ಪಂಜಾಬ್: ಅಪರಾಧಿಗಳನ್ನು ಪತ್ತೆಹಚ್ಚುವ ಕೆಲಸದಲ್ಲಿ ಪೊಲೀಸರಂತೆ ಶ್ವಾನದ ಪಾತ್ರವೂ ಮುಖ್ಯವಾಗಿರುತ್ತದೆ. ಬಾಂಬ್, ಡ್ರಗ್ಸ್, ಕೆಮಿಕಲ್ಸ್ ಗಳನ್ನು ವಾಸನೆ ಮೂಲಕ ಪತ್ತೆ ಹಚ್ಚುವ ಕಾರ್ಯಾಚರಣೆಯಲ್ಲಿ ಶ್ವಾನವನ್ನು ಬಳಸಲಾಗುತ್ತದೆ. ಅದಕ್ಕಾಗಿ ವಿಶೇಷ ತರಬೇತಿಯನ್ನು ನೀಡಲಾಗಿರುತ್ತದೆ. ಅದೃಷ್ಟವೆಂಬಂತೆ ಪಂಜಾಬ್ ಪೊಲೀಸ್ ಶ್ವಾನ ಪಡೆಯಲ್ಲಿ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಲ್ಯಾಬ್ರಾಡಾರ್ , ಮಾರಣಾಂತಿಕ ಕಾಯಿಲೆಯನ್ನು ಗೆದ್ದು ಮರಳಿ ಸೇವೆಗೆ ಹಾಜರಾಗಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಸದ್ದು ಮಾಡುತ್ತಿದೆ ಪ್ರವೀರ್ ಶೆಟ್ಟಿ ನಟನೆಯ ‘ಸೈರನ್’ ಟ್ರೇಲರ್
ಪಂಜಾಬ್ ಪೊಲೀಸ್ ಶ್ವಾನ ಪಡೆಯಲ್ಲಿನ ಸಿಮ್ಮಿ ಎಂಬ ಲ್ಯಾಬ್ರಡಾರ್ ನಾಯಿ ಕ್ಯಾನ್ಸರ್ ಕಾಯಿಲೆಗೆ ತುತ್ತಾಗಿತ್ತು. ಅದೃಷ್ಟವಶಾತ್ ಚಿಕಿತ್ಸೆಯಿಂದಾ ಸಿಮ್ಮಿ ಗುಣಮುಖವಾಗಿದ್ದು, ಇತ್ತೀಚೆಗಷ್ಟೇ ಮರಳಿ ಕರ್ತವ್ಯಕ್ಕೆ ಹಾಜರಾಗಿರುವುದಾಗಿ ವರದಿ ವಿವರಿಸಿದೆ.
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಫರೀದ್ ಕೋಟ್ ನ ಎಸ್ ಎಸ್ ಪಿ ಹರ್ಜಿತ್ ಸಿಂಗ್, ಇಲಾಖೆಯ ಶ್ವಾನ ಸಿಮ್ಮಿ ದೀರ್ಘಕಾಲದವರೆಗೆ ಕ್ಯಾನ್ಸರ್ ಗೆ ಒಳಗಾಗಿತ್ತು. ಈಗ ಅದರ ಆರೋಗ್ಯ ಸುಧಾರಿಸಿದೆ. ಸಿಮ್ಮಿ ವಿಧ್ವಂಸಕ ನಿಗ್ರಹ ತಪಾಸಣೆಗೆ ನೆರವು ನೀಡುತ್ತಿದೆ. ಈ ಹಿಂದೆ ವಿದೇಶಿಯರ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲು ನೆರವು ನೀಡಿರುವುದಾಗಿ ತಿಳಿಸಿದ್ದಾರೆ.
ಸೇನೆಯಲ್ಲಿ ಶ್ವಾನಗಳಿಗೆ ಕ್ಯಾಮರಾಗಳನ್ನು ಅಳವಡಿಸಲಾಗಿರುತ್ತದೆ. ಇದರಿಂದ ಉಗ್ರರ ಚಟುವಟಿಕೆಯ ನೇರ ದೃಶ್ಯವನ್ನು ವೀಕ್ಷಿಸುವುದರ ಜೊತೆಗೆ ಶ್ವಾನಕ್ಕೆ ಸೂಚನೆಗಳನ್ನು ನೀಡಲು ಸಹಕಾರಿಯಾಗುತ್ತದೆ ಎಂದು ವರದಿ ಹೇಳಿದೆ.