Advertisement

ಹುಣಸೂರು: ಸಿಂಗರಮಾರನಹಳ್ಳಿ ಗ್ರಾಮದ ಮೂಲಭೂತ ಸೌಕರ್ಯಕ್ಕೆ ಒತ್ತಾಯ, ಮನವಿ ಸಲ್ಲಿಕೆ

06:07 PM Jun 07, 2022 | Team Udayavani |

ಹುಣಸೂರು:  ತಾಲೂಕಿನ ಸಿಂಗರಮಾರನಹಳ್ಳಿ ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಬಗ್ಗೆ ಗ್ರಾಮಸ್ಥರು ಹಲವಾರು ಬಾರಿ ಶಾಸಕರು , ಸಂಸದರು , ತಾಲ್ಲೂಕು ಹಾಗೂ ಜಿಲ್ಲಾಡಳಿತಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ಬೇಸತ್ತ ಸಿಂಗರಮಾರನಹಳ್ಳಿ ಗ್ರಾಮಸ್ಥರು, ಪಂಚಾಯಿತಿ ಸದಸ್ಯರುಗಳು ಮತ್ತು ಸತ್ಯ  ಎಂಎಎಸ್ ಫೌಂಡೇಶನ್ ಅಧ್ಯಕ್ಷ ಸತ್ಯಪ್ಪ  ನೇತೃತ್ವದಲ್ಲಿ ಮಂಗಳವಾರ ಸಿಂಗರಮಾರನಹಳ್ಳಿ ಗ್ರಾಮದ ಅರಳಿ ಮರದ ಬಳಿ ಸಭೆ ಸೇರಿ ತಮ್ಮೂರಿನ ಸಮಸ್ಯೆಗಳ ಕುರಿತು  ಮನವಿ ಮಾಡಿದರೂ ಸ್ಪಂದಿಸದ ಜನಪ್ರತಿನಿಧಿಗಳು ಹಾಗೂ ತಾಲೂಕು ಆಡಳಿತದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

Advertisement

ಈ ವೇಳೆ ಮಾತನಾಡಿದ ಗ್ರಾಮದ ಮುಖಂಡ ರವಿ. ಗ್ರಾ.ಪಂ.ಸದಸ್ಯ ದೇವರಾಜು ಮತ್ತಿತರರು ಸಿಂಗರಮಾರನಹಳ್ಳಿ ಗ್ರಾಮದಲ್ಲಿ ಸುಮಾರು 3000 ಜನಸಂಖ್ಯೆಯಿದ್ದು ,  5 ಮಂದಿ ಗ್ರಾಮ ಪಂಚಾಯಿತಿ ಸದಸ್ಯರಿದ್ದರೂ ಸಮಸ್ಯೆ ಬಗೆಹರಿಸುವಲ್ಲಿ ವಿಫಲರಾಗಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.

ವಿಷಯ ತಿಳಿದ  ಸತ್ಯ ಎಂ.ಎ.ಎಸ್ ಫೌಂಡೇಶನ್ ಅಧ್ಯಕ್ಷ ಸತ್ಯಪ್ಪ ಗ್ರಾಮಸ್ಥರಿಗೆ  ತಮ್ಮ ಬೆಂಬಲ ವ್ಯಕ್ತಪಡಿಸಿ ನಂತರ ಮಾತನಾಡಿ ಶಾಸಕರು , ಸಂಸದರು ಹಾಗೂ ತಾಲ್ಲೂಕು ಆಡಳಿತ ಮತ್ತು ಜಿಲ್ಲಾಡಳಿತದ ನಿರ್ಲಕ್ಷ್ಯದಿಂದಾಗಿ ವಿದ್ಯಾರ್ಥಿಗಳು. ರೈತರು ಬವಣೆ ಪಡುಮತಾಗಿದೆ. ದುಪ್ಪಟು ಹಣ ನೀಡಿ ಖಾಸಗಿ ವಾಹನಗಳಲ್ಲಿ ಓಡಾಡುವಂತಾಗಿದೆ.  ಶಾಸಕರು ಆಯ್ಕೆಯಾಗಿ ಒಂದು ಬಾರಿ ಮಾತ್ರ ಗ್ರಾಮಕ್ಕೆ ಭೇಟಿ ನೀಡಿದ್ದು , ನಂತರ ಗ್ರಾಮದ ಅಭಿವೃದ್ಧಿಯ ಬಗ್ಗೆ ತೀವ್ರ ನಿರ್ಲಕ್ಷ್ಯ ವಹಿಸಿರುತ್ತಾರೆಂದು ಆರೋಪಿಸಿ.ಇನ್ನು ಹದಿನೈದು ದಿನದ ಒಳಗೆ ಸಿಂಗರಮಾರನಹಳ್ಳಿ ಗ್ರಾಮಕ್ಕೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಬೇಕು ಇಲ್ಲದಿದ್ದಲ್ಲಿ ವಿದ್ಯಾರ್ಥಿಗಳು ಹಾಗೂ ರೈತರೊಡಗೂಡಿ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸುವ ಜೊತೆಗೆ  ಮುಂಬರುವ ಚುನಾವಣೆಗಳಿಗೆ ಬಹಿಷ್ಕಾರ ಹಾಕಲಾಗುವುದು ಎಂದು ಎಚ್ಚರಿಸಿದರು.

ನಂತರ ಹುಣಸೂರಿನ ಉಪವಿಭಾಗಾಧಿಕಾರಿಗಳ ಕಚೇರಿ ವ್ಯವಸ್ಥಾಪಕರಿಗೆ ಸಲ್ಲಿಸಿದರು.

ಬೇಡಿಕೆಗಳಿವು:

  • ಸಿಂಗರಮಾರನಹಳ್ಳಿ ಗ್ರಾಮ ಪಂಚಾಯಿತಿ ಕೇಂದ್ರವಾಗಿದ್ದು , ಕಳೆದ 4 ವರ್ಷಗಳಿಂದ ಬಸ್‌ಗಳ ಸಂಚಾರ ಇರುವುದಿಲ್ಲ . ಬಸ್ ಸಂಚಾರ ಪ್ರಾರಂಭಿಸಬೇಕು .
  • ಆಲನಹಳ್ಳಿ , ಕ್ಯಾತನಹಳ್ಳಿ ಮಾರ್ಗವಾಗಿ ಸಿಂಗರಮಾರನಹಳ್ಳಿ ಗ್ರಾಮಕ್ಕೆ ಹಾಗೂ ಹೆಚ್.ಡಿ. ಕೋಟೆಯಿಂದ ಗದ್ದಿಗೆ ಮಾರ್ಗ ವಾಗಿ ಹಾಗೂ ಹುಣಸೂರು – ಬೆಂಕಿಪುರ – ಸಿಂಗರಮಾರನಹಳ್ಳಿಗೆ ಮಾರ್ಗವಾಗಿ ದಿನಕ್ಕೆ 4 ಟ್ರಿಪ್ ಬಸ್ ಸಂಚಾರ ವ್ಯವಸ್ಥೆ ಕಲ್ಪಿಸಿಕೊಡಬೇಕು .
  • ಗದ್ದಿಗೆ , ಸೋನಹಳ್ಳಿ , ದೇವಗಳ್ಳಿ , ಸಿಂಗರಮಾರನಹಳ್ಳಿಗೆ ಸಂಪರ್ಕ ಕಲ್ಪಿಸುವ ಸುಮಾರು 4 ಕಿ . ಮೀ ರಸ್ತೆ ಹಳ್ಳಕೊಳ್ಳಗಳಿಂದ ಕೂಡಿದ್ದು , ಸದರಿ ರಸ್ತೆಯನ್ನು ಅಭಿವೃದ್ಧಿಪಡಿಸಬೇಕು .
  • ಸಿಂಗರಮಾರನಹಳ್ಳಿ ಕೆರೆ , ಸಿದ್ಧನಕಟ್ಟೆಗೆ ಹೆಬ್ಬಾಳ , ಸೂಳೆಕೆರೆಯಿಂದ ನೀರು ತುಂಬಿಸಬೇಕು ಅಥವಾ ಕಬಿನಿಯಿಂದ ಏತ ನೀರಾವರಿ ಯೋಜನ ಮೂಲಕ ನೀರು ಒದಗಿಸಬೇಕು .
  • ಗ್ರಾಮದಲ್ಲಿ ಕೃಷಿ ಚಟುವಟಿಕೆಗಳಿಗೆ ಹಾಗೂ ಇನ್ನಿತರೆ ವ್ಯವಹಾರಗಳಿಗೆ ಸಹಕಾರ ಬ್ಯಾಂಕ್ ಇರುವುದಿಲ್ಲ . ಆದ್ದರಿಂದ ಸಹಕಾರ ಇಲಾಖೆಯಿಂದ ಗ್ರಾಮದಲ್ಲಿ . ವಿ.ಎಸ್.ಎಸ್.ಎನ್ . ಸಹಕಾರ ಸಂಘ ತೆರೆದು ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡಬೇಕು .
  • ಗ್ರಾಮದ ಸರಹದ್ದಿನಲ್ಲಿ ಚರಂಡಿ , ರಸ್ತೆ ಅಭಿವೃದ್ಧಿಪಡಿಸಬೇಕು ಹಾಗೂ ಗ್ರಾಮದಲ್ಲಿರುವ ಸ್ಮಶಾನ ಅಭಿವೃದ್ಧಿಪಡಿಸಬೇಕು .
  • ಪಶು ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಗಳು ಕರ್ತವ್ಯಕ್ಕೆ ಸರಿಯಾಗಿ ಹಾಜರಾಗುತ್ತಿಲ್ಲ ಇದರಿಂದ ಗ್ರಾಮಸ್ಥರು ಬಹಳ ತೊಂದರೆ ಅನುಭವಿಸುತ್ತಿದ್ದಾರ . ವೈದ್ಯಾಧಿಕಾರಿಗಳು ಸಕಾಲಕ್ಕೆ ಕರ್ತವ್ಯಕ್ಕೆ ಹಾಜರಾಗುವಂತೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು.
  • ಸಿಂಗರಮಾರನಹಳ್ಳಿ ಗ್ರಾಮ ಪಂಚಾಯಿತಿ ಕೇಂದ್ರವಾಗಿರುವುದರಿಂದ ಗ್ರಾಮದಲ್ಲಿ ಆರೋಗ್ಯ ಉಪಕೇಂದ್ರ ತೆರೆಯಬೇಕು .
  • ಸಮುದಾಯ ಭವನಗಳನ್ನು ನಿರ್ಮಿಸಿಕೊಡಬೇಕು . ಹಾಗೂ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಬೇಕು.
Advertisement
Advertisement

Udayavani is now on Telegram. Click here to join our channel and stay updated with the latest news.

Next