Advertisement

Lack of Ambulance: ಎಚ್‌.ಡಿ.ಕೋಟೆ ಆಸ್ಪತ್ರೇಲಿ ಆ್ಯಂಬುಲೆನ್ಸ್ ಇಲ್ಲ!

03:59 PM Jan 04, 2024 | Team Udayavani |

ಎಚ್‌.ಡಿ.ಕೋಟೆ: ತಾಲೂಕು ಸಾರ್ವಜನಿಕ ಆಸ್ಟತ್ರೆಯ 108 ವಾಹನ ರಿಪೇರಿಗೆ ತೆರಳಿ ಒಂದೂವರೆ ತಿಂಗಳು ಸಮೀಪಿಸಿದರೂ ವಾಪಸ್‌ ಬಾರದ ಕಾರಣ, ಆಸ್ಪತ್ರೆಗೆ ಕಾಡಂಚಿನ ಗ್ರಾಮ ಸೇರಿದಂತೆ ದೂರದ ಊರು ಗಳಿಂದ ಬರುವ ರೋಗಿಗಳ ತುರ್ತು ಸೇವೆಗೆ ವಾಹನ ಸಿಗದೆ ಬಡ ರೋಗಿಗಳ ಪಾಡು ಹೇಳತೀರದಾಗಿದೆ.

Advertisement

ತಾಲೂಕು ಆಸ್ಪತ್ರೆಯ ಜಡ್ಡುಗಟ್ಟಿದ ದುರಾಡಳಿತ, ವ್ಯವಸ್ಥೆಯಿಂದಾಗಿ ತಾಲೂಕು ಕೇಂದ್ರದ ಆಸ್ಪತ್ರೆ ಆಶ್ರಯಿಸಿ ಬರುವ ಸಾವಿರಾರು ರೋಗಿಗಳಿಗೆ ವೆಂಟಿ ಲೇಟರ್‌ ತುರ್ತು ಚಿಕಿತ್ಸೆಗೆ ಅತ್ಯಾಧುನಿಕ ಸೌಲಭ್ಯವುಳ್ಳ 108 ತುರ್ತುವಾಹನ ರಿಪೇರಿಯಾಗಿ ಸ್ಥಗಿತಗೊಂಡು ಒಂದೂವರೆ ಕಳೆದರೂ ವಾಪಸ್‌ ರೋಗಿಗಳ ಸೇವೆಗೆ ಸಿಗದ ಕಾರಣ ರೋಗಿಗಳು ಸೇರಿದಂತೆ ಸಾರ್ವಜನಿಕರು ಭಾರೀ ತೊಂದರೆ ಅನುಭವಿಸಬೇಕಾದ ದುಸ್ಥಿತಿ ಬಂದಿದೆ.

ತಾಲೂಕು ಆರೋಗ್ಯಾಧಿಕಾರಿಯ ನಿರ್ಲಕ್ಷ್ಯ: ಈ ಬಗ್ಗೆಇಲ್ಲಿನ ತಾಲೂಕು ಆರೋಗ್ಯಾಧಿಕಾರಿಗಳನ್ನು ಪ್ರಶ್ನಿಸಿದರೇ ಕೆಟ್ಟಿದೆ ನಿಜ, ವಾಹನ ಬಿಡಿಭಾಗಗಳನ್ನು ಬಾಂಬೆಯಿಂದ ತರಿಸಬೇಕು ಎಂದು ಹೇಳಿದ್ದಾರೆ. ಬೇಗ ಕೊಡಿ ಎಂದು ಜಿವಿಕೆ ಸಂಸ್ಥೆಯವರಿಗೆ ಮನವಿ ಮಾಡಿದ್ದೇವೆ, ಈಗ ಬೇರೆ ಆಸ್ಪತ್ರೆಗಳಲ್ಲಿರುವ 3 ವಾಹನಗಳನ್ನು ತುರ್ತು ಸೇವೆಗೆ ಕರೆಸುಕೊಳ್ಳುತ್ತಿದ್ದೇವೆ ಎಂದು ಜಾರಿಕೊಳ್ಳುತ್ತಾರೆ.

ಗಡಿಭಾಗದ ಜನರಲ್ಲಿ ನಡುಕ: ಇನ್ನೂ ಕೊರೊನಾ ಹೊಸ ರೂಪಾಂತರಿ ಜೆಎನ್‌1 ಸೋಂಕು ನೆರೆಯ ಕೇರಳ ಮತ್ತು ತಮಿಳುನಾ ಡಿನಲ್ಲಿ ಆರ್ಭಟಿಸುತ್ತಿದೆ. ಎಚ್‌.ಡಿ.ಕೋಟೆ ತಾಲೂಕು ಕೇರಳ ರಾಜ್ಯದೊಂದಿಗೆ ಗಡಿ ಹಂಚಿಕೊಂಡಿ ರುವುದರಿಂದ ಇಲ್ಲಿನ ಗಡಿಭಾಗದ ಜನರು ಈಗಾಗಲೇ ಜರ್ಜರಿತರಾಗಿದ್ದಾರೆ. ಜೊತೆಗೆ ತಾಲೂಕು ಭೌಗೊಳಿಕವಾಗಿ ತುಂಬಾ ದೊಡ್ಡ ವಿಸ್ತೀರ್ಣ ಹೊಂದಿರುವುದರಿಂದ ಗಡಿಭಾಗ ಮತ್ತು ಕಾಂಡಚಿನ ಗ್ರಾಮಗಳನ್ನು ತಲುಪಬೇಕಾದರೆ 40 ರಿಂದ 50 ಕಿ.ಮೀ. ಕ್ರಮಿಸಬೇಕಿದೆ.

ಈ ನಡುವೆ ತಾಲೂಕು ಕೇಂದ್ರದ ಸಾರ್ವಜನಿಕ ಆಸ್ಪತ್ರೆ 108 ಆ್ಯಂಬುಲೆನ್ಸ್‌ ವಾಹನ ತುರ್ತು ಸೇವೆಗೆ ಸಿಗದೆ ರೋಗಿಗಳು ಪರಿತಪಿಸುತ್ತಿದ್ದಾರೆ. ಈ ನಡುವೆ ಕೊರೊನಾ ಹೊಸ ಅಲೆ ಭಯ ಜನರಲ್ಲಿ ಮತ್ತಷ್ಟು ಆತಂಕ ಸೃಷ್ಟಿಸಿದೆ. ಇದೆಲ್ಲ ಗೊತ್ತಿದ್ದರೂ ಇಲ್ಲಿನ ತಾಲೂಕು ಆರೋಗ್ಯಾಧಿಕಾರಿಗಳು ಮಾತ್ರ ರಿಪೇರಿ ಹೋಗಿದ್ದ ವಾಹನವನ್ನು ತ್ವರಿತವಾಗಿ ವಾಪಸ್‌ ತರಿಸುವ ಗೋಜಿಗೆ ಮುಂದಾಗದೆ ಟಾಸ್ಕ್ಫೋರ್ಸ್‌ ಸಭೆಯಲ್ಲಿ ಭಾಷಣ ಮಾಡಿಕೊಂಡು ಕಾಲಹರಣ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

Advertisement

ಸಭೆಗೆ ಬಾರದ ತಾಲೂಕು ಮಟ್ಟದ ಅಧಿಕಾರಿಗಳು :  ಜೆಎನ್‌ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಆಗೊಮ್ಮೆ ಈಗೊಮ್ಮೆ ತಾಲೂಕು ಮಟ್ಟದ ಅಧಿಕಾರಿಗಳ ಟಾಸ್ಕ್ ಫೋರ್ಸ್‌ ಸಭೆ ಕರೆದು ಸುಮ್ಮನಾಗುವ ತಹಶೀಲ್ದಾರ್‌ ಇಲ್ಲಿನ ದಂಡಾಧಿಕಾರಿಯಾಗಿ ಅಧಿಕಾರಿ ವಹಿಸಿಕೊಂಡು ತಿಂಗಳು ಆಗಿಲ್ಲ, ಹಾಗಾಗಿ ಇವರಿಗೆ ತಾಲೂಕಿನ ಪರಿಚಯವೇ ಇಲ್ಲ, ಇವರು ಕರೆದ ತಾಲೂಕು ಮಟ್ಟದ ಟಾಸ್ಕ್ ಫೋರ್ಸ್‌ ಸಭೆಗೆ ಬೆರಳಂಕಿಯಷ್ಟು ಮಂದಿ ತಾಲೂಕು ಮಟ್ಟದ ಅಧಿಕಾರಿಗಳು ಮಾತ್ರ ಹಾಜರಿರುತ್ತಾರೆ. ಸಭೆಗೆ ತಾಲೂಕು ಮಟ್ಟದ ಅಧಿಕಾರಿಗಳು ಬಾರದೆ ಕಚೇರಿಯ ಗುಮಾಸ್ತರೇ ತುಂಬಿರುವುದನ್ನು ಕಾಣುತ್ತೇವೆ.

ಸಾರ್ವಜನಿಕ ಆಸ್ಪತ್ರೆ 108 ಆ್ಯಂಬುಲೆನ್ಸ್‌ ತುರ್ತು ವಾಹನ ರಿಪೇರಿಗೆ ಹೋಗಿದೆ ನಿಜ. ವಾಹನ ಸ್ಪೇರ್‌ಪಾಟ್ಸ್‌ ಸಿಗುತ್ತಿಲ್ಲ, ಬಾಂಬೆಯಿಂದ ಬರಬೇಕು ಎಂದು ಜಿವಿಕೆ ಸಂಸ್ಥೆಯವರು ಹೇಳುತ್ತಿದ್ದಾರೆ, ವಾಹನ ರಿಪೇರಿಯಾಗದಿದ್ದರೇ ಹೊಸ ವಾಹನವನ್ನೇ ಕೊಡಿ ಎಂದು ಸಂಸ್ಥೆಗೆ ಮನವಿ ಮಾಡಿದ್ದೇವೆ. ಈಗ ತಾಲೂಕಿನ ಹಂಪಾಪುರ, ಅಂತರಸಂತೆ ಹಾಗೂ ಸರಗೂರು ತಾಲೂಕು ಕೇಂದ್ರ 108 ಆ್ಯಂಬುಲೆನ್ಸ್‌ ವಾಹನಗಳನ್ನು ತುರ್ತು ಸೇವೆಗೆ ಕರೆಸಿಕೊಳ್ಳುತ್ತಿದ್ದೇವೆ.‌ -ಡಾ.ರವಿಕುಮಾರ್‌, ಟಿಎಚ್‌ಒ, ಎಚ್‌.ಡಿ.ಕೋಟೆ ತಾಲೂಕು

Advertisement

Udayavani is now on Telegram. Click here to join our channel and stay updated with the latest news.

Next