ದೇವನಹಳ್ಳಿ: ಬಿತ್ತನೆ ಸಮಯದಲ್ಲಿ ಸಾಕಾಗುವಷ್ಟು ಮಳೆ ಬಾರದೆ ಜಿಲ್ಲೆಯಲ್ಲಿ ಅಲ್ಪಸಲ್ಪದ ಮಳೆಗೆ ಬಿತ್ತಿದ ರಾಗಿ ಕೊಯ್ಲಿಗೆ ಬಂದಿದೆ. ತೆನೆ ಕಟಾವು ಮಾಡಲು ಕೂಲಿ ಕಾರ್ಮಿಕರ ಸಮಸ್ಯೆ ರೈತರನ್ನು ಕಾಡುತ್ತಿದೆ.
ಜಿಲ್ಲೆಯಾದ್ಯಂತ ಈ ವರ್ಷ ಮುಂಗಾರು ಮಳೆ ಬಿತ್ತನೆ ಕರೆಯದ ಸಂದರ್ಭದಲ್ಲಿ ಕೈಕೊಟ್ಟಿದ್ದ ರಿಂದ ಮಳೆ ಆಶ್ರಿತ ಬೆಳೆಗಳಾದ ತೊಗರಿ ಅಲ್ಸಂದೆ ರಾಗಿ ಮೊದಲಾದ ಬೆಳೆ ಬೆಳೆ ಯಲು ಸಾಧ್ಯವಾಗಿಲ್ಲ. ಅಲ್ಪಸ್ವಲ್ಪ ಬಿದ್ದ ಮಳೆಗೆ ಜಿಲ್ಲೆಯಲ್ಲಿ ರಾಗಿ ತೊಗರಿಗೆ ಬಿತ್ತನೆ ಮಾಡಲಾಗಿತ್ತು.
ಆತಂಕದಲ್ಲಿ ರೈತರು: ಹವಾಮಾನ ವೈಫಲ್ಯದಿಂದ ಮೋಡ ಕವಿದ ವಾತಾವರಣ ಇರುವುದರಿಂದ ಯಾವಾಗ ಮಳೆ ಬರುತ್ತದೆ. ರಾಗಿ ಕೊಯ್ಲು ಮಾಡಿದರೆ ಮಳೆಗೆ ನೆನೆದು ಹೋಗುತ್ತದೆ ಎಂಬುವ ಆತಂಕದಲ್ಲಿ ರೈತರಿದ್ದಾರೆ.
ಬಹು ಒಕ್ಕಣಿಕೆ ಯಂತ್ರಕ್ಕೆ 3600 ರೂ.ದರ ನಿಗದಿ: ಸರ್ಕಾರ ಹಕ್ಕು ರೈತರಿಗೆ ಕೃಷಿ ಯಂತೊ›àಧಾರೆ ಕೇಂದ್ರ ಹೋಬಳಿಯಲ್ಲಿ ಸ್ಥಾಪನೆ ಮಾಡಿದ್ದು, ರೀಫರ್ ಕಟಾವು ಯಂತ್ರಕ್ಕೆ 2700ರೂ. ಹಾಗೂ ಬಹು ಒಕ್ಕಣಿಕೆ ಯಂತ್ರಕ್ಕೆ 3600 ರೂ. ದರ ನಿಗದಿ ಪಡಿಸಿದ್ದು, ರೈತರಿಗೆ ಕೂಲಿಯಾಲು ಸಮಸ್ಯೆ ನೀಗಿಸುವುದಲ್ಲದೆ. ಕಡಿಮೆ ಖರ್ಚಿನೊಂದಿಗೆ ಶ್ರಮ ಉಳಿತಾಯವಾಗುತ್ತದೆ. ಈ ಹಿಂದೆ ಮಹಿಳಾ ಕೂಲಿ ಕೆಲಸ ಗಾರರಿಗೆ 250 ರಿಂದ 300ಗಳ ತನಕ ಇತ್ತು. ಈಗ 400ರಿಂದ 450ಗಳಿಗೆ ದಾಟಿದೆ. ಪುರು ಷರಿಗೆ 650 ರೂಗಳಿಂದ ಇದ್ದದ್ದು, ಈಗ 750 ರಿಂದ 800 ಆಗಿರುವುದು ರೈತರಿಗೆ ಹೆಚ್ಚಿನ ಹೊರೆಯಾಗಿದೆ. ಈ ಬಾರಿ ಮಳೆ ಇಲ್ಲದೆ ಬಿತ್ತನೆ ಮಾಡಿದ್ದ ರಾಗಿ ಸರಿಯಾದ ರೀತಿ ಬಂದಿಲ್ಲ. ಈಗಿನ ಪರಿಸ್ಥಿತಿಯಲ್ಲಿ ಒಂದು ಎಕರೆ ರಾಗಿ ಬೆಳೆಯಲು 30 ರಿಂದ 40, 000 ಖರ್ಚು ಬರುತ್ತದೆ. ಒಂದು ಎಕರೆಯಾಗಿ ತೆನೆ ಕಟಾವು ಮಾಡಲು ಮತ್ತು ರಾಗಿ ಮಾಡಿ ಮನೆ ತುಂಬಿಸಲು 10,000 ಖರ್ಚು ಬರುತ್ತದೆ. ಮಳೆ ಇಲ್ಲದೆ ಬೆಳೆಯು ಸರಿಯಾಗಿ ಆಗದ ಕಾರಣ ಒಂದು ಎಕರೆಗೆ ಮೂರು ಮೂಟೆ ರಾಗಿ ಸಿಗುತ್ತಿದೆ. ಸರ್ಕಾರವು ನಿಗದಿ ಪಡಿಸಿರುವ ರಾಗಿ ದರ ಕ್ವಿಂಟಲ್‌ಗೆ ರೂ.3800ಗಳು ಈ ರೀತಿ ಆದರೆ, ಯಾವ ಬೆಳೆಯನ್ನು ಬೆಳೆಯಲು ಸಾಧ್ಯವಿಲ್ಲ ಎನ್ನುವುದು ರೈತರ ಅಳಲಾಗಿದೆ.
ಕೂಲಿ ಕಾರ್ಮಿಕರಗಾಗಿ ಹುಡುಕಾಟ: ತೊಗರಿ ಹಾಗೂ ಅಲ್ಸಂದೆ ಮಳೆ ಬರದೆ ಹೋದ ಕಾರಣ ಬೆಳೆಯು ಸರಿಯಾಗಿ ಆಗದೆ ಅಲ್ಪ ಸ್ವಲ್ಪವಾಗಿ ಆಗಿರುವ ತೊಗರಿಕಾಯಿಯನ್ನು ಕಿತ್ತು ಮಾರುಕಟ್ಟೆಗೆ ತರಬೇಕು. ನಾಲ್ವರು ಸ್ನೇಹಿತರು ಸೇರಿ ಜಮೀನನ್ನು ಗುತ್ತಿಗೆ ಪಡೆದು ರಾಗಿ ಬೆಳೆದವು. ಒಂದು ಎಕರೆ ಹೇಗೆ 35 ರಿಂದ 40,000 ಖರ್ಚು ಬಂದಿದೆ. ನಾಲ್ಕು ಮೂಟೆಗಾಗಿಯಾಗಿದೆ. ರಾಗಿ ತೆನೆಯನ್ನು ಮಿಷನ್ ಹಾಕಿ ರಾಗಿ ಪಡೆಯಲು ಒಂದು ಕ್ವಿಂಟಲ್ ಆಗಿ 150 ರೂಗಳು ರಾಗಿ ಮಿಷನ್ ಅವರಿಗೆ ಕೊಡಬೇಕಾಗಿದೆ. ರಾಗಿ ತೆನೆ ಕಟಾವು ಮಾಡಲು ಕೂಲಿ ಕಾರ್ಮಿಕರ ಗಾಗಿ ಹುಡುಕಾಟ ಮಾಡುವಂತಹ ಆಗಿದೆ. ಕೂಲಿಯೂ ಹೆಚ್ಚಾಗಿದೆ. ಸರ್ಕಾರ ಈ ಹಂತ ದಲ್ಲಿ ಬರ ಪರಿಹಾರಕ್ಕಾಗಿ ಘೋಷಣೆ ಮಾಡಿದೆ. ರೈತರು ಒಂದು ಎಕರೆ ಬೆಳೆ ಮಾಡಲು 40.000 ಖರ್ಚಿಗೆ ಪರಿಹಾರ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ ಎನ್ನುತ್ತಾರೆ ರೈತರು.
ಕೂಲಿ ದರ ದುಪ್ಪಟ್ಟು: ಸರ್ಕಾರವು ಪುಕ್ಕಟೆ ಯೋಜನೆಗಳನ್ನು ಜಾರಿಗೆ ತಂದ ನಂತರ ರೈತರ ಹೊಲಗದ್ದೆ ಮತ್ತು ತೋಟ ಗಳಲ್ಲಿ ಕೂಲಿ ಮಾಡುವ ಕೂಲಿ ಆಳುಗಳು ಸಿಗುತ್ತಿಲ್ಲ. ಕೂಲಿ ದರವು ದುಪ್ಪಟ್ಟು ಆಗಿದ್ದು. ರೈತರು ಅಷ್ಟೊಂದು ಕೂಲಿ ಕೊಡುವ ಸ್ಥಿತಿಯಲ್ಲಿ ಇಲ್ಲ. ಹೀಗಾಗಿ ಬೆಳೆ ಕಟಾವು ಮಾಡಿ ಮನೆಗೆ ಸಾಗಿಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಕಳೆದ ವರ್ಷ ಬಂಪರ್ ರಾಗಿ ಬೆಳೆಯಾದರೂ ರಾಗಿ ಕಟಾವಿನ ಸಮ ಯದಲ್ಲಿ ನಿರಂತರವಾಗಿ ವಾರಗಟ್ಟಲೆ ಚಡಿ ಮಳೆ ಸುರಿದು ಸಮೃದ್ಧವಾಗಿ ಬೆಳೆದಿದ್ದ ರಾಗಿ ನೀರುಪಾಲಾಗಿ ನೆಲಕುಚಿತ್ತು. ರಾಗಿ ತೆನೆ ತೇವಾಂಶ ಹೆಚ್ಚಾಗಿ ತೆನೆ ಇಲ್ಲೇ ಮೊಳಕೆ ಹೊಡೆದು ಕೈಗೆ ಬಂದ ತುತ್ತು ಬರದಂತಾಗಿ ರೈತರ ಬೀದಿಗೆ ಬೀಳುವಂತಾಗಿತ್ತು. ಈ ಬಾರಿ ಮಳೆ ಇಲ್ಲದೆ ಮತ್ತಷ್ಟು ಸಂಕಷ್ಟವನ್ನು ಎದುರಿಸುತ್ತಿದ್ದಾರೆ.
ರಾಗಿ ಬೆಳೆಯಾಗಿ ಕೊಯ್ಲಿಗೆ ಬಂದಿದೆ. ಕೂಲಿಗಾರರು ಸಮಸ್ಯೆಯೂ ರೈತರಿಗೆ ಕಾಡುತ್ತಿದೆ. ಇತ್ತೀಚಿನ ದಿನಗಳಲ್ಲಿ ಬೆಲೆ ಏರಿಕೆ ಬಿಸಿ ಪ್ರತಿಯೊಬ್ಬರನ್ನು ಕಾಡುತ್ತಿದೆ. ಕೂಲಿ ಕಾರ್ಮಿ ಕರ ಹೆಚ್ಚಿನ ಹಣವನ್ನು ನೀಡಬೇಕು. ಇಲ್ಲದಿದ್ದರೆ ಬರುವುದಿಲ್ಲ. ರೈತರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
-ಮುನಿಕೃಷ್ಣ, ರೈತ
ಈ ಬಾರಿ ರಾಗಿ ಬೆಳೆ ಇಳುವರಿ ಕುಸಿತ ಕಂಡಿದೆ. ನಮ್ಮ ತಾತ ತಂದೆ ಕಾಲದಿಂದ ರಾಗಿ ಮತ್ತು ಇತರೆ ಕೃಷಿ ಪದ್ಧತಿಗಳನ್ನು ಮಾಡಿಕೊಂಡು ಬಂದಿದ್ದೇವೆ. ಇದೀಗ ಬೆಲೆ ಏರಿಕೆ ಇಂದ ಸಾಕಷ್ಟು ಸಮಸ್ಯೆಗಳನ್ನು ಎದುರಿಸುವಂತೆ ಆಗಿದೆ. ಸರಿಯಾದ ಮಳೆ ಬಂದಿದ್ದರೆ ರಾಗಿ ಉತ್ತಮ ಬೆಳೆ ಬರುತ್ತಿತ್ತು. 30, 40 ಸಾವಿರ ಖರ್ಚು ಮಾಡಿದರು ರಾಗಿ ನಿರೀಕ್ಷಿತ ಮಟ್ಟದಲ್ಲಿ ಬಂದಿಲ್ಲ.
-ಮುಕುಂದ, ರೈತ
-ಎಸ್.ಮಹೇಶ್