ಎಚ್.ಡಿ.ಕೋಟೆ: ಶುಚಿತ್ವ ಕಾಣದ ಚರಂಡಿಗಳು, ರಸ್ತೆ ಬದಿಗಳಲ್ಲಿ ತುಂಬಿನಿಂತ ಕಸದ ಬುಟ್ಟಿಗಳು, ಕೊಳೆತು ಪಾಚಿಕಟ್ಟಿಕೊಂಡು ಸೊಳ್ಳೆಗಳ ವಂಶಾಭಿವೃದ್ಧಿಯ ಕೇಂದ್ರಸ್ಥಾನವಾದ ದನಗಳು ಕುಡಿಯುವ ನೀರಿನತೊಟ್ಟಿಗಳು, ಶುಚಿತ್ವಕ್ಕೆ ಬರಬೇಕಾದ ಕಸದಗೂಡ್ಸ್ ವಾಹನ ಇದ್ದೂ ಉಪಯೋಗಕ್ಕೆಬಾರದೆ ಬಿಲ್ ಕಲೆಕ್ಟರ್ ಮನೆಮುಂದೆ ತುಕ್ಕು ಹಿಡಿಯುತ್ತಿರುವುದು.
ಇದು ಎಚ್.ಡಿ.ಕೋಟೆ ತಾಲೂಕಿನ ಹೊಸಹೊಳಲು ಗ್ರಾಮದಲ್ಲಿ ಕಂಡು ಬರುವದೃಶ್ಯಾವಳಿಗಳು. ಹೊಸಹಳಲು ಗ್ರಾಮದಲ್ಲಿಗ್ರಾಪಂ ಕಾರ್ಯಾಲಯ ಕಾರ್ಯನಿರ್ವಹಿಸುತ್ತಿದೆ. ವಿಪರ್ಯಾಸವೆಂದರೆ ಗ್ರಾಪಂ ಕಾರ್ಯಾಲಯ ಇರುವ ಗ್ರಾಮದಲ್ಲೇ ಅಶುಚಿತ್ವ ತಾಂಡವಾಡುತ್ತಿದೆ ಎಂದ ಮೇಲೆ ಇನ್ನು ಪಂಚಾಯ್ತಿ ವ್ಯಾಪ್ತಿಗೆ ಒಳಪಡುವ ಗ್ರಾಮೀಣ ಭಾಗದಗ್ರಾಮಗಳ ಪಾಡೇನು ಅನ್ನುವ ಪ್ರಶ್ನೆ ಕಾಡುತ್ತಿದೆ.
ಕೊಳೆತುನಾರುತ್ತಿರುವ ನೀರಿನ ತೊಟ್ಟಿ: ಹೊಸಹೊಳಲು ಗ್ರಾಮದಲ್ಲಿ ದನ ಕರುಗಳ ಕುಡಿಯುವ ನೀರಿಗಾಗಿ ಪಂಚಾಯ್ತಿಯಿಂದ ನೀರಿನ ತೊಟ್ಟಿ ನಿರ್ಮಿಸಲಾಗಿದೆ. ಆದರೆಶುಚಿತ್ವ ಕಾಣದ ವರ್ಷಗಳೇ ಕಳೆದಿರುವ ನೀರಿನ ತೊಟ್ಟಿ ತುಂಬೆಲ್ಲಾ ಪಾಚಿ ಬೆಳೆದುಕಲುಷಿತ ನೀರು ದುರ್ವಾಸೆ ಬೀರುತ್ತಾ ಇದ್ದೂಉಪಯೋಗಕ್ಕೆ ಬಾರದೆ ಸೊಳ್ಳೆಗಳ ವಂಶಾಭಿವೃದ್ಧಿಯ ಕೇಂದ್ರ ಸ್ಥಾನವಾಗಿದ್ದರೂಸ್ಥಳೀಯ ಗ್ರಾಪಂ ಶುಚಿತ್ವಕ್ಕೆ ಆದ್ಯತೆ ನೀಡಿಲ್ಲ.ಇನ್ನು ಸೊಳ್ಳೆಗಳಿಂದ ಡೆಂಗ್ಯು, ಚಿಕೂನ್ ಗುನ್ಯಾ ಮಲೇರಿಯಾದಂತಹ ರೋಗಗಳು ಹರಡುವ ಸಾಧ್ಯತೆ ಇದ್ದು ಜನರು ಆತಂಕದಲ್ಲಿದ್ದಾರೆ.
ಕಸದ ತೊಟ್ಟಿ ಶುಚಿಗೊಳಿಸದ ಪಂಚಾಯ್ತಿ: ಗ್ರಾಮದ ನೈರ್ಮಲ್ಯತೆ ಕಾಪಾಡುವಸಲುವಾಗಿ ಸರ್ಕಾರದ ಆದೇಶದಂತೆ ಗ್ರಾಮಗಳ ರಸ್ತೆ ಬದಿಗಳಲ್ಲಿ ಕಸದ ತೊಟ್ಟಿಇರಿಸಿ ಕಸ ಭರ್ತಿಯಾಗುತ್ತಿದ್ದಂತೆಯೇ ಕಸ ವಿಲೇವಾರಿ ಮಾಡಬೇಕು ಅನ್ನುವ ನಿಯಮಜಾರಿಯಲ್ಲಿದೆಯಾದರೂ ಹೊಸಹೊಳಲುಪಂಚಾಯ್ತಿಯಲ್ಲಿ ಅದು ಪಾಲನೆಯಾಗುತ್ತಿಲ್ಲ. ಇದರಿಂದ ಕಸ ತುಂಬಿಕೊಂಡ ತೊಟ್ಟಿಗಳು ಅಲ್ಲಲ್ಲಿ ಕೊಳೆತು ನಾರುತ್ತಿವೆ. ಚರಂಡಿಗಳು ಶುಚಿತ್ವ ಕಾಣದೆ ಕಟ್ಟಿಕೊಂಡು ದುರ್ವಾಸನೆ ಬೀರಿದರೂ ಶುಚಿತ್ವಕ್ಕೆ ಆದ್ಯತೆ ನೀಡುತ್ತಿಲ್ಲ ಅನ್ನುವುದು ಗ್ರಾಮಸ್ಥರ ಆರೋಪವಾಗಿದೆ. ಬಿಲ್ ಕಲೆಕ್ಟರ್ ಮನೆಮುಂದೆ ನಿಲ್ಲುವ
ಕಸದ ವಾಹನ: ಕಸ ವಿಲೇವಾರಿ ಮಾಡಲು ಗೂಡ್ಸ್ ವಾಹನವೊಂದಿದೆಯಾದರೂ ಕಸವಿಲೇಮಾಡಿ ಮಾಡಲು ವಾಹನ ಬರುತ್ತಿಲ್ಲ. ಗ್ರಾಪಂ ಆವರಣದಲ್ಲಿರಬೇಕಾದ ಕಸವಿಲೇವಾರಿ ವಾಹನ ಪಂಚಾಯ್ತಿ ಬಿಲ್ ಕಲೆಕ್ಟರ್ ಮನೆ ಮುಂದೆ ವಿಶ್ರಾಂತಿ ಪಡೆಯುತ್ತಿದ್ದರೂ ಹೇಳುವ ಕೇಳುವವರಿಲ್ಲದಂತಾಗಿದೆ.
ಗ್ರಾಮದಲ್ಲೇ ಪಂಚಾಯ್ತಿ ಇದ್ದರೂ ಇಷ್ಟೆಲ್ಲಾ ಅವ್ಯವಸ್ಥೆಗಳ ಅಗರವಾಗಿ ಶುಚಿತ್ವ ಮರಿಚೀಕೆಯಾಗಿರುವುದರಿಂದ ಸಂಬಂಧಪಟ್ಟವರು ಇತ್ತ ಕೂಡಲೆ ಗಮನ ಹರಿಸಿಸಮಸ್ಯೆ ಪರಿಹಾರಕ್ಕೆ ಕ್ರಮವಹಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ
ಗ್ರಾಮ ಪಂಚಾುತಿ ಸ್ಥಳೀಯವಾಗಿ ಕಾರ್ಯನಿರ್ವ”ಸುತ್ತಿದ್ದರು ಸ್ಥಳೀಯ ಗ್ರಾಮಗಳ ಮೂಲಭೂತ ಸಮಸ್ಯೆ ಮತ್ತು ಶುಚಿತ್ವ ಪರಿಹಾರಕ್ಕೆಕ್ರಮವ”ಸುತ್ತಿಲ್ಲ. ಚರಂಡಿಗಳು ಶುಚಿತ್ವಕಂಡಿಲ್ಲ, ನೀರಿನ ತೊಟ್ಟಿ ಪಾಚಿ ಕಟ್ಟಿ ಜೊಂಡು ಬೆಳೆದುನಿಂರತೂ ಶುಚಿಗೊಳಿಸಿಲ್ಲ. ಅಶುಚಿತ್ವ ತಾಂಡವಾಡುತ್ತಿರುವುದರಿಂದ ಸೊಳ್ಳೆಗಳ ಕಾಟ ಹೇಳತೀರದಾಗಿದೆ. ಸಾರ್ವಜನಿಕಹಿತದೃಷ್ಟಿಯಿಂದ ಗ್ರಾಮಪಂಚಾಯ್ತಿಶುಚಿತ್ವಕ್ಕೆ ಆದ್ಯತೆ ನೀಡಬೇಕಿದೆ.
-ಬಿ.ರಾಜು ಸ್ಥಳೀಯ ನಿವಾಸಿ
ಕಳೆದ 3 ದಿನಗಳ ಹಿಂದಷ್ಟೇ ಗ್ರಾಮ ಶುಚಿಗೊಳಿಸಿದ್ದೇವೆ. ಕಸ ವಿಲೇವಾರಿಗೂಡ್ಸ್ ವಾಹನದ ನೋಂದಣಿಯಾಗದ ಹಿನ್ನೆಲೆಯಲ್ಲಿ ಗ್ರಾಪಂ ಆವರಣದಲ್ಲಿ ವಾಹನ ನಿಲುಗಡೆಗೆ ರಕ್ಷಣೆ ಇಲ್ಲ ಅನ್ನುವ ಕಾರಣದಿಂದ ಬಿಲ್
ಕಲೆಕ್ಟರ್ ಮನೆ ಬಳಿ ನಿಲುಗಡೆ ಮಾಡಲಾಗುತ್ತಿದೆ. ಒಂದೆರಡುದಿನಗಳಲ್ಲಿ ಗ್ರಾಮ ಶುಚಿಗೊಳಿಸಲುಕ್ರಮವಹಿಸಲಾಗುತ್ತದೆ.
-ರಮೇಶ್, ಪಿಡಿಒ ಹೊಸಹೊಳಲು ಪಂಚಾಯ್ತಿ
-ಎಚ್.ಬಿ.ಬಸವರಾಜು