್ಪತ್ರೆಗಳಲ್ಲಿಡಯಾಲಿಸಿಸ್‌ಯಂತ್ರ ಗಳು ಕೆಟ್ಟಿವೆ. ಅದೇ ರೀತಿ ಜಿಲ್ಲೆಯ ಎಲ್ಲಾ ಆಸ್ಪತ್ರೆಗಳಲ್ಲೂ ಯಂತ್ರಗಳು ಕೂಡ ಕಾರ್ಯನಿರ್ವಹಿಸುತ್ತಿಲ್ಲ.ಇವುಗಳನ್ನು ಸರಿಪಡಿಸಲು ತಮಿಳುನಾಡಿನ ಚೆನ್ನೈ ನಿಂದ ತಂತ್ರಜ್ಞರು ಬರಬೇಕಾಗಿದೆ. ಆದರೆ, ಪ್ರಸ್ತುತ ಕೋವಿಡ್ ಸೋಂಕಿನ ಭಯದಿಂದ ತಂತ್ರಜ್ಞರು ಬಾರದ ಕಾರಣಯಂತ್ರಗಳನ್ನುದುರಸ್ತಿಪಡಿಸಲಾಗುತ್ತಿಲ್ಲ. ಈ ಕುರಿತು ಜಿಲ್ಲಾ ವೈದ್ಯಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ ಎಂದು ಉಪ ವಿಭಾಗ ಆಸ್ಪತ್ರೆ ಆಡಳಿತಾಧಿಕಾರಿ ಡಾ| ಗಣೇಶ್‌ ತಿಳಿಸಿದ್ದಾರೆ.

ಶೀಘ್ರಯಂತ್ರ ದುರಸ್ತಿ: ಮಹೇಶ್‌ :ಸರ್ಕಾರಿ ಉಪ ವಿಭಾಗ ಆಸ್ಪತ್ರೆಯ ಆಡಳಿತಾಧಿಕಾರಿಯೊಂದಿಗೆ ಡಯಾಲಿಸಿಸ್‌ ಯಂತ್ರ ಕೆಟ್ಟಿರುವ ಬಗ್ಗೆ ಚರ್ಚೆ ಮಾಡಲಾಗಿದೆ. ಶೀಘ್ರದಲ್ಲಿ ಯಂತ್ರಗಳನ್ನು ದುರಸ್ತಿಪಡಿಸಿ ರೋಗಿಗಳಿಗೆ ಸಕಾಲದಲ್ಲಿ ಚಿಕಿತ್ಸೆಪಡೆಯಲು ಅವಕಾಶಕಲ್ಪಿಸಿಕೊ ಡಲಾಗುವುದು ಎಂದು ಶಾಸಕ ಎನ್‌.ಮಹೇಶ್‌ ತಿಳಿಸಿದ್ದಾರೆ.

ಮೂತ್ರಪಿಂಡ ಸಮಸ್ಯೆಯಿಂದಾಗಿ ನಾನುಕಳೆದ ಎರಡು ವರ್ಷಗಳಿಂದಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಯಲ್ಲಿ ಡಯಾ ಲಿಸಿಸ್‌ ಮಾಡಿಸಿಕೊಳ್ಳುತ್ತಿದ್ದೇನೆ.ಆದರೆ, ಇದೀಗಯಂತ್ರಗಳು ಕೆಟ್ಟಿರುವುದರಿಂದ ಹೆಚ್ಚು ಸಮಯ ಕಾಯಬೇಕಾದ ಪರಿಸ್ಥಿತಿ ಇದೆ. ಮಹದೇವ್‌(70), ಮಧುವನಹಳ್ಳಿ ನಿವಾಸಿ

ಈ ಹಿಂದೆ ನಾನುಖಾಸಗಿ ಆಸ್ಪತ್ರೆಯಲ್ಲಿ ಡಯಾಲಿಸಿಸ್‌ ಮಾಡಿಸಿಕೊಳ್ಳುತ್ತಿದ್ದೆ. ಪ್ರಸ್ತತ ಕೋವಿಡ್ ಬಿಕ್ಕಟ್ಟಿನಿಂದ ಆರ್ಥಿಕ ಸಮಸ್ಯೆ ಇರುವುದರಿಂದ ಸರ್ಕಾರಿ ಆಸ್ಪತ್ರೆಯಲ್ಲಿ ಮೂರು ತಿಂಗಳ ಹಿಂದೆ ನೋಂದಾಯಿಸಿಕೊಂಡಿದ್ದರೂ ಇದುವರೆಗೂ ಡಯಾಲಿಸಿಸ್‌ಗೆ ಅವಕಾಶ ಸಿಕ್ಕಿಲ್ಲ. ಲೋಕೇಶ್‌(63), ಕೊಳ್ಳೇಗಾಲ ಪಟ್ಟಣ ನಿವಾಸಿ

 

 

ಡಿ.ನಟರಾಜು

Advertisement

Udayavani is now on Telegram. Click here to join our channel and stay updated with the latest news.

Next