Advertisement

ಅಗತ್ಯ ವಸ್ತು ಕೊರತೆಯಾಗದು: ಕಾಮತ್‌

11:18 AM Apr 03, 2020 | Team Udayavani |

ಮಂಗಳೂರು: ಅಕ್ಕಿ ಸೇರಿದಂತೆ ದಿನಬಳಕೆಯ ವಸ್ತುಗಳು ಹಾಗೂ ಔಷಧ ಸಾಮಗ್ರಿಗಳು ದಕ್ಷಿಣ ಕನ್ನಡ ಜಿಲ್ಲೆಗೆ ಪೂರೈಕೆಯಲ್ಲಿ ಯಾವುದೇ ರೀತಿಯ ಕೊರತೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಶಾಸಕ ವೇದವ್ಯಾಸ ಕಾಮತ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

Advertisement

ಬೆಂಗಳೂರು ಹಾಗೂ ಇತರ ಕಡೆಗಳಿಂದ ವಸ್ತುಗಳು ಸಗಟು ವ್ಯಾಪಾರಿಗಳಿಗೆ ರವಾನೆ ಯಾಗುತ್ತಿದ್ದು, ಅದನ್ನು ರಿಟೇಲ್‌ ಅಂಗಡಿಗಳಿಗೆ ಒದಗಿಸುವ ಕಾರ್ಯ ನಡೆಯುತ್ತಿದೆ. ರೈಸ್‌ಮಿಲ್‌ಗ‌ಳನ್ನು ಕಾರ್ಯಾರಂಭಿಸುವಂತೆ ಮಾಲಕರ ಜತೆ ಮಾತುಕತೆ ನಡೆಸಲಾಗಿದೆ. ಜಿಲ್ಲೆಯ ಜನರಿಗೆ ಕುಚ್ಚಲಕ್ಕಿ ಕೊರತೆಯಾಗ ದಂತೆ ನೋಡಿಕೊಳ್ಳಲಾಗುವುದು ಎಂದರು.

ಮುಜರಾಯಿ ಇಲಾಖೆಯಿಂದ ಕದ್ರಿ ದೇವಸ್ಥಾನದಿಂದ ಇತರ ರಾಜ್ಯ-ಜಿಲ್ಲೆಗಳ 2,475 ಮಂದಿ ನಿರಾಶ್ರಿತರಿಗೆ ಕಳೆದ ಮೂರು ದಿನಗಳಿಂದ ಮಧ್ಯಾಹ್ನ ಹಾಗೂ ರಾತ್ರಿ ಊಟದ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಸರಕಾರಿ ಶಾಲೆ, ಹಾಸ್ಟೆಲ್‌ಗ‌ಳಲ್ಲಿ ತಂಗಿರುವ ಸುಮಾರು 700 ಮಂದಿಗೆ ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ಇದಲ್ಲದೆ ಹೊಟೇಲ್‌, ಮೆಸ್‌ನ ವ್ಯವಸ್ಥೆ ಇಲ್ಲದ 413 ಮಂದಿಗೆ ಇಂದಿರಾ ಕ್ಯಾಂಟೀನ್‌ನಿಂದ ಊಟದ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.

ಮೇಯರ್‌ ದಿವಾಕರ ಪಾಂಡೇಶ್ವರ, ಉಪ ಮೇಯರ್‌ ವೇದಾವತಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಜಗದೀಶ್‌ ಶೆಟ್ಟಿ, ಕಿರಣ್‌ ಕುಮಾರ್‌ ಹಾಜರಿದ್ದರು.

ಪ್ರತಿ ವಾರ್ಡ್‌ಗೆ ಮೋದಿ ಕಿಟ್‌
ಸಂಸದರು, ಮೇಯರ್‌ ನೇತೃತ್ವ ದಲ್ಲಿ ಪ್ರಮುಖ ಕಾರ್ಯಕರ್ತರ ಸಹಕಾರ ದೊಂದಿಗೆ ವಾರ್ಡ್‌ಗಳಿಗೆ ತಲಾ 50ರಂತೆ ಮಂಗಳೂರು ದಕ್ಷಿಣ ಕ್ಷೇತ್ರದ 38 ವಾರ್ಡ್‌
ಗಳಿಗೆ “ಮೋದಿ ಕಿಟ್‌’ ವಿತರಿಸುವ ಕಾರ್ಯ ಆರಂಭಿಸಲಾಗಿದೆ. 5 ಕೆಜಿ ಕುಚ್ಚಲಕ್ಕಿ, ತಲಾ ಒಂದು ಕೆಜಿ ಸಕ್ಕರೆ, ರವೆ, ಎಣ್ಣೆ, ಅರ್ಧ ಕೆಜಿ ಬೇಳೆ, ಪೇಸ್ಟ್‌, ಸೋಪ್‌ ಹಾಗೂ ಲಭ್ಯವಿರುವ ಧಾನ್ಯದ ತಲಾ 500 ರೂ. ಬೆಲೆಬಾಳುವ ಕಿಟ್‌ ಇದಾಗಿದೆ. ಅಗತ್ಯಕ್ಕನು ಸಾರವಾಗಿ 10,000 ಕಿಟ್‌ಗಳನ್ನು ತಯಾರು ಮಾಡಗುವುದು ಎಂದು ವೇದವ್ಯಾಸ್‌ ಕಾಮತ್‌ ತಿಳಿಸಿದರು.

Advertisement

ನಡೆದೇ ಹೋಗಿ
ಅಗತ್ಯ ವಸ್ತುಗಳು ಸ್ಥಳೀಯವಾಗಿಯೇ ಸಿಗುವ ವ್ಯವಸ್ಥೆ ಮಾಡಲಾಗುತ್ತಿದೆ. ಜನ ನಿಗದಿತ ಅವಧಿಯಲ್ಲಿ (ಬೆಳಗ್ಗೆ 7ರಿಂದ 12) ಸಮೀಪದ ಅಂಗಡಿಗಳಿಗೆ ಕಾಲ್ನಡಿಗೆಯಲ್ಲಿ ತೆರಳಿ ಖರೀದಿಸಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next