Advertisement
10 ಕಿ.ಮೀ ಕಾಮಗಾರಿ ಪೂರ್ಣ: ನಗರದ ಪ್ರಮುಖ 29 ರಸ್ತೆಗಳು ಹಾಗೂ 6 ಜಂಕ್ಷನ್‌ಗಳಲ್ಲಿ 972.69 ಕೋಟಿ ರೂ. ವೆಚ್ಚದಲ್ಲಿ ವೈಟ್‌ಟಾಪಿಂಗ್ ಕಾಮಗಾರಿ ಕೈಗೆತ್ತಿಕೊಳ್ಳಲು ಪಾಲಿಕೆ ಯೋಜನೆ ರೂಪಿಸಿದೆ. ಅದರಂತೆ ಕಳೆದ ಅಕ್ಟೋಬರ್‌ನಲ್ಲಿಯೇ ನಗರದಪ್ರಮುಖ ರಸ್ತೆಗಳು ಹಾಗೂ ಆರು ಜಂಕ್ಷನ್‌ಗಳಲ್ಲಿ ಗುತ್ತಿಗೆದಾರರು ಕಾಮಗಾರಿ ಆರಂಭಿಸಿದ್ದು, ಈಗಾಗಲೇ ಸುಮಾರು 10 ಕಿ.ಮೀ.ನಷ್ಟು ಕಾಮಗಾರಿ ಪೂರ್ಣಗೊಂಡಿದೆ. ಕಾಮಗಾರಿಯಿಂದ ತೀವ್ರ ಸಂಚಾರ ದಟ್ಟಣೆಯಾಗುತ್ತಿದೆ ಎಂದು ಸಾರ್ವಜನಿಕರಿಂದ ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಕನಕಪುರ ರಸ್ತೆ ಹಾಗೂ ಮೈಸೂರು ರಸ್ತೆ ಹೊರತುಪಡಿಸಿ ಉಳಿದ ರಸ್ತೆಗಳಲ್ಲಿ ಕಾಮಗಾರಿಗೆ ಅನುಮತಿ ನೀಡಲು ಸಂಚಾರ ಪೊಲೀಸರು ನಿರಾಕರಿಸಿದ್ದಾರೆ. ಹೀಗಾರಿ ಕಾಮಗಾರಿ ಅರ್ಧಕ್ಕೆ ನಿಂತಿದೆ.
ಏಕಕಾಲದಲ್ಲಿ ಐದು ರಸ್ತೆಗಳಲ್ಲಿ ಕಾಮಗಾರಿ ನಡೆಸಲು ಅಗತ್ಯವಾದ ಯಂತ್ರೋಪಕರಣಗಳು ಪಾಲಿಕೆಯ ಬಳಿಯಿವೆ. ಆದರೆ, ಸಂಚಾರ ಪೊಲೀಸರ ಅನುಮತಿ ದೊರೆಯದ ಹಿನ್ನೆಲೆಯಲ್ಲಿ ಯಂತ್ರಗಳಿಗೆ ಕೆಲಸವಿಲ್ಲ ದಂತಾಗಿದೆ. ಪಾಲಿಕೆಯ ವ್ಯಾಪ್ತಿಯಲ್ಲಿ ಸುಮಾರು 93 ಕಿ.
ಮೀ. ಉದ್ದದ ವೈಟ್‌ಟಾಪಿಂಗ್ ಕಾಮಗಾರಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಗುತ್ತಿಗೆದಾರರಿಗೆ ಹೆಚ್ಚುವರಿ ಯಂತ್ರಗಳನ್ನು ತರಿಸಿಕೊಳ್ಳುವಂತೆ ಈ ಹಿಂದೆ ಪಾಲಿಕೆಯ ಅಧಿಕಾರಿಗಳು ಸೂಚನೆ ನೀಡಿದ್ದರು. ಆದರೆ ಈಗ ಅದೂ ಪ್ರಯೋಜನವಿಲ್ಲದಂತಾಗಿದೆ ಪೊಲೀಸರ ವಾದವೇನು?
ನಗರದ ಹಲವು ರಸ್ತೆಗಳಲ್ಲಿ ಏಕಕಾಲದಲ್ಲಿ ಕಾಮಗಾರಿ ಆರಂಭಿಸಿದರೆ ತೀವ್ರ ಸಂಚಾರ ದಟ್ಟಣೆಯಾಗಲಿದ್ದು, ಇದರಿಂದಾಗಿ ಸಾರ್ವಜನಿಕರು ತೀವ್ರ ತೊಂದರೆಯಾಗುತ್ತದೆ. ಹೀಗಾಗಿ ಒಂದು ರಸ್ತೆ ಕಾಮಗಾರಿ ಪೂರ್ಣಗೊಳಿಸಿದ ನಂತರ ಮತ್ತೂಂದು ರಸ್ತೆಯಲ್ಲಿ
ಕಾಮಗಾರಿ ನಡೆಸಲು ಅನುಮತಿ ನೀಡಲಾಗುವುದು ಎಂಬುದು ಸಂಚಾರ ಪೊಲೀಸರ ವಾದವಾಗಿದೆ.
Related Articles
ಸದ್ಯ ಏಕಕಾಲದಲ್ಲಿ ಐದು ರಸ್ತೆಗಳಲ್ಲಿ ಕಾಮಗಾರಿ ನಡೆಸುವಷ್ಟು ಯಂತ್ರೋಪಕರಣಗಳು ಲಭ್ಯವಿದ್ದರೂ, ಸಂಚಾರ ಪೊಲೀಸರು ಒಂದು ರಸ್ತೆಯಲ್ಲಿನ ಕಾಮಗಾರಿ ಪೂರ್ಣಗೊಳಿಸಿದ ಬಳಿಕ ಮತ್ತೂಂದು ರಸ್ತೆಯಲ್ಲಿ ಅನುಮತಿ ನೀಡುವುದಾಗಿ ತಿಳಿಸಿದ್ದಾರೆ. ಹೀಗೆ ಒಂದೊಂದೆ
ರಸ್ತೆಯಲ್ಲಿ ಕಾಮಗಾರಿ ನಡೆಸದಿರೆ 93 ಕಿ.ಮೀ. ಮುಗಿಯಲು ನಾಲ್ಕೈದು ವರ್ಷ ಬೇಕಾಗುತ್ತದೆ ಎನ್ನುವುದು ಪಾಲಿಕೆ ವಾದ.
Advertisement
ಸಂಚಾರ ಪೊಲೀಸರು ಒಂದು ರಸ್ತೆಯ ಕಾಮಗಾರಿ ಮುಗಿದ ನಂತರ ಮತ್ತೂಂದು ರಸ್ತೆಯಲ್ಲಿ ಕೆಲಸ ಮಾಡುವಂತೆ ತಿಳಿಸಿದ್ದು,ಇದರಿಂದಾಗಿ ಕಾಮಗಾರಿ ವಿಳಂಬವಾಗುತ್ತಿದೆ.
ಕೆ.ಟಿ.ನಾಗರಾಜ್, ಮುಖ್ಯ ಎಂಜಿನಿಯರ್ (ಯೋಜನೆ)