ಭೋಪಾಲ್: ಲ್ಯಾಬ್ರಾಡಾರ್ ತಳಿಯ ನಾಯಿಯ ಮಾಲೀಕತ್ವದ ವಿಚಾರದಲ್ಲಿ ಮಧ್ಯಪ್ರದೇಶದ ಹೊಶಂಗಾಬಾದ್ ಜಿಲ್ಲೆಯಲ್ಲಿ ನಡೆದಿರುವ ತನಿಖೆ ಈಗ ಹೊಸ ತಿರುವು ಪಡೆದಿದೆ.
ಮೂರು ವರ್ಷದ ನಾಯಿಯ ಡಿಎನ್‌ಎ ವರದಿಗಾಗಿ ಈಗ ಮಧ್ಯಪ್ರದೇಶ ಪೊಲೀಸರು ಕಾಯುತ್ತಿದ್ದಾರಾದರೂ, ಪೊಲೀಸರು ಒಬ್ಬ ದೂರುದಾರರ ಪರವಿದ್ದಾರೆ ಎಂದು ಇನ್ನೊಬ್ಬ ದೂರುದಾರ ಆರೋಪಿಸುತ್ತಿದ್ದಾರೆ.
ನ.18ರಂದು ಶಬಾದ್ ಖಾನ್ ಎಂಬುವರು “ಕೊಕೊ’ ಎಂಬ ಹೆಸರಿನ ನಾಯಿ ಆಗಸ್ಟ್‌ನಿಂದ ನಾಪತ್ತೆಯಾಗಿದೆ. ಅದು ಈಗ ಎಬಿವಿಪಿ ನಾಯಕ ಕೃತಿಕ್ ಶಿವ್ಹಾರೆ ಮನೆಯಲ್ಲಿದೆ ಎಂದು ದೂರು ಸಲ್ಲಿಸಿದ್ದರು. ಆದರೆ, ಶಿವಾರೆ ನಾಯಿಯನ್ನು ಐದು ತಿಂಗಳ ಹಿಂದೆ ಇಟಾರ್ಸಿಯಿಂದ ಖರೀದಿಸಿದ್ದಾಗಿ ಖರೀದಿ ಪ್ರಮಾಣಪತ್ರ ಹಾಗೂ ಲಸಿಕೆಯ ಚೀಟಿಗಳನ್ನೂ ತೋರಿಸಿದ್ದರು.
ಇದನ್ನೂ ಓದಿ:ಮಂಗಳೂರು: ಸರ್ಕ್ಯೂಟ್ ಹೌಸ್ ರಸ್ತೆಯಲ್ಲಿ ಲಷ್ಕರ್ ಉಗ್ರರ ಪರ ಗೋಡೆ ಬರಹ
ಈ ವಿಚಾರ ಪೊಲೀಸರಿಗೆ ಬಿಡಿಸಲಾಗದ ಕಗ್ಗಂಟಾಗಿತ್ತು. ಶಬಾದ್ ಖಾನ್, ಶ್ವಾನವನ್ನು 22 ತಿಂಗಳ ಮರಿಯಾಗಿದ್ದಾಗಲೇ ತಮ್ಮ ಮಾವ ಗಿಫ್ಟ್ ಮಾಡಿದ್ದರು, ಈ ಲ್ಯಾಬ್ರಾಡಾರ್ ನ ವಂಶಾವಳಿಯ ಬಗ್ಗೆ ತಮಗೆ ಮಾಹಿತಿ ಇದೆ ಎಂದಿದ್ದರು. ಈ ಕಾರಣಕ್ಕಾಗಿಯೇ, ಖುದ್ದು 30 ಸಾವಿರ ರೂ. ನೀಡಿ ಡಿಎನ್‌ಎ ಟೆಸ್ಟ್ ಮಾಡಿಸಲೂ ಮುಂದಾಗಿದ್ದಾರೆ ಶಾಬಾದ್.
ಈಗ ಮಾದರಿಯನ್ನು ಹೈದರಾಬಾದ್‌ಗೆ ಕಳುಹಿಸಲಾಗಿದ್ದು, ಡಿಎನ್‌ಎ ವರದಿ ಯನ್ನು ಆಧರಿಸಿ, ಪೊಲೀಸರು ಮುಂದಿನ ತೀರ್ಮಾನಕ್ಕೆ ಬರಲಿದ್ದಾರೆ.
“ನಮ್ಮದಲ್ಲದ ಒಂದು ಶ್ವಾನದ ಮೇಲೆ ಇಷ್ಟೊಂದು ಹಣ ಖರ್ಚು ಮಾಡಲು ನಾನೇನೂ ಹುಚ್ಚನಲ್ಲ. ಕೊಕೊ ನಮ್ಮ ಕುಟುಂಬದ ಭಾಗವಾಗಿದೆ. ಒಮ್ಮೆ ಡಿಎನ್‌ಎ ವರದಿ ಬಂದ ಮೇಲೆ, ನಾನು ಎಲ್ಲರನ್ನೂ ಕೋರ್ಟ್‌ಗೆ ಎಳೆಯಲಿದ್ದೇನೆ” ಎನ್ನುತ್ತಾರೆ ಶಾಬಾದ್.