Advertisement
ಐರ್ಲೆಂಡ್ ವ್ಯಯಕ್ತಿಕ ಪ್ರವಾಸ ಕೈಗೊಂಡಿರುವ ಅವರು, ಅಲ್ಲಿ “ಭಾರತ-ಐರ್ಲೆಂಡ್ ಸ್ನೇಹ ಉಪನ್ಯಾಸ ಮಾಲಿಕೆಯಡಿ ಭಾರತೀಯರಿಗೆ ವಿದೇಶಗಳಲ್ಲಿನ ಅವಕಾಶ- ಕರ್ನಾಟಕದ ದೃಷ್ಟಿಕೋನ” ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಾ, ಭಾರತ ಸರ್ಕಾರವು ಅಸಂಘಟಿತ ಕಾರ್ಮಿಕರ ಬಗೆಗಿನ ದತ್ತಾಂಶ ಪಡೆದುಕೊಂಡು ಆ ಮೂಲಕ ಸವಲತ್ತುಗಳನ್ನು ಸುಲಲಿತವಾಗಿ ವಿತರಿಸುವ ಸಲುವಾಗಿ ಈ-ಶ್ರಮ್ ಪೋರ್ಟಲ್ ಆರಂಭಿಸಿದೆ, ಈ ಶ್ರಮ್ ಪೋರ್ಟಲ್‌ನಲ್ಲಿ ಕರ್ನಾಟಕವು 1.9 ಕೋಟಿ ಕಾರ್ಮಿಕರ ನೋಂದಣಿ ಗುರಿ ಹೊಂದಿದ್ದು, ಆ ಪೈಕಿ ಈವರೆಗೆ 70 ಲಕ್ಷ ಕಾರ್ಮಿಕರು ನೋಂದಣಿ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.
Related Articles
Advertisement
ಜಾಗತಿಕ ಸಾಂಕ್ರಾಮಿಕ್ ಕೋವಿಡ್-19ರ ಸಂದರ್ಭದಲ್ಲಿ ಶ್ರಮಿಕ ವರ್ಗಕ್ಕೆ ಸಿದ್ಧಪಡಿಸಿದ ಆಹಾರ ಪದಾರ್ಥ, ರೇಷನ್ ಕಿಟ್, ಉಚಿತ ಆರೋಗ್ಯ ತಪಾಸಣಾ ಶಿಬಿರಗಳ ಜತೆಗೆ ಒಂದು ಬಾರಿ ಆರ್ಥಿಕ ಸಹಾಯಧನವನ್ನೂ ವಿತರಿಸಲಾಯಿತು. ರಾಜ್ಯ ಸರ್ಕಾರವು ಕಾರ್ಮಿಕ ಮತ್ತು ಮಾಲೀಕನ ನಡುವಿನ ಸಂಬಂಧ ಸುಧಾರಣೆಗೆ ಅನುವಾಗುವಂತೆ ಹಲವು ಕಾಯ್ದೆ ಕಾನೂನುಗಳನ್ನು ಜಾರಿ ಮಾಡುತ್ತಿದ್ದು, ಶ್ರಮಿಕರ ಸಂಕ್ಷೇಮಕ್ಕೆ ಆದ್ಯತೆ ನೀಡಲಾಗಿದೆ. ವಿವಿಧ ವರ್ಗಗಳ ಶ್ರಮಿಕರಿಗೆ ಪ್ರತಿ ಐದು ವರ್ಷಕ್ಕೊಮ್ಮೆ ಕನಿಷ್ಠ ವೇತನ ನಿಗಧಿಪಡಿಸಲಾಗುತ್ತಿದೆ ಎಂದ ಅವರು, ರಾಜ್ಯ ಸರ್ಕಾರವು ಕಾರ್ಮಿಕ ಕಾಯ್ದೆಗಳಿಗೆ ಪ್ರತಿಯಾಗಿ 29 ಕಾನೂನುಗಳನ್ನು ಜಾರಿ ಮಾಡಿದ್ದು, ಇದಕ್ಕಾಗಿ ಕಾರ್ಮಿಕ ನ್ಯಾಯಾಲಯಗಳನ್ನು ಅಸ್ತಿತ್ವಕ್ಕೆ ತರಲಾಗಿದೆ ಎಂದರು.
2006ರಲ್ಲಿ ಕೇಂದ್ರ ಸರ್ಕಾರದ ನೀತಿಯಂತೆ ಅಸ್ತಿತ್ವಕ್ಕೆ ಬಂದಿರುವ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಸೆಸ್ ಮೂಲಕ ಸಂಪನ್ಮೂಲ ಕ್ರೂಢೀಕರಣ ಮಾಡುತ್ತಿದ್ದು, ಕಾರ್ಮಿಕರಿಗೆ ಅಗತ್ಯ ತರಬೇತಿ ಜತೆಗೆ ಸಾಮಗ್ರಿಗಳ ಕಿಟ್ ವಿತರಣೆ ಮಾಡುತ್ತಿದೆ. ಕಾರ್ಮಿಕರು ಮಾತ್ರವಲ್ಲದೆ, ಶ್ರಮಿಕರ ಕುಟುಂಬ ವರ್ಗಕ್ಕೂ ಹತ್ತು ಹಲವು ಯೋಜನೆಗಳನ್ನು ರೂಪಿಸಿ ಜಾರಿ ಮಾಡಲಾಗಿದೆ ಎಂದ ಕಾರ್ಮಿಕರ ಸಚಿವರು, ಆರೋಗ್ಯ ತಪಾಸಣಾ ಶಿಬಿರ, ಮೊಬೈಲ್ ಕ್ಲಿನಿಕ್, ಶ್ರಮಿಕರ ಮಕ್ಕಳ ಉನ್ನತ ವ್ಯಾಸಂಗಕ್ಕೆ ತರಬೇತಿ, ಶಿಷ್ಯ ವೇತನ ಜತೆಗೆ ಅಸಂಘಟಿತ ಕಾರ್ಮಿಕ ವಲಯಕ್ಕೂ ಆಶಾದೀಪ ಸೇರಿದಂತೆ ಹಲವು ಯೋಜನೆಗಳನ್ನು ಯಶಸ್ವಿಯಾಗಿ ಜಾರಿ ಮಾಡಲಾಗಿದೆ ಎಂದು ಕಾರ್ಮಿಕ ಇಲಾಖೆ ಸಾಧನೆಗಳ ಬಗ್ಗೆ ವಿವರಣೆ ನೀಡಿದರು.
ಇಎಸ್‌ಐ ಆಸ್ಪತ್ರೆಗಳ ಉನ್ನತೀಕರಣದ ಜತೆಗೆ ಶ್ರಮಿಕ ವರ್ಗಕ್ಕೆ ಆರೋಗ್ಯ ಸೇವೆಗಳು ಸುಲಭದಲ್ಲಿ ದಕ್ಕುವಂತೆ ಮಾಡುವ ಸಲುವಾಗಿ ಖಾಸಗಿ ಆಸ್ಪತ್ರೆಗಳೊಂದಿಗೂ ಸಮನ್ವಯ ಸಾಧಿಸಲಾಗಿದೆ. ಕೋವಿಡ್ ಸಂದರ್ಭ ಕಾರ್ಮಿಕ ಇಲಾಖೆಗೆ ಸವಾಲಿನ ಸಂದರ್ಭವನ್ನು ಸೃಷ್ಟಿಸಿತಾದರೂ, ಆಹಾರ ವಿತರಣೆ, ಸಾರಿಗೆ ವ್ಯವಸ್ಥೆ, ಆಹಾರ ಸಾಮಗ್ರಿಗಳ ವಿತರಣೆ ಜತೆಗೆ ಸಹಾಯಧನ ವಿತರಿಸಿರುವ ಬಗ್ಗೆ ವಿವರಣೆ ನೀಡಿದ ಕಾರ್ಮಿಕ ಸಚಿವರು ಕೋವಿಡ್ ಸಂದರ್ಭದಲ್ಲಿ ಶ್ರಮಿಕ ವರ್ಗಕ್ಕೆ ನಿಂತ ರಾಜ್ಯ ನಮ್ಮದು ಎಂದು ಹೆಮ್ಮೆಯಿಂದ ವಿವರಣೆ ನೀಡಿದರು.
ಸಭೆಯಲ್ಲಿ ಐರ್ಲೆಂಡ್‌ನ ಭಾರತೀಯ ರಾಯಭಾರಿ ಅಖಿಲೇಶ್ ಮಿಶ್ರ ಸೇರಿದಂತೆ ಹಲವು ಆನಿವಾಸಿ ಭಾರತೀಯರು ಪಾಲ್ಗೊಂಡಿದ್ದರು.