Advertisement
ಮುಂಡಗೋಡ ಸರಕಾರಿ ಪ್ರೌಢಶಾಲೆ ತಾಲೂಕಿನಲ್ಲಿಯೇ ಅತಿ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿದೆ. ಬಡ ಕುಟುಂಬಗಳ ಮಕ್ಕಳೇ ಈ ಶಾಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಓದುತ್ತಿದ್ದಾರೆ. ಕಡಿಮೆ ಬಂದ ಪುಸ್ತಕ: ಕಳೆದ ವರ್ಷ ಈ ಶಾಲೆಯಲ್ಲಿ ಎಂಟನೆ ತರಗತಿಗೆ 130 ವಿದ್ಯಾರ್ಥಿಗಳು ಓದುತ್ತಿದ್ದರು. ಆದರೆ ಈ ವರ್ಷ ಒಂಬತ್ತನೇ ತರಗತಿಯಲ್ಲಿ 302 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಶಿಕ್ಷಣ ಇಲಾಖೆಯವರು ಕಳೆದ ವರ್ಷದ ಮಕ್ಕಳ ಸಂಖ್ಯಾಧಾರದ ಮೇಲೆ ಕೇವಲ 130 ಪುಸ್ತಕಗಳನ್ನು ಮಾತ್ರ ನೀಡಿದ್ದಾರೆ. ಎಲ್ಲ ವಿಷಯಗಳ ಪುಸ್ತಕಗಳು ಕೇವಲ 130 ಬಂದಿದ್ದು, ಶಾಲೆಯವರು ಬಾಲಕಿಯರಿಗೆ ಪುಸ್ತಕಗಳನ್ನು ನೀಡಿದ್ದು, ಬಾಲಕರು ಮಾತ್ರ ಪುಸ್ತಕವಿಲ್ಲದೆ ಪರದಾಡುತ್ತಿದ್ದಾರೆ. ವಿಜ್ಞಾನ ಹಾಗೂ ಗಣಿತ ವಿಷಯದ ಪಾಠಗಳನ್ನು ಓದಲಂತು ವಿದ್ಯಾರ್ಥಿಗಳು ಹೆಚ್ಚಿನ ತೊಂದರೆ ಅನುಭವಿಸುತ್ತಿದ್ದಾರೆ.
9ನೇ ತರಗತಿಯಲ್ಲಿ 302 ವಿದ್ಯಾರ್ಥಿಗಳಿದ್ದು, 172 ವಿದ್ಯಾರ್ಥಿಗಳಿಗೆ ಪುಸ್ತಕಗಳ ಕೊರತೆಯಾಗಿದೆ. -ಕೆ.ಟಿ. ಶೆಟ್ಟರ್, ಮುಖ್ಯಾಧ್ಯಾಪಕ