Advertisement
ಮೀನುಗಾರಿಕೆ ಬಂದರು ವ್ಯಾಪ್ತಿಗೆ ಪಾಲಿಕೆ ವತಿಯಿಂದ ನೀರು ಈ ಹಿಂದೆ ನಿರಂತರವಾಗಿ ಬರುತ್ತಿತ್ತು. ಪ್ರತೀ ಡೀಸೆಲ್ ಬಂಕ್ನಲ್ಲಿಬೋಟ್ಗಳಿಗೆ ಬೇಕಾಗುವ ನೀರು ಕೂಡ ಸಿಗುತ್ತಿತ್ತು. ಆದರೆ ಇತ್ತೀಚೆಗೆ ಇದೂ ಸ್ಥಗಿತವಾಗಿ, ಟ್ಯಾಂಕರ್ ಮೂಲಕವೇ ನೀರಿಗೆ
ಅವಲಂಬಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಸದ್ಯ ಟ್ಯಾಂಕರ್ ನೀರಿನ ಬೆಲೆಯಲ್ಲಿಯೂ ಏರಿಕೆ ಆಗುತ್ತಿರುವ ಕಾರಣದಿಂದ ಇದು
ಮೀನುಗಾರರಿಗೆ ಹೊರೆಯಾಗುತ್ತಿದೆ.
ಪರಿಸ್ಥಿತಿಯಲ್ಲಿದೆ. ಮಂಗಳೂರಿನಲ್ಲಿ 65ಮಂಜುಗಡ್ಡೆ ಘಟಕಗಳಿವೆ. ಪಾಲಿಕೆ ನೀರು ನಿರಂತರವಾಗಿ ಸಿಗದ ಕಾರಣದಿಂದ
ಟ್ಯಾಂಕರ್ ನೀರನ್ನೇ ಅವಲಂಬಿಸಿರುವ ಘಟಕಗಳ ಮಾಲಕರು ಈಗ ನಷ್ಟದ ಭೀತಿಯಿಂದ ತಾತ್ಕಾಲಿಕವಾಗಿ ಘಟಕ
ಬಂದ್ ಮಾಡುವ ಯೋಚನೆಯನ್ನೂ ಮಾಡಿದ್ದಾರೆ. ಅಕ್ಟೋಬರ್‌ನಲ್ಲಿ ಮೀನಿನ ಬರ ಎದುರಾಗಿತ್ತು. ಶೇ.70ರಷ್ಟು ಬೊಟ್‌ಗಳು ಕಡಲಿಗಿಳಿ ದೆ ಲಂಗರು ಹಾಕಿದ್ದವು. ಆಗ
ಮಂಜುಗಡ್ಡೆ ಘಟಕಗಳಿಗೆ ಕೆಲಸ ಇರಲಿಲ್ಲ. ಈಗ ಬೋಟ್‌ಗಳು ಮೀನುಗಾರಿಕೆಗೆ ತೆ ಳುತ್ತಿವೆ. ಆಳ ಸಮುದ್ರ ಮೀನುಗಾರಿಕೆಗೆ
ಹೋಗುವಾಗ ಬೋಟ್‌ಗಳು 10-15 ಟನ್ ನಷ್ಟು ಮಂಜುಗಡ್ಡೆ ಕೊಂಡೊಯ್ಯುತ್ತವೆ. ವಿದ್ಯುತ್ ದರ ಏರಿಕೆ, ಕಾರ್ಮಿಕರ ಸಮಸ್ಯೆ ಎದುರಿಸಿದ್ದ ಮಂಜುಗಡ್ಡೆ ಘಟಕಗಳು ಈಗ ನೀರಿನ ಸಮಸ್ಯೆ ಎದುರಿಸುತ್ತಿವೆ.
Related Articles
Advertisement
ಆಳ ಸಮುದ್ರ ಮೀನುಗಾರಿಕೆಗೆ ತೆರಳುವ ಮೀನುಗಾರಿಕೆ ಬೋಟ್ ಗಳಿಗೆ 6 ಸಾವಿರ ಲೀ. ನೀರು ಬೇಕು. ಮೊದಲು ಪಾಲಿಕೆ ನೀರು ಸಿಗುತ್ತಿದ್ದರೂ ಈಗ ಅದು ಸಮರ್ಪಕವಾಗಿ ಸಿಗುತ್ತಿಲ್ಲ. ಹೀಗಾಗಿ ಟ್ಯಾಂ ರ್ ಮೂಲಕವೇ ನೀರು ಪಡೆಯಲಾಗುತ್ತಿದೆ. ಇದು ಮೀನುಗಾರರಿಗೆ ದೊಡ್ಡ ಹೊರೆ. – ಮೋಹನ್ ಬೆಂಗ್ರೆ, ಮೀನುಗಾರ ಮುಖಂಡರುಟ್ಯಾಂಕರ್ ನೀರು-ಐಸ್ ಘಟಕಕ್ಕೆ ಹೊರೆ! ಸಮುದ್ರ ಮೀನುಗಾರಿಕೆಗೆ ಹೋಗುವಾಗ ಬೋಟ್‌ಗಳು 10-15 ಟನ್ ನಷ್ಟು ಮಂಜುಗಡ್ಡೆ ಕೊಂಡೊಯ್ಯುತ್ತವೆ. ವಿದ್ಯುತ್ ದರ ಏರಿಕೆ, ಕಾರ್ಮಿಕರ ಸಮ ಸ್ಯೆ ಎದುರಿಸಿದ್ದ ಮಂಜುಗಡ್ಡೆ ಘಟಕಗಳು ಈಗ ನೀರಿನ ಸಮಸ್ಯೆ ಎದುರಿಸುತ್ತಿವೆ.