Advertisement
ಪದವಿ ಕಾಲೇಜುಗಳಲ್ಲಿ ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ರಸಾ ಯನಶಾಸ್ತ್ರ, ಜೀವಶಾಸ್ತ್ರ, ಭೌತ ಶಾಸ್ತ್ರ, ಸಸ್ಯಶಾಸ್ತ್ರ, ಕಂಪ್ಯೂಟರ್ ವಿಜ್ಞಾನ, ಸಂಖ್ಯಾ ಶಾಸ್ತ್ರದ ರೀತಿಯಲ್ಲೆ ಗಣಿತ ಶಾಸ್ತ್ರ ವಿಷಯಕ್ಕೂ ಲ್ಯಾಬ್ ಹೊಂದಲು ಹೆಚ್ಚುವರಿ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಇದರಿಂದ ಪಾಠ, ನೋಟ್ಸ್, ಮಾತ್ರವಲ್ಲ ಸಮಸ್ಯೆ ಬಿಡಿಸಲು ಗಣಿತ ಲ್ಯಾಬ್ ವ್ಯವಸ್ಥೆ ಕೂಡ ವಿದ್ಯಾರ್ಥಿಗಳಿಗೆ ದೊರೆತಂತಾಗಿದೆ.
ಕಂಪ್ಯೂಟರ್ ಆಧಾರಿತ ಗಣಿತ ಲ್ಯಾಬ್‌ಗಾಗಿ ಈಗಾಗಲೇ ಗಣಿತ ಪ್ರಾಧ್ಯಾಪಕರಿಗೆ ತರಬೇತಿಗಳು ನಡೆದಿದೆ. ಪ್ರಥಮ ವರ್ಷ ಮತ್ತು ದ್ವಿತೀಯ ವರ್ಷ¨ ಪದವಿಯಲ್ಲಿ ವಾರದ 6 ಥಿಯರಿ ತರಗತಿ ಈಗ 4ಕ್ಕೆ ಇಳಿಸಿ 3 ಪ್ರಾಕ್ಟಿಕಲ್ ತರಗತಿಗಳು ಮತ್ತು ಕೊನೆಯ ವರ್ಷದ ಪದವಿಯ 10 ತರಗತಿಯನ್ನು 6ಕ್ಕೆ ಇಳಿಸಲಾಗಿದ್ದು ಅದರಲ್ಲಿ ನಾಲ್ಕು ಪ್ರಾಕ್ಟಿಕಲ್ ತರಗತಿಗಳು ಜಾರಿಗೆ ಬಂದಿದೆ. 100 ಅಂಕಗಳ ಥಿಯರಿಯಲ್ಲಿ 20 ಇಂಟರ್ನಲ್ 80ಅಂಕ ವಿವಿ ಪರೀಕ್ಷೆಯಿದ್ದರೆ, 50 ಅಂಕಗಳ ಪ್ರಾಕ್ಟಿಕಲ್‌ನಲ್ಲಿ 10 ಇಂಟರ್ನಲ್ ಹಾಗೂ 40 ಅಂಕಗಳ ವಿವಿ ಪರೀಕ್ಷೆ ಇರುತ್ತದೆ. ಶೇ.35 ಅಂಕವನ್ನು ಉತ್ತೀರ್ಣ ಹೊಂದಲು ಪಡೆಯಬೇಕಾಗುತ್ತದೆ. ಈ ಪ್ರಯೋಗಾಲಯಕ್ಕೆ ಹೆಚ್ಚುವರಿ ಕೊಠಡಿ, ಪ್ರಾಧ್ಯಾಪಕ, ಕಂಪ್ಯೂಟರ್‌ಗಳ ಅಗತ್ಯವೂ ಇದೆ.ಇವುಗಳಿಗೆ ಸರಕಾರಿ, ಅನುದಾನಿತ ಕಾಲೇಜುಗಳು ಅನುದಾನಕ್ಕೆ ಕಾಯಬೇಕು. ದಾನಿಗಳ ಮೊರೆ ಹೋಗಬೇಕು.ಖಾಸಗಿ ಕಾಲೇಜುಗಳು ಸ್ವತಃನಿಧಿಯಿಂದ ಕಾರ್ಯಾಚರಿಸಬೇಕಾಗಿದೆ.
Related Articles
2019ರ ಜೂನ್‌ನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ವಿಜ್ಞಾನ ಪದವಿ, ಗಣಿತ ಎಂಎಸ್ಸಿ ಪಠ್ಯವನ್ನು ಪರಿಷ್ಕರಿಸಿದ ಸಂದರ್ಭ ಪ್ರಯೋಗಾಲಯದ ಅಗತ್ಯವನ್ನು ಮನಗಾಣಲಾಗಿತ್ತು. ಗಣಿತ ಪ್ರಯೋಗಾಲಯ ಎಸ್‌ಸಿಐ, ಮ್ಯಾಕ್ಸಿಮಾ ಸಾಫ್ಟವೇರ್ ಮೂಲಕ ಕಾರ್ಯನಿರ್ವಹಿಸುತ್ತದೆ.
Advertisement