ಚನ್ನರಾಯಪಟ್ಟಣ: ವೈದ್ಯಕೀಯ ಕ್ಷೇತ್ರದಲ್ಲಿ ಶುಶ್ರೂಷಕಿಯರ ವೃತ್ತಿ ಪಾವಿತ್ರವಾದುದು. ಆದರೆ ದೇಶದಲ್ಲಿ 20 ಲಕ್ಷ ಶುಶ್ರೂಷಕಿಯರ ಕೊರತೆಯನ್ನು ಎದುರಿಸಲಾಗುತ್ತಿದೆ ಎಂದು ನಾಗೇಶ್ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ, ಹೃದ್ರೋಗತಜ್ಞ ಡಾ. ಕೆ.ನಾಗೇಶ್ ವಿಷಾದಿಸಿದರು.
ಪಟ್ಟಣದ ನಾಗೇಶ್ ನರ್ಸಿಂಗ್ ಕಾಲೇ ಜಿನ ವತಿಯಿಂದ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಶುಶ್ರೂಷಕಿಯರ ದಿನಾಚರಣೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಳೆದ 15 ವರ್ಷದಿಂದ ವೈದ್ಯಕೀಯ ಕ್ಷೇತ್ರ ದಲ್ಲಿ ಉದ್ಯೋಗಕ್ಕೆ ಹೆಚ್ಚು ಅವಕಾಶ ವಿದ್ದರೂ ಇದನ್ನು ಪಡೆಯುವ ವಿದ್ಯಾವಂತರ ಸಂಖ್ಯೆ ಕಡಿಮೆಯಾಗುತ್ತಿದ್ದು 6 ಲಕ್ಷ ವೈದ್ಯರ ಕೊರತೆ ಇರುವುದು ಬೇಸರದ ಸಂಗತಿ ಎಂದರು.
ನರ್ಸಿಂಗ್ ವೃತ್ತಿ ಬಗ್ಗೆ ಕೀಳರಿಮೆ ಬಿಡಿ: ಕೌಶಲಭರಿತವಾದ ನರ್ಸಿಂಗ್ ವೃತ್ತಿಯನ್ನು ಕೀಳು ಭಾವನೆಯಿಂದ ನೋಡಲಾಗುತ್ತಿದೆ ಹಾಗಾಗಿ ಪ್ರತಿಭಾನ್ವಿತ ವಿದ್ಯಾರ್ಥಿಗಳು ನರ್ಸಿಂಗ್ ಶಿಕ್ಷಣ ಪಡೆಯಲು ಮುಂದಾಗು ತ್ತಿಲ್ಲ. ರೋಗಿಯ ಶೇ.50ರಷ್ಟು ಆರೋಗ್ಯ ಚೇತರಿಗೆ ಮಾಡುವುದು ಶುಶ್ರೂಷಕಿಯರು. ಅವರು ತೋರಿಸುವ ಪ್ರೀತಿ ಹಾಗೂ ಸೇವೆಯಿಂದ ರೋಗಿ ಬಹುಬೇಗ ಗುಣಮುಖರಾಗುತ್ತಾರೆ ಇಂತಹ ವೃತ್ತಿ ಮಾಡುವುದು ಅದೃಷ್ಟವಿದಂತೆ ಎಂದರು.
ಪ್ರತಿಭಾನ್ವಿತ ವೈದ್ಯರ ಕೊರತೆ: ವೈದ್ಯಕೀಯ ಕ್ಷೇತ್ರ ವಿಶ್ವನ್ನು ಆಳುತ್ತಿದೆ. ಆದರೂ ಇಲ್ಲಿ ಸೇವೆ ಸಲ್ಲಿಸುವ ಪ್ರತಿಭಾನ್ವಿತರ ಕೊರತೆ ಇದೆ. ಇದೇ ಹಾದಿಯಲ್ಲಿ ಮುಂದೆ ಸಾಗಬಾರ ದೆಂದರೆ ನರ್ಸಿಂಗ್ ಶಿಕ್ಷಣ ಪಡೆದು ಸೇವೆ ಮಾಡಲು ಯುವ ಸಮುದಾಯ ಮುಂದಾಗಬೇಕು. ಹಣ ಸಂಪಾದನೆ ಜೊತೆ ಸಾಮಾಜ ಹಾಗೂ ಜನರನ್ನು ಒಟ್ಟಿಗೆ ಸೇರಿಸಿ ಸೇವೆ ಮಾಡುವ ಏಕೈಕ ವೃತ್ತಿ ಶುಶ್ರೂಷಕಿಯ ವೃತ್ತಿ, ಈ ವೃತ್ತಿಯಲ್ಲಿ ವೇತನ ಕಡಿಮೆ ಇರುವುದಿಲ್ಲ. ಉತ್ತಮ ಶುಶ್ರೂಷಕಿಗೆ ಉತ್ತಮ ವೇತನ ದೊರೆಯಲಿದೆ ಎಂದು ತಿಳಿಸಿದರು.
ಸಮಾಜಮುಖೀ ಬದುಕು ನಡೆಸಿ: ವೈದ್ಯ ಕೀಯ ಸೇವೆ ಕುಂಠಿತವಾಗಲು ಶುಶ್ರೂಷ ಕಿಯ ಕೊರತೆಯೇ ಮುಖ್ಯ ಕಾರಣ, ಗ್ರಾಮೀಣ ಭಾಗದ ಮಕ್ಕಳು ವೃತ್ತಿಪರ ಶಿಕ್ಷಣಕ್ಕೆ ಹೆಚ್ಚು ಆಸಕ್ತಿ ತೋರಬೇಕು. ಹಣ ಸಂಪಾದನೆ ಜೊತೆ ಬೇರೆಯವರಿಗಾಗಿ ಬದುಕವ ವೃತ್ತಿಯನ್ನು ಆಯ್ಕೆ ಮಾಡಿ ಕೊಂಡರೆ ಮನಸ್ಸಿಗೆ ನೆಮ್ಮದಿ ದೊರೆಯಲಿದೆ.ಸಮಾಜ ಮುಖೀಯಾಗಿ ಬದುಕಿದರೆ ಸಾವನ್ನು ಜಯಿಸಬಹುದು ಇದನ್ನು ಮನ ಗಂಡು ಹಣದ ಹಿಂದೆ ಓಡದೆ ಸೇವೆಯ ಹಿಂದೆ ಹೋಗುವಂತಾಗಬೇಕು ಎಂದರು.
ನರ್ಸಿಂಗ್ ಶಿಕ್ಷಣ ಪಡೆಯಿರಿ: ಹಾಸನದ ಧರ್ಮಸ್ಥಳ ಆಯುರ್ವೇದ ಚಿಕಿತ್ಸಾಲಯದ ನರ್ಸ್ ಮೇಲ್ವಿಚಾಕರ ಸೋಮಶೇಖರ್ ಮಾತನಾಡಿ, ಪ್ರಮಾಣ ಪತ್ರ ಪಡೆಯಲು ನರ್ಸಿಂಗ್ ಶಿಕ್ಷಣ ಪಡೆಯದೇ ಸೇವೆ ಅನನ್ಯ ಎನ್ನುವುದನ್ನು ಮನಗಂಡು ಶಿಕ್ಷಣ ಪಡೆಯಲು ಮುಂದಾಗಬೇಕು. ರೋಗಿಯ ಮನಸ್ಸು ಅರ್ಥ ಮಾಡಿಕೊಳ್ಳು ಏಕೈಕ ಶಕ್ತಿ ಶುಶ್ರೂಷಕಿಯರಿಗೆ ಇರುತ್ತದೆ ಎಂದು ಬಣ್ಣಿಸಿದರು.
ಸರ್ಕಾರಿ ಆಸ್ಪತ್ರೆ ಶುಶ್ರೂಷಕಿ ಮಾಲತಿ, ನಾಗೇಶ್ ಆಸ್ಪತ್ರೆಯ ಶುಶ್ರೂಷಕಿ ಇಂದಿರಾ ಅವರನ್ನು ಸನ್ಮಾನಿಸಲಾಯಿತು. ನಾಗೇಶ್ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಡಾ. ಭಾರತಿ, ನಾಗೇಶ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಧರಣಿಕುಮಾರಿ ಮುಂತಾದವರು ಉಪಸ್ಥಿತರಿದ್ದರು.