Advertisement
ಬಡವರ ಕಷ್ಟಕೇಳುವವರು ಯಾರು ಸ್ವಾಮಿ?…ಇದು ಕೊರೊನಾದಿಂದ ಸಂಕಷ್ಟಪಡುತ್ತಿದ್ದಸೋಂಕಿತರೊಬ್ಬರು ಬಹಿರಂಗವಾಗಿ ಜಿಲ್ಲಾ ಆಸ್ಪತ್ರೆಯಆವರಣದಲ್ಲಿ ತನ್ನ ಅಳಲನ್ನು ತೋಡಿಕೊಂಡರೆ ಅವರಕುಟುಂಬದವರು ಸೋಂಕಿತರ ಸ್ಥಿತಿ ನೋಡಿ ಕಣ್ಣೀರುಹಾಕುತ್ತಿದ್ದದ್ದು ಎಂಥವರ ಕರಳು ಹಿಂಡುವಂತಿತ್ತು.
Related Articles
Advertisement
ಪ್ರತಿದಿನ 7000 ಕೋವಿಡ್ ಪರೀಕ್ಷೆ: ಈಗಬರುತ್ತಿರುವ ಆರೋಗ್ಯ ಇಲಾಖೆಯ ಮಾಹಿತಿಪ್ರಕಾರ ಒಂದು ದಿನಕ್ಕೆ ಕನಿಷ್ಠ 1300 ರಿಂದ 1950ರಒಳಗೆ ಕೊರೊನಾ ಸೋಂಕಿತರು ಆಸ್ಪತ್ರೆಗೆದಾಖಲಾಗುತ್ತಿದ್ದಾರೆ. ಬುಧವಾರದವರೆಗೆ ಜಿಲ್ಲೆಯಲ್ಲಿಕೊರೊನಾ ಸೋಂಕಿತರು 41,856 ಇದ್ದು, ಇದೇ ರೀತಿಜಿಲ್ಲೆಯಲ್ಲಿ ಕೊರೊನಾ ತನ್ನ ವ್ಯಾಪ್ತಿಯನ್ನು ಹೆಚ್ಚುಮಾಡುತ್ತಾ ಹೋದರೆ ಮೇ ವೇಳೆಗೆ ಸೋಂಕಿತರು 60ಸಾವಿರ ಮೇಲಾಗುವ ಸಾಧ್ಯತೆ ಕಂಡು ಬಂದಿದೆ.
ಎಲ್ಲಕಡೆ ಕೊರೊನಾ ಪರೀಕ್ಷೆ ಮಾಡಿಸಲು ಜಿಲ್ಲಾಡಳಿತಕ್ರಮಕೈಗೊಂಡಿದೆ. ಒಂದು ದಿನಕ್ಕೆ 7000 ಕೋವಿಡ್‌ಪರೀಕ್ಷೆ ಮಾಡಲಾಗುತ್ತಿದೆ.ತುಮಕೂರಿನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವಹಿನ್ನೆಲೆ ಆಸ್ಪತ್ರೆಗಳ ಮುಂದೆ ಕೊರೊನಾ ಪರೀಕ್ಷೆಗೆ ಜನಸಾಲುಗಟ್ಟಿ ನಿಲ್ಲುತ್ತಿದ್ದಾರೆ ಜೊತೆಗೆ ಕೊರೊನಾಸೋಂಕಿತರು ಲ್ಯಾಬ್ ಗಳ ಮುಂದೆ ಶ್ವಾಸಕೋಶದ ಸಿಟಿಸ್ಕ್ಯಾನಿಂಗ್ ಮಾಡಿಸಲು ಕೊರೊನಾ ಪಾಸಿಟಿವ್ ಬಂದಿರುವವರು ಕಾಯುತ್ತಿರುವುದು ಸಾಮಾನ್ಯವಾಗಿದೆ.
ಸೌಲಭ್ಯ ಕಲ್ಪಿಸಲು ಜಿಲ್ಲಾಡಳಿತ ವಿಫಲ: ಕೊರೊನಾವೈರಸ್ ದಿನೇ ದಿನೆ ಹೆಚ್ಚಳವಾಗಿರುವ ಹಿನ್ನೆಲೆ ಜಿಲ್ಲಾಡಳಿತ ಅಗತ್ಯ ಕ್ರಮ ಗಳನ್ನು ಕೈಗೊಂಡಿದೆ. ಕೊರೊನಾಸೋಂಕಿತರಿಗೆ ಚಿಕಿತ್ಸೆ ನೀಡಲು ಜಿಲ್ಲಾ ಕೇಂದ್ರತುಮಕೂರಿ ನಲ್ಲಿ 200 ಹಾಸಿಗೆಗಳು ಉಳಿದಂತೆಸಿದ್ಧಾರ್ಥ ಆಸ್ಪತ್ರೆಯಲ್ಲಿ 110 ಶ್ರೀದೇವಿ ಆಸ್ಪತ್ರೆಯಲ್ಲಿ125, ಸೂರ್ಯ ಆಸ್ಪತ್ರೆಯಲ್ಲಿ 30, ಪೃಥ್ವಿ ಆಸ್ಪತ್ರೆಯಲ್ಲಿ30 ಹಾಸಿಗೆಗಳು ಸೇರಿದಂತೆ ವಿವಿಧ ಆಸ್ಪತ್ರೆ ಕೋವಿಡ್‌ಆಸ್ಪತ್ರೆಯಂದು ಘೋಷಿಸಿದೆ. ಕಳೆದ ವರ್ಷಆರಂಭವಾಗಿದ್ದ ಅಶ್ವಿನಿ ಆಯುರ್ವೇದಿಕ್ ಆಸ್ಪತ್ರೆಸೇರಿದಂತೆ ವಿವಿಧ ಆಸ್ಪತ್ರೆಗಳಲ್ಲಿ ಇನ್ನು ಕೋವಿಡ್‌ರೋಗಿಗಳ ದಾಖಲಾತಿ ಆರಂಭವಾಗಿಲ್ಲ.
ಸೋಂಕಿತರುಹೆಚ್ಚಾದರೆ ಎಲ್ಲ ಕಡೆ ಚಿಕಿತ್ಸೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಡಳಿತ ಹೇಳುತ್ತಿದೆ. ಅದುಈವರೆಗೂ ಸಾಧ್ಯವಾಗಿಲ್ಲ, ಅಲ್ಲದೆ ಪ್ರತಿ ತಾಲೂಕಿನಲ್ಲಿ50 ಹಾಸಿಗೆಗಳು ಲಭ್ಯವಿದೆ. ಸೋಂಕಿತರ ಸಂಖ್ಯೆಗೆಅನುಗುಣವಾಗಿ ಸೌಲಭ್ಯ ಕಲ್ಪಿಸಲು ಜಿಲ್ಲಾಡಳಿತಸಿದ್ಧವಾಗಿದೆ. ಆದರೆ, ರೋಗಿಗಳ ಸಂಖ್ಯಾ ವೇಗಕ್ಕೆಸೌಲಭ್ಯ ಕಲ್ಪಿಸಲು ಜಿಲ್ಲಾಡಳಿತದಿಂದ ಆಗುತ್ತಿಲ್ಲ.
ಚಿ.ನಿ.ಪುರುಷೋತ್ತಮ್