Advertisement

ಸಂವಿಧಾನದ ಕಾನೂನುಗಳಿಂದ ಕಾರ್ಮಿಕರ ರಕ್ಷಣೆ

05:56 PM May 24, 2022 | Team Udayavani |

ಗೌರಿಬಿದನೂರು: ಕಾರ್ಮಿಕರ ಅಭಿವೃದ್ಧಿಗೆ ಅಂಬೇಡ್ಕರ್‌ ಅವರು ಸಂವಿಧಾನದಲ್ಲಿ ಹಲವಾರು ಸವಲತ್ತು ನೀಡಿ ಮುಖ್ಯವಾಹಿನಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರೆಂದು ಶಾಸಕ ಎನ್‌.ಎಚ್‌.ಶಿವಶಂಕರರೆಡ್ಡಿ ತಿಳಿಸಿದರು.

Advertisement

ನಗರದ ಹೊರವಲಯದಲ್ಲಿರುವ ಸಾಮಾನತಾಸೌಧದಲ್ಲಿ ಅಂಬೇಡ್ಕರ್‌ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಸಂಘ, ಶೀಟ್‌ ಸೆಂಟರಿಂಗ್‌ ಕಾರ್ಮಿಕರಸಂಘ, ಕರ್ನಾಟಕ ಜಾಗೃತಿ ಕಟ್ಟಡ ಮತ್ತು ಇತರೆನಿರ್ಮಾಣ ಕಾಮಗಾರಿಗಳ ಕಾರ್ಮಿಕರ ಸಂಘ, ಹಮಾಲಿ ಕಾರ್ಮಿಕರ ಸಂಘ ಎಲೆಕ್ಟ್ರಿಷಿಯನ್‌ ಮತ್ತು ಪ್ಲಂಬಿಂಗ್‌ ಕಾರ್ಮಿಕ ಸಂಘ, ವೆಲ್ದಿಂಗ್‌ ಕಾರ್ಮಿಕ ಸಂಘ ಹಾಗೂ ಇತರೆ ಸಂಘಗಳ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಕಾರ್ಮಿಕ ದಿನಚರಣೆ ಹಾಗೂ ಉಚಿತ ಆರೋಗ್ಯ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು.

ಕಾರ್ಮಿಕರು ಈ ದೇಶದ ಬೆನ್ನೆಲುವು ಅವರ ಪರಿಶ್ರಮದಿಂದ ಈದೇಶದ ಆರ್ಥಿಕ ಮಟ್ಟ ಏರಿಕೆಯಾಗಿದೆ. ಅಂಬೇಡ್ಕರ್‌ಅವರು ಕಾನೂನು ಮಂತ್ರಿಯಾದ ವೇಳೆ ಕಾರ್ಮಿಕವಲಯದಲ್ಲಿ ಹಲವಾರು ಬದಲಾವಣೆ ತಂದರು. ಕೆಲಸದ ವೇಳೆ ನಿಗದಿಯಾದ ವೇತನ ಪರಿಷ್ಕರಣೆ,ನಿವೃತ್ತಿಯಾದ ನೌಕರರಿಗೆ ಪಿಂಚಣೆ ಹೀಗೆ ಹತ್ತಾರು ಸವಲತ್ತು ನೀಡಿದ್ದಾರೆ ಎಂದರು.

ಕಾರ್ಮಿಕ ಸಂಘದ ಅಧ್ಯಕ್ಷ ವೆಂಕಟಾದ್ರಿ ಮಾತನಾಡಿ, ಸರ್ಕಾರ ಕಾರ್ಮಿಕರ ಕಲ್ಯಾಣಕ್ಕೆ ಹಲವು ಸೌಲಭ್ಯಗಳನ್ನು ನೀಡಿದೆ. ಇಂದು ಅವರಿಗೆ ಉಚಿತ ಆರೋಗ್ಯ ಶಿಬಿರವನ್ನುಆಯೋಜನೆ ಮಾಡಿದೆ ಇದರಿಂದ ಅವರಿಗೆ ಹಲವು ಕಾಯಿಲೆಗಳಿಗೆ ಉಚಿತ ಔಷಧಿ ಸಿಗಲಿದೆ ಎಂದರು.

ಇದೇ ವೇಳೆ ಕಾರ್ಮಿಕರಿಗೆ ಆಯುಷ್ಮಾನ್‌ ಭಾರತ್‌, ಆರೋಗ್ಯಕರ್ನಾಟಕ ಕಾರ್ಡ್‌ ಉಚಿತವಾಗಿ ವಿತರಿಸಲಾಯಿತು.ಕಾರ್ಯಕ್ರಮಕ್ಕೂ ಮುನ್ನ ಅಂಬೇಡ್ಕರ್‌ ಪುತ್ಥಳಿ ಅನಾವರಣ ಮಾಡಲಾಯಿತು.

Advertisement

ಜಿಲ್ಲಾ ಕಾರ್ಮಿಕ ಇಲಾಖೆ ಅಧಿಕಾರಿ ವರಲಕ್ಷ್ಮಿಅಂಬೇಡ್ಕರ್‌ ಸಂಘದ ಅಧ್ಯಕ್ಷ ವೆಂಕಟಾದ್ರಿ, ದಲಿತಮುಖಂಡ ಸೋಮಯ್ಯ, ವಕೀಲ ಸಂಘದ ಅಧ್ಯಕ್ಷಡಿ.ರಾಮದಾಸ್‌, ಡಿಸಿಸಿ ಬ್ಯಾಂಕ್‌ ನಿರ್ದೇಶಕ ಮರಳೂರುಹನುಮಂತರೆಡ್ಡಿ, ನಗರಸಬೆ ಸದಸ್ಯ ವೆಂಕಟರೆಡ್ಡಿ,ಕಾರ್ಮಿಕ ಮುಖಂಡ ಜಬೀ, ಇಂತಿಯಾಜ್‌, ನಜೀರ್‌, ಇಡಗೂರು ವೈ.ಟಿ.ಪ್ರಸನ್ನಕುಮಾರ್‌, ನಗರಸಭೆ ಸದಸ್ಯ ರಫೀಕ್‌, ಸತ್ಯಪ್ರಕಾಶ್‌ ಮುಖಂಡ ವೆಂಕಟ್‌, ವೇದಲವೇಣಿ ವೇಣು, ಸುದರ್ಶನ್‌ ಇತರರಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next