Advertisement
ಇಂದು ಉಡುಪುಗಳು ಕೇವಲ ಧರಿಸುವುದಕ್ಕೆ ಮಾತ್ರವಲ್ಲ. ಅದೊಂದು ಟ್ರೆಂಡ್ ಆಗಿದೆ. ಉಡುಪಿನಲ್ಲಿ ಏನೇನು ವಿಶೇಷತೆ ಮಾಡಬಹುದೆಂದು ಎಲ್ಲರೂ ಆಲೋಚಿಸುತ್ತಾರೆ. ಸರಳ ಉಡುಗೆಗಳಲ್ಲಿ ಸ್ವಲ್ಪ ಆಡಂಬರದ ಕಸೂತಿ ಹಾಕುವುದು ಇಂದಿನ ಲೇಟೆಸ್ಟ್ ಟ್ರೆಂಡ್‌ಗಳಲ್ಲಿ ಒಂದು. ಅದು ಪುರುಷರ ಶರ್ಟ್‌ನಿಂದ ಹಿಡಿದು ಮಹಿಳೆಯರ ಬ್ಲೌಸ್‌ವರೆಗೆ ಎಲ್ಲದರಲ್ಲಿಯೂ ಹಾಕಲ್ಪಡುತ್ತದೆ. ಹೀಗೆ ಕಸೂತಿ ಹಾಕುವುದು ಇಂದು ಉದ್ಯಮವಾಗಿದೆ. ಸಾಲು, ಸಾಲು ಅವಕಾಶಗಳು ಕಸೂತಿ ಫೀಲ್ಡ್‌ನಲ್ಲಿವೆೆ. ಚಿತ್ರ, ಡಿಸೈನ್‌ಗಳಲ್ಲಿ ಆಸಕ್ತಿ ಇರುವ ಯಾರಿಗೂ ಕಸೂತಿ ಕಲೆಯನ್ನು ಉದ್ಯಮವಾಗಿ ಮಾಡಬಹುದು.
ಉತ್ತಮ ವಿದ್ಯಾರ್ಹತೆ ಇದ್ದರೆ ಮಾತ್ರ ಜೀವನದಲ್ಲಿ ಮುಂದೆ ಬರಬಹುದೆಂಬ ಕಲ್ಪನೆ ಎಲ್ಲರಿಗೂ ಇದೆ. ಹೆಚ್ಚು ಕಲಿತರೂ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದವರು ಮಾತ್ರ ಜೀವನ ರೂಪಿಸುತ್ತಾರೆಂದು ತಪ್ಪು ತಿಳಿದಿರುವ ಹೆಚ್ಚಿನ ಹೆತ್ತವರು ತಮ್ಮ ಮಕ್ಕಳನ್ನು ಹೆಚ್ಚು ಓದುವಂತೆ ಒತ್ತಡ ಹೇರುತ್ತಾರೆ. ಅದರ ಬದಲಾಗಿ ಮಕ್ಕಳ ಇತರ ಆಸಕ್ತಿಗಳನ್ನು ಪ್ರೋತ್ಸಾಹಿಸಿದರೆ ಅವರೂ ಉನ್ನತ ಸ್ಥಾನವನ್ನು ಅಲಂಕರಿಸುತ್ತಾರೆ. ಕಸೂತಿ ಕಲೆಯನ್ನು ಕಲಿಯಲು ಕೆಲವು ಶಿಕ್ಷಣ ಸಂಸ್ಥೆಗಳಲ್ಲಿ ಎಂಬ್ರಾಯxರಿ ಕೋರ್ಸ್‌ಗಳಿವೆ. 2 ತಿಂಗಳಿನಿಂದ 2 ವರ್ಷಗಳ ತನಕ ಇರುವ ಬೇರೆ ಬೇರೆ ವಿಧದ ಕೋರ್ಸ್‌ಗಳಿವೆ. ನಮ್ಮ ಕಲಿಕೆ ಆಸಕ್ತಿಗನುಸಾರವಾಗಿ ಆಯ್ದಯಕೊಳ್ಳಬಹುದು. ಅರೆಕಾಲಿಕ ಉದ್ಯೋಗ
ಕಸೂತಿಯನ್ನು ಉದ್ಯೋಗವಾಗಿ ಆಯ್ದುಕೊಳ್ಳುವವರಿಗೆ ಎರಡು ವಿಧದ ಅವಕಾಶಗಳಿವೆ. ಅರೆಕಾಲಿಕ ಹಾಗೂ ಪೂರ್ಣಕಾಲಿಕವಾಗಿ ಇದನ್ನು ಆಯ್ದುಕೊಳ್ಳಬಹುದು. ಬೇರೆ ಉದ್ಯೋಗದಲ್ಲಿದ್ದು ಕಸೂತಿ ನಿಮ್ಮ ಪ್ಯಾಶನ್ ಆಗಿದ್ದರೆ ಇದನ್ನೊಂದು ಅರೆಕಾಲಿಕ ಉದ್ಯೋಗವಾಗಿ ಆಯ್ದುಕೊಳ್ಳಬಹುದು. ವಿದ್ಯಾಭ್ಯಾಸದ ನಡುವೆ ಕಸೂತಿ ತರಬೇತಿ ಪಡೆದು ಶಿಕ್ಷಣದ ಜತೆಗೆ ಆದಾಯದ ಮಾರ್ಗವನ್ನು ರೂಪಿಸಿಕೊಳ್ಳಬಹುದು. ನಿಮ್ಮ ಪಾಕೆಟ್‌ಮನಿಯನ್ನು ನೀವೇ ತಯಾರಿಸಲು ಇದು ಸಹಕಾರಿ. ಪದವಿ ಮುಗಿಸಿ ಕಸೂತಿ ಕೋಚಿಂಗ್ ಪಡೆದು ಅದನ್ನು ಪೂರ್ಣಾಕಾಲಿಕ ಉದ್ಯೋಗವಾಗಿ ಆಯ್ದುಕೊಳ್ಳಬಹುದು. ಸ್ವತಃ ಉದ್ಯಮದಲ್ಲಿ ತೊಡಗುವ ಆಸಕ್ತ ಇರುವವರಿಗೂ ಇದು ಸಹಕಾರಿ. ಅಥವಾ ಪ್ರತಿಷ್ಠಿತ ಡಿಸೈನರ್ ಕಂಪೆನಿಗಳಲ್ಲಿ ಉದ್ಯೋಗ ಲಭಿಸುತ್ತದೆ,
Related Articles
Advertisement