Advertisement
ಈಚಿನ ತಿಂಗಳಲ್ಲಿ ಪಾಕ್ ಪಡೆ ಎರಡು ರೀತಿಯಲ್ಲಿ ವರ್ತಿಸುತ್ತಿವೆ. ಮೊದಲನೇಯದಾಗಿ ಅದು ಕದನ ವಿರಾಮ ಉಲ್ಲಂಘನೆ ಮಾಡಿ ಭಾರತೀಯ ಪಡೆಗಳಿಗೆ ಹಾನಿ ಉಂಟುಮಾಡುತ್ತಿದೆ. ಎರಡನೇಯದಾಗಿ ಭಾರತದ ತೀಕ್ಷ್ಣ ಪ್ರತ್ಯುತ್ತರಗಳಿಗೆ ತತ್ತರಗೊಂಡು ಕದನ ವಿರಾಮ ಕೋರಿಕೆಯನ್ನು ಮಂಡಿಸುತ್ತಿದೆ. ಇದು ನಿರಂತರ ಆವರ್ತನ ರೀತಿಯಲ್ಲಿ ನಡೆಯುತ್ತಿದೆ. ಹಾಗಾಗಿ ಬಿಎಸ್‌ಎಫ್ ಈಗ ಸಹನೆ ಕಳೆದುಕೊಳ್ಳುವಂತಾಗಿದೆ. ಪಾಕಿಸ್ಥಾನದ ಕದನ ವಿರಾಮ ಕೋರಿಕೆಯಲ್ಲಿ ಯಾವುದೇ ವಿಶ್ವಾರ್ಸಾಹತೆ ಈಗ ಉಳಿದಿಲ್ಲ ಎಂದು ಭಾರತೀಯ ಗಡಿ ರಕ್ಷಣಾ ಪಡೆ ಹೇಳಿದೆ.
Related Articles
Advertisement
ಎಲ್‌ಓಸಿಯಲ್ಲಿ ಭಾರತೀಯ ಪಡೆಗಳಿಗೆ ಮೂರು ಜವಾಬ್ದಾರಿಗಳಿವೆ : 1. ಗಡಿ ಕಣ್ಗಾವಲು, 2. ಗಡಿ ವಾಸಿ ಪೌರರ ರಕ್ಷಣೆ, 3. ಪಾಕ್ ಪಡೆಗಳ ದಾಳಿಗೆ ಪ್ರತ್ಯುತ್ತರ ನೀಡುವುದು. ಪಾಕಿಸ್ಥಾನ ಗಡಿಯಲ್ಲಿನ ತನ್ನ ಕಾನೂನು ಬಾಹಿರ ವರ್ತನೆಯನ್ನು ಒಪ್ಪಿಕೊಳ್ಳುತ್ತಿಲ್ಲ. ಪಾಕಿಸ್ಥಾನ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಇಂದು ಬುಧವಾರ ಅದು ಭಾರತದ ಪ್ರಭಾರ ಉಪ ಹೈಕಮಿಷನರ್ ಅವರನ್ನು ಕರೆಸಿಕೊಂಡು ಭಾರತವೇ ಕದನ ವಿರಾಮ ಉಲ್ಲಂಘನೆ ಮಾಡುತ್ತಿದೆ ಎಂದು ದೂರಿದೆ. ಪಾಕಿಸ್ಥಾನದ ಇಂತಹ ನಿರಾಧಾರ ಆರೋಪಗಳ ಹೊರತಾಗಿಯೂ ಭಾರತೀಯ ಪಡೆಗಳು ಪಾಕ್ ದಾಳಿಗೆ ಪ್ರತ್ಯುತ್ತರ ನೀಡುವುದನ್ನು ಮಾತ್ರವೇ ಮುಂದುವರಿಸುತ್ತಿದೆ ಎಂದು ಚೌಬೇ ಹೇಳಿದರು.