Advertisement
ರಾಜ್ಯ ಸರ್ಕಾರವು ಈಚೆಗೆ ಕಾರ್ಮಿಕರ ಕಾಯ್ದೆಯನ್ನು ತಿದ್ದುಪಡಿ ಮಾಡಿ ಕಾರ್ಮಿಕರ ಕೆಲಸ ಅವಧಿಯನ್ನು 8ರಿಂದ 10 ಗಂಟೆವರೆಗೆ ಹೆಚ್ಚಿಸಿದೆ. ಇದು ಕಾರ್ಮಿಕ ವಿರೋಧಿಯಾಗಿದೆ. ಈಗಾಗಲೇ ಕೋವಿಡ್-19ರ ಲಾಕ್‌ಡೌನ್ ಪರಿಣಾಮವಾಗಿ ದೇಶವ್ಯಾಪಿ ಕೋಟ್ಯಾಂತರ ಕಾರ್ಮಿಕರ ಬದುಕು ಅಸ್ತವ್ಯಸ್ತವಾಗಿದೆ. ಆರ್ಥಿಕ ಕುಸಿತದ ಫಲವಾಗಿ ಕಾರ್ಮಿಕ ವರ್ಗದ ಜೀವನ ಅತ್ಯಂತ ಅಭದ್ರತೆಯಲ್ಲಿ ಸಿಲುಕಿ ಅತಂತ್ರವಾಗಿರುವಾಗ, ಕಾರ್ಪೊರೇಟ್ ಉದ್ಯಮಿಗಳಿಗೆ, ತಮ್ಮಿಚ್ಛೆ ಬಂದಂತೆಶೋಷಣೆಗೈಯಲು ಅನುಕೂಲ ಮಾಡಿಕೊಡುವ ಹುನ್ನಾರದಿಂದ ಸರ್ಕಾರ ಈ ಆದೇಶವನ್ನು ಹೊರಡಿಸಿದೆ ಎಂದು ಪ್ರತಿಭಟನಾನಿರತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರತಿಯನ್ನು ದಹಿಸಿ ಪ್ರತಿಭಟನೆ ನಡೆಸಲಾಗಿದೆ. ಈ ಬಗ್ಗೆ ರಾಜ್ಯ ಸರ್ಕಾರ ಕೂಡಲೇ ಕಾರ್ಮಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕ್ರಮಕೈಗೊಳ್ಳದಿದ್ದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಪ್ರತಿಭಟನಾನಿರತರು ಎಚ್ಚರಿಸಿದ್ದಾರೆ. ಈ ವೇಳೆ ಪ್ರತಿಭಟನೆಯಲ್ಲಿದ್ದ ಐಎನ್ ಟಿಯುಸಿ, ಎಐಟಿಯುಸಿ, ಸಿಐಟಿಯು, ಎಐಯುಟಿಯುಸಿ ಮುಖಂಡರಾದ ಕೆ.
ಸೋಮಶೇಖರ್, ಎ.ಆರ್.ಎಂ. ಇಸ್ಮಾಯಿಲ್, ಜೆ. ಸತ್ಯಬಾಬು, ಎಚ್.ಎ.ಆದಿಮೂರ್ತಿ, ಆರ್. ಸೋಮಶೇಖರ್‌ಗೌಡ, ಎ. ದೇವದಾಸ್, ಹಿರಿಯ ಕಾರ್ಮಿಕ ಮುಖಂಡರಾದ ಟಿ.ಜಿ.ವಿಠ್ಠಲ್, ಚನ್ನಪ್ಪ, ಸಂಗನಕಲ್ಲು ಕಟ್ಟೆಬಸಪ್ಪ ಸೇರಿದಂತೆ ಹಲವರು ಇದ್ದರು.