Advertisement

ಸರ್ಕಾರಿ ಶಾಲೆಗೆ ಸೌಲಭ್ಯ ಕೊರತೆ

05:21 PM Jan 24, 2020 | Suhan S |

ದೋಟಿಹಾಳ: ಮಕ್ಕಳ ಶಿಕ್ಷಣಕ್ಕಾಗಿ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತರುತ್ತಿದೆಯೇ ಹೊರತು. ಶಾಲೆಯ ಮೂಲ ಉದ್ದೇಶವನ್ನೇ ಮರೆಯುತ್ತಿದೆ. ಇದರಿಂದ ಮಕ್ಕಳು ಉತ್ತಮ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಸರಕಾರ ಮಕ್ಕಳ ಶಿಕ್ಷಣಕ್ಕೆ ಶಿಕ್ಷಕರು ನೀಡದೆ. ಬಿಸಿಯೂಟ, ಕ್ಷೀರಭಾಗ್ಯ ಇನ್ನಿತರ ಯೋಜನೆಗಳನ್ನು ಮಾತ್ರ ಜಾರಿಗೆ ತಂದು ಶಾಲೆ ಹಾಜರಾತಿ ಹೆಚ್ಚಿಸುವ ಪ್ರಯತ್ನಿಸುತ್ತಿದೆ ಹೊರತು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಲು ಮುಂದಾಗುತ್ತಿಲ್ಲ ಎಂಬುದು ಸಾರ್ವಜನಿಕರ ಅಭಿಪ್ರಾಯ.

Advertisement

ಮಾದಪೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 4-5 ತಿಂಗಳಿನಿಂದ ವಿಷಯವಾರು ಶಿಕ್ಷಕರಿಲ್ಲದೇ, ಶಿಕ್ಷಣದಿಂದ ಮಕ್ಕಳ ಮುಂದಿನ ಭವಿಷ್ಯ ಅತಂತ್ರವಾಗಿದೆ. ಈ ಶಾಲೆಯಲ್ಲಿ ಒಟ್ಟು 123 ಮಕ್ಕಳಿದ್ದು 5 ಶಿಕ್ಷಕರ ಹುದ್ದೆಗಳಲ್ಲಿ ಸದ್ಯ ಇಬ್ಬರು ಮಾತ್ರ ಇದ್ದಾರೆ. ಮೂರು ಹುದ್ದೆಗಳು ಖಾಲಿ ಇವೆ. ಒಬ್ಬ ಶಿಕ್ಷಕಿ ಹೆರಿಗೆ ರಜೆಯ ಮೇಲೆ ತರಳಿದ್ದಾರೆ. ಉಳಿದ ಒಬ್ಬ ಶಿಕ್ಷಕ ಶಾಲೆಯ ದಾಖಲಾತಿಗಳು ಸರಿಪಡಿಸಿಕೊಂಡು. ಇಬ್ಬರ ಅತಿಥಿ ಶಿಕ್ಷಕರ ನಡುವೆ ಶಾಲೆ ನಡೆಯುತ್ತಿದೆ.

1-3ನೇ ತರಗತಿಗೆ ಒಟ್ಟು 63 ಮಕ್ಕಳಿದ್ದಾರೆ. ಎರಡು ನಲಿ-ಕಲಿ ತರಗತಿಗಳನ್ನು ಮಾಡಿಕೊಂಡು ಶಾಲಾ ಪ್ರಭಾರಿ ಮುಖ್ಯಗುರುಗಳು ಪಾಠ ಮಾಡುತ್ತಾರೆ. ಉಳಿದ 4, 5, 6 ಮತ್ತು 7ನೇ ತರಗತಿಗಳ ಮಕ್ಕಳಿಗೆ ಅತಿಥಿ ಶಿಕ್ಷಕರೇ ಪಾಠ ಮಾಡಬೇಕಾಗಿದೆ. ಇದರಿಂದಾಗಿ ವಿಷಯವಾರು ಶಿಕ್ಷಕರಿಲ್ಲದ ಕಾರಣ ಗುಣಮಟ್ಟದ ಶಿಕ್ಷಣದಿಂದ ಮಕ್ಕಳು ವಂಚಿತರಾಗುತ್ತಿದ್ದಾರೆ. ಸರಕಾರಿ ಶಾಲೆಯನ್ನು ಅತಿಥಿ ಶಿಕ್ಷಕರ ಮೇಲೆ ಶಾಲೆ ಬಿಟ್ಟು ಹೋಗುವಂತ್ತಿಲ್ಲ. ಆದರೆ ಇಲ್ಲಿ ಶಾಲೆ ಕೆಲಸದ ನಿಮಿತ್ಯ ಪ್ರಭಾರಿ ಮುಖ್ಯಗುರು ಹೊರಗೆ ಹೋದರೆ ಅತಿಥಿ ಶಿಕ್ಷಕರೇ ಶಾಲೆಯನ್ನು ಮುನ್ನಡೆಸಿಕೊಂಡು ಹೋಗ ಬೇಕಾಗಿರುವುದು ಅನಿವಾರ್ಯವಾಗಿದೆ.

ಸರಕಾರ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುವ ಬದಲು ಮಕ್ಕಳ ಅನುಪಾತದಲ್ಲಿ ಎಲ್ಲಾ ಶಾಲೆಗಳಿಗೆ ಶಿಕ್ಷಕರನ್ನು ನಿಯೋಜಿಸಲು ಕ್ರಮಕೈಗೊಳ್ಳಬೇಕು ಎಂಬುದು ಪ್ರಜ್ಞಾವಂತ ನಾಗರಿಕ ಕಳಕಳಿಯಾಗಿದೆ. ನಮ್ಮ ಶಾಲೆಯ ಎಂಟು ಹುದ್ದೆಗಳಲ್ಲಿ ಸದ್ಯ ಇಬ್ಬರು ಮಾತ್ರ ಇದ್ದೇವೆ. ಶಿಕ್ಷಕಿಯೊಬ್ಬರು ಹೆರಿಗೆ ರಜೆಯಲ್ಲಿದ್ದಾರೆ. ಈಗ ನಾನು ಮತ್ತು ಇಬ್ಬರು ಅತಿಥಿ ಶಿಕ್ಷಕರು ಶಾಲೆಯಲ್ಲಿದ್ದೇವೆ ಎಂದು ಪ್ರಭಾರಿ ಮುಖ್ಯಗುರುಗಳಾದ ಬಸವರಾಜ ಅಂಬಳನೂರು ಹೇಳಿದರು.

ಶಾಲೆಯಲ್ಲಿ ಇತ್ತೀಚೆಗೆ ಒಬ್ಬ ಶಿಕ್ಷಕ ನಿವೃತ್ತಿ ಹೊಂದಿದ್ದಾರೆ. ಇನ್ನೊಬ್ಬರು ವರ್ಗಾವಣೆಯಾಗಿ ಹೋಗಿದ್ದಾರೆ. ಶಿಕ್ಷಕಿ ಹೆರಿಗೆ ರಜೆಯ ಮೇಲೆ ಹೋಗಿದ್ದಾರೆ. ಸರಿಯಾದ ಮಾಹಿತಿ ಕೊರತೆಯಿಂದ ಅಲ್ಲಿ ಶಿಕ್ಷಕ ಕೊರತೆ ಕಾಣುತ್ತಿದೆ. ಕೂಡಲೇ ಆ ಶಾಲೆಗೆ ಒಬ್ಬ ಶಿಕ್ಷಕರನ್ನು ನಿಯೋಜನೆ ಮಾಡುತ್ತೇವೆ. -ದಾವಲಸಾಬ ವಾಲಿಕಾರ್‌, ಶಿಕ್ಷಣ ಸಂಯೋಜಕರು ತಾವರಗೇರಾ

Advertisement

 

-ಮಲ್ಲಿಕಾರ್ಜುನ ಮೆದಿಕೇರಿ

Advertisement

Udayavani is now on Telegram. Click here to join our channel and stay updated with the latest news.

Next