Advertisement
ಕೆ.ಆರ್.ನಗರದಿಂದ ಮೈಸೂರಿಗೆ ತೆರಳಬೇಕಾದರೆ ಬೆಳಗ್ಗೆ 6 ಗಂಟೆಯಿಂದ 11 ಗಂಟೆಯವರೆಗೆ ನರಕ ಯಾತನೆ ಅನುಭವಿಸುವಂತಾಗಿದ್ದು, ಸಮಸ್ಯೆಯ ಅರಿವಿದ್ದರೂ ಚುನಾಯಿತ ಜನಪ್ರತಿ ನಿಧಿಗಳು ಮತ್ತು ಇಲಾಖೆಯ ಅಧಿಕಾರಿ ಗಳು ಕ್ರಮಕ್ಕೆ ಮುಂದಾಗುತ್ತಿಲ್ಲ. ಬಸ್ ಸಮಸ್ಯೆಯಿಂದ ವಿದ್ಯಾರ್ಥಿಗಳು ನಿತ್ಯ ಮೈಸೂರಿಗೆ ಸಂಚರಿಸಲು ತೊಂದರೆ ಅನುಭವಿಸುತ್ತಿರುವುದರ ಜತೆಗೆ ಪುಟ್ಟ ಮಕ್ಕಳನ್ನು ಜೊತೆಯಲ್ಲಿ ಕರೆ ತರುವ ಪ್ರಯಾಣಿಕರ ಸ್ಥಿತಿ ಹೇಳತೀರದಾಗಿದೆ.
Related Articles
Advertisement
ಡಿಪೋ ಮ್ಯಾನೇಜರ್ ಏನಂತಾರೆ? : ಕೆ.ಆರ್.ನಗರ ಬಸ್ ಘಟಕದ ವತಿಯಿಂದ ಬೆಳಗ್ಗೆ 6 ಗಂಟೆಯಿಂದ 12ರವರೆಗೆ 12 ಬಸ್‌ಗಳು ಸಂಚಾರ ಮಾಡುತ್ತಿದ್ದು, ನಾವು ಪ್ರಯಾಣಿಕರಿಗೆ ಸಾಧ್ಯವಾದಷ್ಟು ಅನುಕೂಲ ಮಾಡಲು ಕ್ರಮ ಕೈಗೊಂಡಿದ್ದು, ಪ್ರಸ್ತುತ ಇರುವ ಸಮಸ್ಯೆಯ ಬಗ್ಗೆ ಮೇಲಧಿಕಾರಿಗಳಿಗೆ ತಿಳಿಸಲಾಗಿದೆ. ಇದರಿಂದ ನಮಗೆ ಮತ್ತೆ ಮೂರು ಬಸ್ಸುಗಳನ್ನು ಸಂಚಾರಕ್ಕೆ ಹೆಚ್ಚುವರಿಯಾಗಿ ಕೊಟ್ಟಿದ್ದು, ಮುಂದಿನ ದಿನಗಳಲ್ಲಿ ಒತ್ತಡ ಕಡಿಮೆ ಮಾಡಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತೇನೆ ಎಂದು ಕೆ.ಆರ್.ನಗರ ಡಿಪೋ ವ್ಯವಸ್ಥಾಪಕ ಪಾಪನಾಯಕ ತಿಳಿಸಿದ್ದಾರೆ.
ಪಟ್ಟಣದಿಂದ ಬೆಳಗಿನ ವೇಳೆ ಮೈಸೂರಿಗೆ ತೆರಳಲು ನಿತ್ಯ ಹಿಂಸೆ ಅನುಭಿಸುವಂತಾಗಿದೆ. ಬಸ್ ಅವ್ಯವಸ್ಥೆ ಕುರಿತು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಅರಿವಿದ್ದರೂ ಸೌಲಭ್ಯ ಕಲ್ಪಿಸಲು ಮುಂದಾಗುತ್ತಿಲ್ಲ. ಸಂಬಂಧಪಟ್ಟವರು ಶೀಘ್ರ ಸಮರ್ಪಕ ಬಸ್ ವ್ಯವಸ್ಥೆ ಕಲ್ಪಿಸಬೇಕು. – ಬಸವರಾಜು, ಕೆಂಪನಕೊಪ್ಪಲು
ಶಾಸಕರೇ, ಬೆಳಗ್ಗೆ ವೇಳೆ ಬಸ್ ವ್ಯವಸ್ಥೆ ಕಲ್ಪಿಸಿ : ಪಟ್ಟಣದ ಕೆಎಸಾರ್ಟಸಿ ಬಸ್ ನಿಲ್ದಾಣದಲ್ಲಿ ಬೆಳಗಿನ ವೇಳೆ ಪ್ರಯಾಣಿಕರು ಮೈಸೂರಿಗೆ ತೆರಳಲು ಕಿಕ್ಕಿರಿದು ತುಂಬಿರುತ್ತಾರೆ. ಶಾಲಾ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಕನಿಷ್ಠ 500-600 ಪ್ರಯಾಣಿಕರು ಸೇರಿರುತ್ತಾರೆ. ಈ ವೇಳೆ ಕೇವಲ ನಾಲ್ಕೈದು ಬಸ್‌ಗಳು ಮಾತ್ರ ಬರುತ್ತವೆ. ಇಷ್ಟು ಮಂದಿ ಪ್ರಯಾಣಿಕರಿಗೆ ಈ ಬಸ್‌ಗಳು ಯಾವುದಕ್ಕೂ ಸಾಲುವುದಿಲ್ಲ. ಬೆಳಗ್ಗೆ 6 ರಿಂದ 12 ಗಂಟೆಯವರೆಗೆ ಕೇವಲ 12 ಬಸ್ ಮಾತ್ರ ನಿಲ್ದಾಣದಿಂದ ತೆರಳುತ್ತವೆ. ಈ ಸಮಯದಲ್ಲಿ ಇನ್ನಷ್ಟು ಬಸ್‌ಗಳನ್ನು ತ್ವರಿತವಾಗಿ ಬಿಡುಗಡೆ ಮಾಡಬೇಕಿದೆ. ಕ್ಷೇತ್ರದ ಶಾಸಕರಾದ ಸಾ.ರಾ.ಮಹೇಶ್ ಈ ಕುರಿತು ಪರಿಣಾಮಕಾರಿಯಾಗಿ ಕ್ರಮ ಕೈಗೊಳ್ಳಬೇಕಿದೆ.
–ಗೇರದಡ ನಾಗಣ್ಣ