Advertisement

ಕೋರ್ಲಹಳ್ಳಿ ಸರಕಾರಿ ಶಾಲೆಗೆ ಮೂಲ ಸೌಲಭ್ಯ ಕೊರತೆ

11:31 AM Jul 20, 2019 | Team Udayavani |

ಮುಂಡರಗಿ: ತಾಲೂಕಿನ ಕೋರ್ಲಹಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಲವು ಮೂಲ ಸೌಲಭ್ಯಗಳ ಕೊರತೆ ಕಾಡುತ್ತಿದೆ. ಶಾಲೆ ಆವರಣದಲ್ಲಿರುವ ಕೊಳವೆಬಾವಿಯ ಸ್ಟಾರ್ಟರ್‌ಗಳು ಮಕ್ಕಳ ಜೀವಕ್ಕೆ ಮಾರಕವಾಗಿ ಪರಿಣಮಿಸಿವೆ.

Advertisement

ಶಾಲೆಯ ಆವರಣದಲ್ಲಿ ಮೂರು ಕೊಳವೆಬಾವಿಗಳನ್ನು ಗ್ರಾಮ ಪಂಚಾಯಿತಿಯಿಂದ ಕೊರೆಯಿಸಿ ಗ್ರಾಮಕ್ಕೆ ನೀರು ಪೂರೈಕೆ ಮಾಡಲಾಗುತ್ತಿದೆ. ಜೊತೆಗೆ ಶುದ್ಧ ಕುಡಿಯುವ ನೀರಿನ ಘಟಕಕ್ಕೂ ಈ ಕೊಳವೆಬಾವಿಯ ನೀರೇ ಗತಿಯಾಗಿದ್ದರೂ ಶುದ್ಧ ನೀರಿನ ಘಟಕವು ಸ್ಥಗಿತಗೊಂಡಿದೆ. ಜೊತೆಗೆ ಶಾಲೆಯ ಬಿಸಿಯೂಟದ ಅಡುಗೆಗೆ ನೀರು ಬೇಕೆಂದರೆ ಅಡುಗೆಯವರು ಗ್ರಾಮದ ಬೇರೆಡೆಯಿಂದ ಹೊತ್ತು ತರಬೇಕಾಗಿರುವ ಅನಿವಾರ್ಯತೆಯಿದೆ. ಒಂದು ಕೊಳವೆ ಬಾವಿಯ ನೀರು ಸೋರಿಕೆಯಾಗಿ ಶಾಲಾ ಆವರಣದ ಮೈದಾನದಲ್ಲಿ ನಿಲ್ಲುತ್ತದೆ. ಈ ನೀರಿನಲ್ಲಿ ಏನಾದರೂ ವಿದ್ಯುತ್‌ ಪ್ರವಹಿಸಿದರೆ ಅನಾಹುತ ತಪ್ಪಿದ್ದಲ್ಲ.

ಕೊಳವೆಬಾವಿಗೆ ಅಳವಡಿಸಿರುವ ಸ್ಟಾರ್ಟರ್‌ಗಳು ನೆಲಕ್ಕೆ ಸಮೀಪ ಇರುವುದರಿಂದಾಗಿ ಶಾಲೆ ಮಕ್ಕಳ ಕೈಗೆ ಎಟುಕುತ್ತವೆ. ಆವರಣದಲ್ಲಿ ಆಟ ಆಡುವಾಗ ಮಕ್ಕಳು ಸ್ಟಾರ್ಟರ್‌ ಮುಟ್ಟಿ ಏನಾದರೂ ಅವಘಢ ಸಂಭವಿಸಿದರೆ ಅದಕ್ಕೆ ಹೊಣೆಗಾರರು ಯಾರು ಎನ್ನುವಂತಾಗಿದೆ. ಈ ಸಮಸ್ಯೆಗೆ ಪರಿಹಾರವನ್ನು ಗ್ರಾಮ ಪಂಚಾಯಿತಿ ಮತ್ತು ಶಾಲಾ ಆಡಳಿತ ಹಾಗೂ ಶಿಕ್ಷಕರು ತಗೆದುಕೊಳ್ಳಬೇಕಾಗಿದೆ.

ಅಲ್ಲದೇ ಶಾಲಾ ಆವರಣದಲ್ಲಿ ಮಕ್ಕಳಿಗೆ ಶೌಚಾಲಯದ ಸಮಸ್ಯೆಯಿದ್ದು, ಇರುವ ಶೌಚಾಲಯಗಳು ಬಿದ್ದು ಹೋಗಿವೆ. ಇದರಿಂದ ಮಕ್ಕಳು ಬಯಲನೇ ಆಶ್ರಯಿಸಬೇಕಿದೆ. ಶಾಲೆ ಮುಂದೆ ರಾಜ್ಯ ಹೆದ್ದಾರಿ ಹಾಯ್ದು ಹೋಗಿದ್ದು, ಶಾಲೆಗೆ ಕಾಂಪೌಂಡ್‌ ಗೋಡೆಯ ಗೇಟು ಅಳವಡಿಸಬೇಕಿದೆ. ಇಲ್ಲದಿದ್ದರೆ ಅಪಘಾತ ಸಂಭವಿಸುವ ಸಾಧ್ಯತೆಗಳಿವೆ. ಆದ್ದರಿಂದ ಕೊಡಲೇ ಬಿಇಒ ಶಾಲೆಗೆ ಭೇಟಿ ನೀಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಾಗಿದೆ.

Advertisement

ಶಾಲೆಯಲ್ಲಿ ಹಲವಾರು ಸಮಸ್ಯೆಗಳಿದ್ದು, ಪರಿಹಾರಕ್ಕಾಗಿ ಬಿಇಒ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು.•ಪ್ರಶಾಂತ ಪುರದ, ಕರ್ನಾಟಕ ರಕ್ಷಣಾ ವೇದಿಕೆ ಯುವ ಘಟಕ ಅಧ್ಯಕ್ಷ

ಶಾಲೆ ಮೂಲ ಸೌಲಭ್ಯಗಳ ಕುರಿತು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಅಲ್ಲದೇ ಮಕ್ಕಳ ಸುರಕ್ಷತೆ ಬಗ್ಗೆ ಸೂಚನೆಯನ್ನು ನೀಡಲಾಗಿದೆ. ಮೂಲ ಸೌಲಭ್ಯಗಳಾದ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಹಲವು ಸೌಲಭ್ಯಗಳ ಸುಧಾರಣೆಗಾಗಿ 1.05 ಲಕ್ಷ ಅನುದಾನ ನೀಡಲಾಗಿದೆ. ಮಾರ್ಚ್‌ ಅಂತ್ಯದಲ್ಲಿ ಅನುದಾನವನ್ನು ಬ್ಯಾಂಕಿನಿಂದ ತೆಗೆದುಕೊಂಡು ಮುಖ್ಯಶಿಕ್ಷಕರು ಸದ್ಭಳಕೆ ಮಾಡದೇ ಇರುವುದರಿಂದಾಗಿ ನೋಟಿಸ್‌ ನೀಡಿ ಮುಖ್ಯಶಿಕ್ಷಕರ ಎರಡು ತಿಂಗಳಿಂದ ಸಂಬಳವನ್ನು ತಡೆ ಹಿಡಿಯಲಾಗಿದೆ.•ಎಸ್‌.ಎನ್‌. ಹಳ್ಳಿಗುಡಿ, ಬಿಇಒ

Advertisement

Udayavani is now on Telegram. Click here to join our channel and stay updated with the latest news.

Next