Advertisement
ಸೂಕ್ತವಾದ ಕಟ್ಟಡ ಕೊರತೆ ಇಲ್ಲದೇ ಸೋರುವ ಕಟ್ಟಡದಲ್ಲಿ ಗ್ರಂಥಾಲಯ ಕಾರ್ಯ ನಡೆಯುತ್ತಿದೆ. ಮಳೆ ಬಂದರೆ ಇಲ್ಲಿನ ಸ್ಥಿತಿ ದೇವರಿಗೆಯೇ ಪ್ರೀತಿ ಎಂಬಂತಾಗಿದೆ. ಹತ್ತು ಹಲವು ಸಮಸ್ಯೆಗಳಿಂದ ಅನಾರೋಗ್ಯ ಈಡಾಗಿರುವ ಗ್ರಂಥಾಲಯಕ್ಕೆ ಸೂಕ್ತ ಚಿಕಿತ್ಸೆ ನೀಡಬೇಕು ಎಂಬ ಒತ್ತಾಯ ಕೇಳಿ ಬಂದಿದೆ.
Related Articles
Advertisement
ಯುವಕರು ಹಣ ಖರ್ಚು ಮಾಡಿ ಉದ್ಯೋಗ ಮಾಹಿತಿ ಇರುವ ಪತ್ರಿಕೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬೇಕಾಗುವ ಪುಸ್ತಕ ಓದಲು ಪಟ್ಟಣ ಹಾಗೂ ನಗರ ಪ್ರದೇಶಗಳತ್ತ ಮುಖ ಮಾಡಿರುವುದು ಸಹ ಗ್ರಂಥಾಲಯದ ಓದುಗರ ಸಂಖ್ಯೆ ಇಳಿಮುಖವಾಗಲು ಪ್ರಮುಖ ಕಾರಣ ಎಂಬುದು ಓದುಗರರ ಅಭಿಪ್ರಾಯ. ಪುಸ್ತಕಗಳಿಂದ ತುಂಬಿರಬೇಕಾದ ಗ್ರಂಥಾಲಯದಲ್ಲಿ ಪುಸ್ತಕಗಳೇ ಇಲ್ಲ. ಹೀಗಾಗಿ ಅಲ್ಲಿಗೆ ಹೋದರೆ ಏನು ಪ್ರಯೋಜನ ಸಿಗಲ್ಲ. ಬಡ ವಿದ್ಯಾರ್ಥಿಗಳು, ಹಿರಿಯ ಓದುಗರರಿಗೆ ಅನುಕೂಲವಾಗಬೇಕಿದ್ದ ಗ್ರಂಥಾಲಯದಲ್ಲಿ ಪುಸ್ತಕಗಳು ಕೊರತೆ ಇರುವುದು ನಿಜಕ್ಕೂ ಬೇಸರ ತರಿಸಿದೆ. ಸಂಬಂಧಿಸಿದವರು ತಕ್ಷಣ ಇಲ್ಲಿನ ಸಮಸ್ಯೆಗೆ ಸ್ಪಂದಿಸಬೇಕು ಎಂಬುದು ಓದುಗಗರು ಆಗ್ರಹ.
ಜಿಲ್ಲೆಯ ಕೆಲವು ಗ್ರಂಥಾಲಯಗಳಿಗೆ ಮಾತ್ರ ಝೆರಾಕ್ಸ್ ಯಂತ್ರಗಳು ಸರಬರಾಜು ಆಗಿವೆ. ಅದರಲ್ಲಿ ಹನುಮಸಾಗರವೂ ಒಂದು. ಝೆರಾಕ್ಸ್ ಯಂತ್ರ ಹಾಗೂ ಬ್ಯಾಟರಿ ಸೌಲಭ್ಯ ಹೊಂದಿದ್ದರೂ ಇವರೆಗೆ ಝೆರಾಕ್ಸ್ ಯಂತ್ರ ಕಾರ್ಯ ನಿರ್ವಹಿಸಿಲ್ಲ. ಹೀಗಾಗಿ ಅದನ್ನು ಬಳಕೆ ಮಾಡದೇ ಹಾಗೇ ಇಡಲಾಗಿದೆ ಎಂದು ಓದುಗರರು ಬೇಸರ ವ್ಯಕ್ತಪಡಿಸಿದ್ದಾರೆ.
ಸರಕಾರದಿಂದ ಅ ಧಿಕೃತವಾಗಿ ಗ್ರಂಥಾಲಯಗಳನ್ನು ಗ್ರಾಪಂ ಅಧಿಧೀನಕ್ಕೆ ನೀಡುವ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದೆ. ಆದ್ದರಿಂದ ಗ್ರಂಥಾಲಯಕ್ಕೆ ಅವಶ್ಯವಿರುವ ಪುಸ್ತಕಗಳನ್ನು ಮತ್ತು ಗ್ರಂಥಾಲಯ ಕಟ್ಟಡ ದುರಸ್ತಿ ಹಾಗೂ ಇನ್ನಿತರೇ ವ್ಯವಸ್ಥೆಯನ್ನು ಗ್ರಾಪಂ ನೋಡಿಕೊಳ್ಳುತ್ತದೆ. –ನರಸಿಂಹಮೂರ್ತಿ, ಜಿಲ್ಲಾ ಗ್ರಂಥಾಲಯಗಳ ಮೇಲ್ವಿಚಾರಕರು.
-ವಸಂತಕುಮಾರ ವಿ. ಸಿನ್ನೂರ