Advertisement

ಸರಕಾರಗಳಿಂದ ಕಾರ್ಮಿಕರ ಕಡೆಗಣನೆ

06:14 PM May 02, 2020 | Team Udayavani |

ಗಜೇಂದ್ರಗಡ: ದೇಶದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಿರುವ ಕಾರ್ಮಿಕರನ್ನು ಸರ್ಕಾರಗಳು ಸಂಪೂರ್ಣವಾಗಿ ಕಡೆಗಣಿಸಿ, ನಿರುದ್ಯೋಗ ಸೃಷ್ಟಿಸುವ ಮೂಲಕ ಕಾರ್ಮಿಕ ವಲಯವನ್ನು ಸಂಕಷ್ಟಕ್ಕೆ ತಳ್ಳುವಂತೆ ಮಾಡುತ್ತಿರುವುದು ಖಂಡನೀಯ ಎಂದು ಕಾರ್ಮಿಕ ಮುಖಂಡ ಎಂ.ಎಸ್‌. ಹಡಪದ ಅಸಮಾಧಾನ ವ್ಯಕ್ತಪಡಿಸಿದರು.

Advertisement

ಪಟ್ಟಣದ ಸಿಪಿಐ(ಎಂ) ಕಚೇರಿಯಲ್ಲಿ ಶುಕ್ರವಾರ ನಡೆದ ವಿಶ್ವ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದೇಶದಲ್ಲಿ ನಿರುದ್ಯೋಗ ತಾಂಡವಾಡುತ್ತಿದ್ದು, ಕೆಲಸವಿಲ್ಲದೇ ಮನೆಯಲ್ಲೇ ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ದೇಶದ ಅಭಿವೃದ್ಧಿಗೆ ಅಸಂಘಟಿತ ವಲಯದ ಕಾರ್ಮಿಕರು ಕಾರಣ. ಆದರೆ ಸಂಪಾದನೆಗೆ ತಕ್ಕಂತೆ ವೇತನ ನೀಡುವಲ್ಲಿ ಸರ್ಕಾರಗಳು ವಿಫಲವಾಗಿವೆ. ಒಂದು ತಿಂಗಳ ಲಾಕ್‌ ಡೌನ್‌ನಿಂದ ದೇಶದ ಕಾರ್ಮಿಕ ವಲಯಕ್ಕೆ ದೊಡ್ಡ ಪೆಟ್ಟು ಬಿದ್ದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಕೇವಲ ಉಪದೇಶ ನೀಡುತ್ತಿದ್ದಾರೇ ಹೊರತು, ಕೋವಿಡ್ 19 ನಿಯಂತ್ರಿಸಲು ಯಾವ ಕ್ರಮಗಳನ್ನೂ ಕೈಗೊಂಡಿಲ್ಲ ಎಂದು ಆರೋಪಿಸಿದರು.

ಕಾರ್ಮಿಕ ಮುಖಂಡ ಪೀರು ರಾಠೊಡ ಮಾತನಾಡಿದರು. ಇದೇ ವೇಳೆ ಕಾರ್ಮಿಕ ದಿನಾಚರಣೆ ಪ್ರಯುಕ್ತ ತಾಂಡಾ ಘಟಕ ಉಪಾಧ್ಯಕ್ಷೆ ಈರಮ್ಮ ಮಾಳ್ಳೋತ್ತರ ಸಿಪಿಐಎಂ ಪಕ್ಷದ ಬಾವುಟ ಹಾರಿದರು. ಬಾಲು ರಾಠೊಡ, ಮಾರುತಿ ಚಿಟಗಿ, ಮೈಬು ಹವಾಲ್ದಾರ್‌, ಉಮೇಶ ಮಾಳ್ಳೋತ್ತರ, ಕಳಕೇಶ ರಾಠೊಡ, ಮಲ್ಲಿಕಾರ್ಜುನ ಬಡಿಗೇರ, ಶೇಖಪ್ಪ ಬಿಸನಾಳ, ರೇವಣಪ್ಪ ರಾಠೊಡ, ಲಕ್ಷ್ಮಣ ರಾಠೊಡ, ರುದ್ರಪ್ಪ ರಾಠೊಡ, ಮಂಜುಳಾ ರಾಠೊಡ, ಯಲ್ಲಪ್ಪ ರಾಮಜಿ, ತುಕ್ಕಪ್ಪ ಚವ್ಹಾಣ, ಕನಕವ್ವ ಮಾದರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next