Advertisement

ಊಟವಿಲ್ಲದೇ ನರಳಿದ ಕಾರ್ಮಿಕರು

02:36 PM Apr 02, 2020 | Team Udayavani |

ಕೆಜಿಎಫ್: ಕೂಲಿ ಅರಿಸಿ ಬಿಹಾರದಿಂದ ಬಂದಿದ್ದ ಕಟ್ಟಡ ನಿರ್ಮಾಣ ಎಂಟು ಕಾರ್ಮಿಕರು ಲಾಕ್‌ಡೌನ್‌ನಿಂದಾಗಿ ದಾರಿ ಕಾಣದೆ ಅತಂತ್ರರಾಗಿ ಮೂರು ದಿನಗಳಿಂದ ಹಸಿವಿನಿಂದ ನರಳಿದ ಘಟನೆ ನಡೆದಿದೆ.

Advertisement

ನಗರದ ಹೊರವಲಯದ ಕಂಗಾಂಡ್ಲ ಹಳ್ಳಿಯ ಕೋಳಿಫಾರಂನ ಶೆಡ್‌ನ‌ಲ್ಲಿದ್ದಎಲ್ಲಾ ಕಾರ್ಮಿಕರನ್ನು ಕಷ್ಟಪಟ್ಟು ಹುಡುಕಿದ ರೋಟರಿ ಸಂಸ್ಥೆ ಬುಧವಾರ ಅವರಿಗೆ ಊಟು ನೀಡಿ, ಹಸಿವು ಮುಕ್ತರನ್ನಾಗಿ ಮಾಡಿದೆ. 15 ದಿನಗಳ ಹಿಂದೆ ಬಿಹಾರ್‌ನ ಮೋತಿಹಾರ್‌ನಿಂದ ಯಶವಂತಪುರಕ್ಕೆ ರೈಲಿನಲ್ಲಿ ಬಂದಿದ್ದ ಎಂಟು ಕಾರ್ಮಿಕರು ಗುತ್ತಿಗೆದಾರನೊಬ್ಬನ ಸಂಪರ್ಕದಿಂದಾಗಿ ಕೋಲಾರಕ್ಕೆ ಬಂದು ಅಲ್ಲಿ ಎರಡು ದಿನ ಕಟ್ಟಡ ಕಾಮಗಾರಿಯಲ್ಲಿ ತೊಡಗಿದ್ದರು.

ಕೋವಿಡ್ 19 ದಿಂದ ಲಾಕ್‌ಡೌನ್‌ ಆದ ತಕ್ಷಣ ಕಾಮಗಾರಿ ನಿಲ್ಲಿಸಿದ ಮೇಸ್ತ್ರಿಅವರಿಗೆ ದುಡ್ಡು ಕೊಟ್ಟು ಕಳಿಸಿದ್ದ. ಅಲ್ಲಿಂದ ಬಿಹಾರದ ಮೂಲದ ಇತರ ಕಾರ್ಮಿಕರ ನೆರವು ಪಡೆದು ಕಂಗಾಂಡ್ಲಹಳ್ಳಿಗೆ ಬಂದು ಕೋಳಿಫಾರಂ ಶೆಡ್‌ನ‌ಲ್ಲಿ ಉಳಿದುಕೊಂಡರು. ಕೋವಿಡ್ 19  ಕರ್ಫ್ಯೂ ಇದ್ದುದರಿಂದ ಅವರಿಗೆ ಕೆಲಸ ಸಿಗಲಿಲ್ಲ. ಕೈಯಲ್ಲಿ ದುಡ್ಡು ಖಾಲಿಯಾಗಿದ್ದರಿಂದ, ಆಹಾರ ಪದಾರ್ಥ ತೆಗೆದುಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ. ನಂತರ ಅವರಲ್ಲಿದ್ದ ಬಿಜಯ್‌ ಚೌಧರಿ ಎಂಬಾತ ಕೋವಿಡ್ 19 ಸಹಾಯವಾಣಿಗೆ ಕರೆ ಮಾಡಿ ಪರಿಸ್ಥಿತಿವಿವರಣೆ ಮಾಡಿದ. ಸಹಾಯವಾಣಿ ಮೂಲಕ ಮಾಹಿತಿ ಪಡೆದ ರೋಟರಿ ಡಾ.ಜಯರಾಂ, ಕೆಜಿಎಫ್ನ ರೋಟರಿ ಸಂಸ್ಥೆಗೆ ತಿಳಿಸಿದರು.

ಸಂಸ್ಥೆಯ ಅ.ಮು. ಲಕ್ಷ್ಮೀನಾರಾಯಣ, ಕ್ಯಾಸಂಬಳ್ಳಿಯ ದಿವಾಕರ ಎಂಬಾತನ ಜೊತೆಗೂಡಿ ಎಲ್ಲೆಡೆ ಹುಡುಕಿ, ಕೊನೆಗೆ ಶೆಡ್‌ನ‌ಲ್ಲಿ ಅವರನ್ನು ಪತ್ತೆ ಮಾಡಿ, ಆಹಾರ ಧಾನ್ಯ ವಿತರಣೆ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next