Advertisement

ಅಫಜಲಪುರ ನಿವಾಸಿಗಳಿಗೆ ಕುಡಿವ ನೀರಿಲ್ಲ

06:35 PM Oct 18, 2020 | Suhan S |

ಅಫಜಲಪುರ: ಮಹಾರಾಷ್ಟ್ರದಲ್ಲಿ ಮಳೆ ಬಂದರೆ ಅಫಜಲಪುರ ಪಟ್ಟಣದಲ್ಲಿ ಕುಡಿಯಲು ನೀರುಬರುವುದಿಲ್ಲ. ಇದು ತಮಾಷೆಯಾದರೂ ನಿಜ. ಕಳೆದನಾಲ್ಕು ದಿನಗಳಿಂದ ಪಟ್ಟಣದ ಜನರಿಗೆ ಕುಡಿಯುವ ನೀರು ಮರೀಚಿಕೆಯಾಗಿದೆ.

Advertisement

ದಿನದಿಂದ ದಿನಕ್ಕೆ ಪಟ್ಟಣದ ಜನಸಂಖ್ಯೆ ಹೆಚ್ಚಳವಾಗುತ್ತಿದೆ. ಸದ್ಯ ಪಟ್ಟಣದಲ್ಲಿ ಅಂದಾಜು 29 ಸಾವಿರದಷ್ಟು ಜನಸಂಖ್ಯೆ ಇದೆ. ಇಷ್ಟೊಂದು ಪ್ರಮಾಣದ ಜನರಿಗೆ ನದಿಯ ನೀರನ್ನು ಶುದ್ಧೀಕರಿಸದೆ ಪುರಸಭೆಯವರು ನೀರು ಸರಬರಾಜು ಮಾಡುತ್ತಿದ್ದಾರೆ. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿದ್ದ ಶುದ್ಧೀಕರಣ ಘಟಕ ಒಂದು ದಿನವೂ ನೀರು ಶುದ್ಧೀಕರಿಸಿಲ್ಲ. ಹೀಗಾಗಿ ಪಟ್ಟಣದ ಜನರಿಗೆ ಶುದ್ಧ ನೀರು ಅನ್ನುವುದೇ ಗೊತ್ತಿಲ್ಲ. ಬರೀ ಕಲುಷಿತ ನೀರನ್ನು ನೆಚ್ಚಿಕೊಂಡಂತಾಗಿದೆ.

ಪ್ರವಾಹದ ನೆಪ: ಪ್ರವಾಹ ಬಂದು ಅಫಜಲಪುರ ಪಟ್ಟಣದ ಎರಡು ಬಡಾವಣೆಗಳಲ್ಲಿ ನೀರು ನುಗ್ಗಿದೆ. ಆದರೆ, ಪಟ್ಟಣದ ಬಡಾವಣೆಗಳಿಗೆ ನೀರು ನುಗ್ಗುವ ಮೊದಲೇ ಪುರಸಭೆಯವರು ನೀರುಸರಬರಾಜು ನಿಲ್ಲಿಸಿದ್ದಾರೆ. ಕಳೆದ ನಾಲ್ಕು ದಿನಗಳಿಂದಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ನಿಲ್ಲಿಸಲಾಗಿದೆ. ಪುರಸಭೆಯವರು ತಮ್ಮ ಜವಾಬ್ದಾರಿಮರೆತು ಪ್ರವಾಹದ ನೆಪದಲ್ಲಿ ನೀರು ಪೂರೈಕೆ ಮಾಡುತ್ತಿಲ್ಲ.

ಖಾಸಗಿಯವರಿಗೆ ಭರ್ಜರಿ ಲಾಭ: ಪುರಸಭೆಯವರುನದಿ ನೀರನ್ನು ಸರಬರಾಜು ಮಾಡುತ್ತಿದ್ದರು. ಆದರೆ ನಾಲ್ಕು ದಿನಗಳಿಂದ ಸರಬರಾಜು ನಿಲ್ಲಿಸಿದ್ದಾರೆ.ಆದರೆ ಪ್ರವಾಹಕ್ಕೂ ಮುನ್ನವೇ ನೀರು ಶುದ್ಧೀಕರಣ ಘಟಕಗಳನ್ನು ಸ್ಥಗಿತಗೊಳಿಸಲಾಗಿದೆ. ನದಿ ನೀರು ಕಲುಷಿತವಾದರೂ ಶುದ್ಧ ಕುಡಿಯುವ ನೀರಿನ ಘಟಕಗಳಿಂದಲಾದರೂ ನೀರು ತಂದು ಕುಡಿಯುತ್ತಿದ್ದ ಜನರಿಗೆ ಆ ನೀರು ಸಿಗದಂತಾಗಿದೆ. ಪುರಸಭೆಯ ನಾಲ್ಕು ಶುದ್ಧ ನೀರಿನ ಘಟಕಗಳು ಸ್ಥಗಿತವಾಗಿದ್ದರಿಂದ ಖಾಸಗಿ ಶುದ್ಧ ನೀರಿನ ಘಟಕಗಳಿಗೆ ಭರ್ಜರಿ ವ್ಯಾಪಾರ ನಡೆದಿದೆ. ಖಾಸಗಿ ಶುದ್ಧೀಕರಣ ಘಟಕ ಇಟ್ಟುಕೊಂಡವರು ಮನಸೋ ಇಚ್ಚೆ ದರ ಪಟ್ಟಿ ಸಿದ್ಧಪಡಿಸಿ ಜನಸಾಮಾನ್ಯರಿಗೆ ಮಾರಿಕೊಳ್ಳುತ್ತಿದ್ದಾರೆ. ಮೊದಲೇ ಪ್ರವಾಹದ ಹೊಡೆತಕ್ಕೆ ಜನ ತತ್ತರಿಸಿದ್ದಾರೆ. ನಾಲ್ಕು ದಿನಗಳಿಂದ ಪುರಸಭೆಯವರು ನೀರು ಸರಬರಾಜುನಿಲ್ಲಿಸಿದ್ದಾರೆ. ಇದರ ಜೊತೆಗೆ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಕೂಡ ಸ್ಥಗಿತಗೊಳಿಸಿದ್ದು, ಗಾಯದ ಮೇಲೆ ಬರೆ ಎಳೆದಂತಾಗಿದೆ.

2019ರ ಅಕ್ಟೋಬರ್‌ನಲ್ಲಿ ಪಟ್ಟಣಕ್ಕೆ ಶುದ್ಧ ನೀರು ಪೂರೈಕೆಗಾಗಿ 66.54 ಕೋಟಿ ಅನುದಾನ ಮಂಜೂರಾಗಿದೆ. ಆದರೆ ಟೆಂಡರ್‌ ಆಗಿಲ್ಲ. ಹೀಗಾಗಿಶುದ್ಧ ನೀರು ಪೂರೈಕೆ ಮಾಡಲಾಗುತ್ತಿಲ್ಲ. ಆದಷ್ಟು ಬೇಗ ಟೆಂಡರ್‌ ಪ್ರಕ್ರಿಯೆ ಮುಗಿದು ಕಾಮಗಾರಿ ಮುಗಿದ ಬಳಿಕ ಶುದ್ಧ ನೀರು ಪೂರೈಕೆ ಮಾಡಲಾಗುತ್ತದೆ. – ವಿಜಯಕುಮಾರ ಬಿಲಗುಂದಿ, ಎಇಇ ಕೆಯುಡೂಬ್ಲ್ಯಎಸ್‌ಡಿ ಬೋರ್ಡ್‌ ಕಲಬುರಗಿ

Advertisement

ಭೀಮಾ ನದಿಯಲ್ಲಿ ಪ್ರವಾಹದ ನೀರುಬಂದಿದ್ದರಿಂದ ಪಟ್ಟಣಕ್ಕೆ ಸರಬರಾಜು ಆಗುವ ಜಾಕ್‌ವಾಲ್‌ ಮುಳುಗಡೆಯಾಗಿದೆ. ಹೀಗಾಗಿ ನೀರು ಸರಬರಾಜು ಮಾಡಲಾಗುತ್ತಿಲ್ಲ. ಇನ್ನೂ ಮೂರು ದಿನ ಸಮಸ್ಯೆಯಾಗಲಿದೆ. ಸಾರ್ವಜನಿಕರು ಸಹಕರಿಸಬೇಕು.-ಬಾಬುರಾವ ಮುಖ್ಯಾಧಿಕಾರಿ ಪುರಸಭೆ

 

-ಮಲ್ಲಿಕಾರ್ಜುನ ಹಿರೇಮಠ

Advertisement

Udayavani is now on Telegram. Click here to join our channel and stay updated with the latest news.

Next