Advertisement

ಸೌದಿಯಲ್ಲಿನ್ನು ಕಾರ್ಮಿಕ ಸ್ನೇಹಿ ನಿಯಮ

12:50 AM Nov 05, 2020 | mahesh |

ದುಬಾೖ: ಭಾರತೀಯರ ಸಹಿತ ಹೊಟ್ಟೆಪಾಡಿಗಾಗಿ ಸೌದಿ ಅರೇಬಿಯಾಕ್ಕೆ ತೆರಳುವ ವಲಸೆ ಕಾರ್ಮಿಕರು ನೆಮ್ಮದಿಯ ನಿಟ್ಟುಸಿರು ಬಿಡುವಂಥ ಸುದ್ದಿಯಿದು. ಹಲವು ಕಠಿನ ನಿರ್ಬಂಧಗಳಿಂದ ವಲಸೆ ಕಾರ್ಮಿಕರನ್ನು ಮುಕ್ತಗೊಳಿಸುವಂಥ ಮಹತ್ವದ ನಿರ್ಧಾರವನ್ನು ಸೌದಿ ಅರೇಬಿಯಾ ಸರಕಾರ ಕೈಗೊಂಡಿದೆ. ಕಾರ್ಮಿಕ ಕಾನೂನಿನಲ್ಲಿ ಸುಧಾರಣೆಯನ್ನು ತರುವುದಾಗಿ ಬುಧವಾರ ಅದು ಘೋಷಿಸಿದ್ದು, ಉದ್ಯೋಗದಾತರ ಷರತ್ತುಗಳು, ಕಠಿನ ನಿಯಮಗಳು ಮತ್ತು ದೌರ್ಜನ್ಯದಿಂದ ನೊಂದಿದ್ದ ವಲಸೆ ಕಾರ್ಮಿಕರಿಗೆ ನೆಮ್ಮದಿ ನೀಡುವ ಸಾಧ್ಯತೆಗಳಿವೆ.

Advertisement

ಕೋಟ್ಯಂತರ ವಲಸೆ ಕಾರ್ಮಿಕರು, ಅದರಲ್ಲೂ ವಿಶೇಷವಾಗಿ ಕಡಿಮೆ ಸಂಬಳದ ಕೆಳ ಹಂತದ ಕಾರ್ಮಿಕರಿಗೆ ಅನುಕೂಲವಾಗುವಂತೆ ನಿಯಮಗಳಲ್ಲಿ ಕೆಲವು ಮಹತ್ತರ ಬದಲಾವಣೆ ಮಾಡಲಾಗಿದೆ. ಕೆಳ ಹಂತದ ಕೆಲಸಗಳಲ್ಲಿ ನಿರತರಾಗುವ ಕಾರ್ಮಿಕರಿಗೆ ಒಬ್ಬ ಉದ್ಯೋಗದಾತನಿಂದ ಮತ್ತೂಬ್ಬ ಉದ್ಯೋಗದಾತನಲ್ಲಿಗೆ ಪ್ರಾಯೋಜಕತ್ವ (ಸ್ಪಾನ್ಸರ್‌ಶಿಪ್‌) ಬದಲಿಸಲು ಅನುಕೂಲ ಕಲ್ಪಿಸಲಾಗಿದೆ.

ಅಗತ್ಯ ಬಿದ್ದರೆ ಸೌದಿ ಅರೇಬಿಯಾದಿಂದ ವಾಪಸ್‌ ಹೋಗಿ, ಮತ್ತೂಬ್ಬ ಉದ್ಯೋಗದಾತನ ಆಶ್ರಯದಲ್ಲಿ ಮತ್ತೆ ಆಗಮಿಸಲು ಅವಕಾಶ ಕಲ್ಪಿಸಲಾಗಿದೆ. ಕಾರ್ಮಿಕರಿಗೆ ಅನುಕೂಲ ಮಾನವ ಸಂಪನ್ಮೂಲ ಮತ್ತು ಸಾಮಾಜಿಕ ಅಭಿವೃದ್ಧಿ ಖಾತೆಯ ಉಪ ಸಚಿವ ಅಬ್ದುಲ್ಲಾ ಬಿನ್‌ ನಾಸ್ಸೆರ್‌ ಅಬುತ್‌ನೈನ್‌ ಕೊಲ್ಲಿ ರಾಷ್ಟ್ರ ಕೈಗೊಂಡ ನಿಯಮಗಳ ಬಗ್ಗೆ ವಿವರಣೆ ನೀಡಿದ್ದಾರೆ. 2021ರ ಮಾರ್ಚ್‌ನಿಂದ ಹೊಸ ಕಾನೂನು ಜಾರಿಯಾಗಲಿದೆ. ಭಾರತ ಸಹಿತ ಹಲವು ರಾಷ್ಟ್ರಗಳ 1 ಕೋಟಿ ಕಾರ್ಮಿಕರಿಗೆ ಇದರಿಂದ ಲಾಭವಾಗಲಿದೆ.

ಬೇಗಂ ಹೇಳುವಂತೆ ಪ್ರಾಯೋಜಕತ್ವ ಪದ್ಧತಿ (ಸ್ಥಳೀಯವಾಗಿ ಕರೆಯು ವಂತೆ ಕಫಾಲಾ) ಪೂರ್ಣವಾಗಿ ರದ್ದಾಗಿಲ್ಲ. ಇಲೆಕ್ಟ್ರಿಕಲ್‌, ಮನೆಗೆಲಸ ಮತ್ತಿತರ ಕೆಲಸಗಳನ್ನು ಹುಡುಕಿಕೊಂಡು ಬರುವವರಿಗೆ ಪ್ರಾಯೋಜಕತ್ವ ವ್ಯವಸ್ಥೆ ಬೇಕಾಗುತ್ತದೆ. ಎಂದು ಅವರು ಹೇಳುತ್ತಾರೆ. ಕತಾರ್‌ನಲ್ಲಿ ಈಗಾಗಲೇ ಜಾರಿಕೊಲ್ಲಿ ರಾಷ್ಟ್ರಗಳಲ್ಲಿ ಒಂದಾಗಿರುವ ಕತಾರ್‌ನಲ್ಲಿ ಈಗಾಗಲೇ ಇಂಥ ಕಾನೂನು ಜಾರಿಯಾಗಿದೆ.

ಯಾವ ರೀತಿ ನೆರವು?
ಹೊಸ ನಿಯಮದ ಬಗ್ಗೆ ಪ್ರತಿಕ್ರಿಯೆ ನೀಡಿದ ಹ್ಯೂಮನ್‌ ರೈಟ್ಸ್‌ ವಾಚ್‌ ಸಂಸ್ಥೆಯ ಸಂಶೋಧಕಿ ರೋತ್ನಾ ಬೇಗಂ, ಇದು ವಲಸೆ ಕಾರ್ಮಿಕರಿಗೆ ಆಂಶಿಕವಾಗಿ ನೆರವು ನೀಡಲಿದೆ. ವಲಸೆ ಕಾರ್ಮಿಕರ ಸ್ಥಿತಿ ಈಗ ಇರುವುದಕ್ಕಿಂತ ಸುಧಾರಣೆಯಾಗಲಿದೆ. ಹಾಲಿ ಇರುವ ಪ್ರಾಯೋಜಕತ್ವ ವ್ಯವಸ್ಥೆಯಲ್ಲಿ ವಿದೇಶಗಳಿಂದ ಆಗಮಿಸಿದ ಕಾರ್ಮಿಕರ ಪಾಸ್‌ಪೋರ್ಟ್‌ ಮತ್ತು ಇತರ ದಾಖಲೆಗಳನ್ನು ಉದ್ಯೋಗದಾತರು ವಶಪಡಿಸಿಕೊಳ್ಳುತ್ತಿದ್ದರು. ಜತೆಗೆ ಕಾರ್ಮಿಕರನ್ನು ಹೆಚ್ಚಿನ ಅವಧಿಗೆ ದುಡಿಸಿಕೊಳ್ಳುವುದಲ್ಲದೆ, ಹಿಂಸೆ ನೀಡುತ್ತಿದ್ದರು. ಜತೆಗೆ ಹೊಸ ಕೆಲಸ ಹುಡುಕಿಕೊಳ್ಳಲು, ಉದ್ಯೋಗದಾತರನ್ನು ಬದಲು ಮಾಡಿಕೊಳ್ಳಲೂ ಅವಕಾಶವಿರಲಿಲ್ಲ. ಹೊಸ ವ್ಯವಸ್ಥೆಯಲ್ಲಿ ಈ ಅಂಶಕ್ಕೆ ಕಡಿವಾಣ ಬೀಳಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next