Advertisement
ತಾಲೂಕಿನ ದಾಸನಪುರವು ಕಾವೇರಿ ನದಿಯ ತೀರದ ತಪ್ಪಲಿನಲ್ಲಿ ಇದ್ದು,ಗ್ರಾಮದಲ್ಲಿಸುಮಾರು 600-700 ಜನಸಂಖ್ಯೆ ಇದೆ. ದಲಿತರು, ವೀರಶೈವರು, ಕುರುಬ ಸಮುದಾಯ ದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಗ್ರಾಮದ ಜನರು ಲಗಾಯ್ತಿನಿಂದಲೂ ಕಾವೇರಿ ನದಿಯ ನೀರನ್ನೇ ಸೇವಿಸುವಂತಹ ಪರಿಸ್ಥಿತಿ ಇದೆ.
Related Articles
Advertisement
ಜನಪ್ರತಿನಿಧಿಗಳ ನಿರ್ಲಕ್ಷ್ಯ: ಗ್ರಾಮದ ಸನಿಹವೇ ಯಾವಾಗಲೂ ನದಿ ನೀರು ಹರಿ ಯುತ್ತಿರುತ್ತದೆ. ಆದರೆ, ಕುಡಿಯಲು ನೀರು ಮಾತ್ರ ಸಿಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಗ್ರಾಮಸ್ಥರು ಇದ್ದಾರೆ. ಶಾಸಕರು, ಸಂಸದರು ಸೇರಿದಂತೆ ಜನಪ್ರತಿನಿಧಿಗಳಿಗೆ ಗ್ರಾಮಕ್ಕೆ ಹಲವಾರು ಬಾರಿ ಭೇಟಿ ನೀಡಿದ್ದರೂ ನಮ್ಮ ಸಮಸ್ಯೆಗಳು ಮಾತ್ರ ಬಗೆಹರಿಯುತ್ತಿಲ್ಲ. ಪರಿಹರಿಸುವಪ್ರಯತ್ನವನ್ನೂ ಮಾಡಿಲ್ಲ ಎಂದು ರೈತ ಮುಖಂಡರಾದ ಅಣ ಗಳ್ಳಿ ಬಸವರಾಜು, ಜಿ.ಮುತ್ತುರಾಜು(ಕಾಶಿ) ಸೇರಿದಂತೆ ಗ್ರಾಮಸ್ಥರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಶೀಘ್ರಶುದ್ಧ ಕುಡಿವ ನೀರು ಸಿಗಲು ಮಾರ್ಗೋಪಾಯ : ದಾಸನಪುರದ ಜನರು ಹಲವಾರು ವರ್ಷಗಳಿದ ಅಶುದ್ಧ ನೀರನ್ನೇ ಸೇವಿಸುತ್ತಿದ್ದಾರೆ. ಕಾವೇರಿ ನದಿ ನೀರನ್ನು ಶುದ್ಧೀಕರಿಸುವ ವ್ಯವಸ್ಥೆ ಇಲ್ಲವಾಗಿದೆ. ಹೀಗಾಗಿ ಶುದ್ಧ ನೀರನ್ನು ಕಲ್ಪಿಸಲು ಶುದ್ಧ ನೀರಿನ ಘಟಕತೆರೆಯಬೇಕಾಗುತ್ತದೆ. ಇದಕ್ಕೆ 20 ಲಕ್ಷಕ್ಕೂ ಅಧಿಕ ಹಣ ಬೇಕಾಗಿದೆ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಇದು ಕಷ್ಟದ ಕೆಲಸ. ತ್ವರಿತವಾಗಿ ಹಾಗೂ ಸುಲಭವಾಗಿ ಶುದ್ಧ ನೀರು ಪೂರೈಸಲು ಮಾರ್ಗವೊಂದಿದೆ. ಸುಮಾರು3ಕಿ.ಮೀ. ದೂರದಕೊಳ್ಳೇಗಾಲದಲ್ಲಿ ನಗರಸಭಾ ವತಿಯಿಂದ ಶುದ್ಧೀಕರಣ ಘಟಕವನ್ನು ನಿರ್ಮಿಸಿ, ನೀರನ್ನು ಶುದ್ಧೀಕರಿಸಿನಗರದಜನತೆ ಪೂರೈಸಲಾಗುತ್ತಿದೆ. ಇಲ್ಲಿಂದ ಪೈಪ್‌ಗಳ ಮೂಲಕ ದಾಸನಪುರಕ್ಕೆ ನೀರನ್ನು ಸರಬರಾಜು ಮಾಡಬಹುದಾಗಿದೆ. ಕೇವಲ 3 ಕಿ.ಮೀ. ಪೈಪ್‌ಲೈನ್ ಮಾತ್ರ ಅಳವಡಿಸಬೇಕಾಗಿರುವುದರಿಂದ ಅಷ್ಟಾಗಿ ದೊಡ್ಡ ಮೊತ್ತದ ಹಣ ಬೇಕಾಗಿಲ್ಲ. ಕಡಿಮೆ ಖರ್ಚಿನಲ್ಲಿ ಸುಲಭವಾಗಿ ದಾಸನಪುರಕ್ಕೆ ನೀರನ್ನು ಕಲ್ಪಿಸಬಹುದಾಗಿದೆ. ಈ ಕುರಿತು ಕ್ಷೇತ್ರದ ಶಾಸಕರಾದ ಎನ್.ಮಹೇಶ್ ಗಮನ ಹರಿಸಿ ನಮ್ಮ ಗ್ರಾಮಕ್ಕೆ ಶುದ್ಧ ನೀರನ್ನು ಪೂರೈಕೆ ಮಾಡಬೇಕು ಎಂದು ದಾಸನಪುರದ ಗ್ರಾಮಸ್ಥರು ಆಗ್ರಹಿಸಿದ್ದಾರೆ.
– ಡಿ.ನಟರಾಜು