Advertisement

ನಕಲಿ ಟ್ವೀಟ್‌ಗಳಿಗೆ ಲೇಬಲ್‌!

12:00 AM Dec 03, 2020 | mahesh |

ಅಮೆರಿಕ ಚುನಾವಣೆ ವೇಳೆ ಡೊನಾಲ್ಡ್‌ ಟ್ರಂಪ್‌ರ ಸುಳ್ಳು ಟ್ವೀಟ್‌ಗಳಿಗೆ “ಫ್ಯಾಕ್ಟ್ ಚೆಕ್‌’ ಅಳವಡಿಸಿದ್ದ ಟ್ವಿಟರ್‌, ಭಾರತದಲ್ಲೂ ಕಲ್ಪಿತ ಅಥವಾ ನಕಲಿ ಟ್ವೀಟ್‌ಗಳಿಗೆ ಕಡಿವಾಣ ಹಾಕಲು “ಲೇಬಲ್‌’ ಅಂಟಿಸುವ ಕ್ರಮಕ್ಕೆ ಮುಂದಾಗಿದೆ. ಟ್ವಿಟರ್‌ನ ಯಾವ ಟ್ವೀಟ್‌ಗಳಿಗೆ ಲೇಬಲ್‌ ಅಂಟಿಸುತ್ತೆ? ಏಕೆ ಅಂಟಿಸುತ್ತೆ? - ಇಲ್ಲಿದೆ ವಿವರ…

Advertisement

ಯಾವ ಟ್ವೀಟ್‌ಗಳಿಗೆ ಲೇಬಲ್‌?
ಯಾವುದೇ ವ್ಯಕ್ತಿಯ ಘನತೆಗೆ ಧಕ್ಕೆ ತರುವಂತೆ ಟ್ವೀಟ್‌ ಸುಳ್ಳಾಗಿ ಚಿತ್ರಿಸಿದ್ದರೆ, ಮನಬಂದಂತೆ ವಿಡಂಬನೆ ಮಾಡಿದ್ದರೆ.
ಪೋಸ್ಟ್‌ಗಳನ್ನು ಮೂಲಭೂತ ಸಂಯೋಜನೆ,
ಸನ್ನಿವೇಶ, ಕಾಲಗಳಿಗೆ ತಾಳೆ ಇಲ್ಲದಂತೆ ಗಣನೀಯವಾಗಿ ಎಡಿಟ್‌ ಮಾಡಿದ್ದರೆ.
ಮೂಲ ವಿಡಿಯೊವನ್ನು ಪರಿಷ್ಕರಿಸಿ ಹೊಸ ವಿಡಿಯೊ ಫ್ರೆàಮ್‌, ಓವರ್‌ಡಬ್‌ ಆಗಿರುವ ಆಡಿಯೊ, ಸಬ್‌ಟೈಟಲ್‌ನಲ್ಲಿ ತೀವ್ರ ಬದಲಾವಣೆ ಮಾಡಿದ್ದರೆ.
ಮಾಧ್ಯಮಗಳು ಪ್ರಸಾರ ಮಾಡಿದ ವಿಚಾರಗಳಿಗೆ ಕೃತಕವಾಗಿ ಅಥವಾ ಮೂಲ ವಿಷಯಕ್ಕೆ ಉದ್ದೇಶಪೂರ್ವಕವಾಗಿ ಗೊಂದಲ ಹುಟ್ಟಿಸುವಂತೆ ಟ್ವೀಟಿಸಿದ್ದರೆ…

ಟ್ವೀಟ್‌ ಡಿಲೀಟ್‌ ಆಗುತ್ತಾ?
ನಕಲಿ ಅಥವಾ ಕಲ್ಪಿತ ಟ್ವೀಟ್‌ಗಳನ್ನು ಟ್ವಿಟರ್‌ ಕೆಲವು ಸಂದರ್ಭಗಳಲ್ಲಿ ಡಿಲೀಟ್‌ ಕೂಡ ಮಾಡುವ ಸಾಧ್ಯತೆ ಇರುತ್ತೆ. ಟ್ವೀಟ್‌ಗಳು ಸಾಮಾಜಿಕ ಹಿಂಸೆಗೆ ಪ್ರಚೋದಿಸುವಂತಿದ್ದರೆ, ಯಾವುದೇ ವ್ಯಕ್ತಿ- ಸಮೂಹಕ್ಕೆ ಬೆದರಿಕೆಯೊಡ್ಡುವಂತಿದ್ದರೆ, ವ್ಯಕ್ತಿಯ ಘನತೆಗೆ ಧಕ್ಕೆ ತರುವಂಥ ಸಂದರ್ಭಗಳಲ್ಲಿ “ನಿಯಮಗಳ’ ಅನ್ವಯ ಟ್ವಿಟರ್‌ ಅವುಗಳನ್ನು ಡಿಲೀಟ್‌ ಮಾಡಬಹುದು.

ಹೆಚ್ಚು ಕಾಣಿಸೋದಿಲ್ಲ…
ನಕಲಿ ಅಥವಾ ಕೃತಕ ಮಾಹಿತಿಯುಳ್ಳ ಟ್ವೀಟ್‌ಗಳನ್ನು ಲೈಕ್‌ ಮಾಡುವ ಅಥವಾ ರೀಟ್ವೀಟ್‌ ಮಾಡುವ ಸಂದರ್ಭದಲ್ಲಿ ಬಳಕೆದಾರರಿಗೂ ಆ ಟ್ವೀಟ್‌ನ ವಾಸ್ತವಾಂಶದ ಬಗ್ಗೆ ವಾರ್ನಿಂಗ್‌ ನೀಡುತ್ತದೆ. ಅಲ್ಲದೆ, ಇಂಥ ಟ್ವೀಟ್‌ಗಳನ್ನು ಹೆಚ್ಚು ಕಾಣಿಸದಂತೆಯೂ ತಡೆಹಿಡಿಯುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next