ಗೋಧ್ರಾ(ಗುಜರಾತ್): 2002ರ ಗೋಧ್ರೋತ್ತರ ಕೋಮು ದಳ್ಳುರಿ ಪ್ರಕರಣದಲ್ಲಿ ಮುಸ್ಲಿಂ ಕುಟುಂಬದ 17 ಮಂದಿಯನ್ನು ಸುಟ್ಟು ಹಾಕಿದ ಘಟನೆಗೆ ಸಂಬಂಧಿಸಿದಂತೆ ಗುಜರಾತ್ ನ ಪಂಚಮಹಲ್ ಜಿಲ್ಲೆಯ ಹಲೋಲ್ ನ್ಯಾಯಾಲಯ 22 ಮಂದಿಯನ್ನು ಬುಧವಾರ (ಜನವರಿ 25) ಖುಲಾಸೆಗೊಳಿಸಿದೆ.
ಇದನ್ನೂ ಓದಿ:ರೋರಿಂಗ್ ಸ್ಟಾರ್ ʼಬಘೀರʼಕ್ಕಾಗಿ ಸೂಪರ್ ಕಾಪ್ ಆದ ಫಹಾದ್ ಫಾಸಿಲ್
2002ರ ಫೆಬ್ರವರಿ 28ರಂದು ನಡೆದ ಗೋಧ್ರೋತ್ತರ ಕೋಮು ದಳ್ಳುರಿಯಲ್ಲಿ ಮುಸ್ಲಿಂ ಕುಟುಂಬದ ಇಬ್ಬರು ಮಕ್ಕಳು ಸೇರಿದಂತೆ 17 ಮಂದಿಯನ್ನು ಸಾಕ್ಷ್ಯ ನಾಶದ ಉದ್ದೇಶದಲ್ಲಿ ಸುಟ್ಟು ಹಾಕಲಾಗಿತ್ತು ಎಂದು ಪ್ರಾಸಿಕ್ಯೂಷನ್ ಕೋರ್ಟ್ ಗೆ ತಿಳಿಸಿದೆ.
ಪ್ರಕರಣದ ಎಲ್ಲಾ 22 ಆರೋಪಿಗಳನ್ನು ಹೆಚ್ಚುವರಿ ಸೆಷನ್ಸ್ ಜಡ್ಜ್ ಹರ್ಷ ತ್ರಿವೇದಿ ಸಾಕ್ಷ್ಯಾಧಾರದ ಕೊರತೆ ಹಿನ್ನೆಲೆಯಲ್ಲಿ ಖುಲಾಸೆಗೊಳಿಸಿ ತೀರ್ಪು ನೀಡಿದ್ದಾರೆ. ಇದರಲ್ಲಿ ಎಂಟು ಮಂದಿ ಪ್ರಕರಣದ ವಿಚಾರಣಾ ಹಂತದಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ವಕೀಲ ಗೋಪಾಲ್ ಸಿನ್ನಾ ಸೋಳಂಕಿ ತಿಳಿಸಿದ್ದಾರೆ.
2002ರ ಫೆಬ್ರವರಿ 27ರಂದು ಪಂಚಮಹಲ್ ಜಿಲ್ಲೆಯ ಗೋಧ್ರಾ ನಗರದ ಸಮೀಪ ಸಾಬರ್ ಮತಿ ಎಕ್ಸ್ ಪ್ರೆಸ್ ರೈಲಿನ ಬೋಗಿಯೊಂದಕ್ಕೆ ಬೆಂಕಿ ಹಚ್ಚಿದ್ದ ಪರಿಣಾಮ 59 ಮಂದಿ ಕರಸೇವಕರು ಜೀವಂತವಾಗಿ ದಹನವಾಗಿದ್ದರು. ಈ ಘಟನೆ ಬಳಿಕ ಗುಜರಾತ್ ನ ಹಲವೆಡೆ ಕೋಮು ದಳ್ಳುರಿ ಭುಗಿಲೆದ್ದಿತ್ತು.