Advertisement
ಸೊಳ್ಳೆ ಉತ್ಪತ್ತಿಯ ತಾಣವಾಗಿಯೂ ಮಾರ್ಪಾಡಾಗುತ್ತಿರುವುದು ಟೈಗರ್ ಕಾರ್ಯಾಚರಣೆಯ ವೇಳೆ ಕಂಡುಬಂದಿದೆ. ಸುರತ್ಕಲ್ ಮಾರ್ಕೆಟ್‌ಬಳಿ, ಕಾನಾ ,ಕಾಟಿಪಳ್ಳ ಸಹಿತ ವಿವಿಧೆಡೆ ಕಾರ್ಯಾಚರಣೆ ಮುಂದುವರೆಯಿತು. ಸುರತ್ಕಲ್ ಪಾಲಿಕೆ ವಿಭಾಗೀಯ ವ್ಯಾಪ್ತಿಯಲ್ಲಿ ನಿರತಂತರವಾಗಿ ಬೀದಿ ಬದಿ ವ್ಯಾಪಾರದ ತೆರವು, ಶೆಡ್ ತೆರವು ಸಹಿತ ಫುಟ್ ಪಾತ್ ಅತಿಕ್ರಮಣವನ್ನು ತೆರವು ಮಾಡಿ ಮುಂದೆ ಅತಿಕ್ರಮಣ ಮಾಡದಂತೆ ಬ್ಯಾನರ್ ಅಳವಡಿಸಲಾಗಿದೆ.
Related Articles
Advertisement
ಇಂದು ನಗರ ಪಾಲಿಕೆ ಕಚೇರಿ ಚಲೋ
ಮಂಗಳೂರು ಮಹಾನಗರ ಪಾಲಿಕೆಯಿಂದ ಟೈಗರ್ ಕಾರ್ಯಾಚರಣೆ ಹೆಸರಿನಲ್ಲಿ ಬಡ ಬೀದಿಬದಿ ವ್ಯಾಪಾರಿಗಳ ಬದುಕುವ ಹಕ್ಕನ್ನು ಕಸಿಯುತ್ತಿದೆ ಎಂದು ಆರೋಪಿಸಿ, ಸಮಾನಮನಸ್ಕ ಸಂಘಟನೆಗಳ ನೇತೃತ್ವದಲ್ಲಿ ಆ.7ರಂದು ಬೆಳಗ್ಗೆ 10.45ಕ್ಕೆ ನಗರದ ಪಿವಿಎಸ್ ಜಂಕ್ಷನ್‌ನಿಂದ ಮೆರವಣಿಗೆ ಹೊರಟು 11ಗಂಟೆಗೆ ಲಾಲ್ ಬಾಗ್‌ನಲ್ಲಿರುವ ನಗರಪಾಲಿಕೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ