Advertisement
ಬಸ್ ಕೊರತೆಯಿಂದ ಧರ್ಮಸ್ಥಳಕ್ಕೆ ತೆರಳಲು ಸಾಧ್ಯವಾಗದ ಪ್ರಯಾಣಿಕರು ರಾತ್ರಿ ಕಡೂರು ಮತ್ತು ಮಂಗಳೂರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.ಧರ್ಮಸ್ಥಳಕ್ಕೆ ತೆರಳಲು ನೂರಾರು ಪ್ರಯಾಣಿಕರು ನಗರಕ್ಕೆ ಆಗಮಿಸಿದ್ದು, ಆದರೆ ಬಸ್ ಇಲ್ಲದ ಕಾರಣ ಕೊರೆಯುವ ಚಳಿಯಲ್ಲಿಯೇ ಬಸ್ ನಿಲ್ದಾಣದಲ್ಲಿ ಮಲಗಿ ಕಾಲ ಕಳೆದರು. ಕೆಲವು ಪ್ರಯಾಣಿಕರು ಮಧ್ಯರಾತ್ರಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ಮೂಲಕ ಬಸ್ ವ್ಯವಸ್ಥೆ ಮಾಡುವಂತೆ ಆಗ್ರಹಿಸಿದರು.