ಕೊರಟಗೆರೆ : ಇತಿಹಾಸ ಪ್ರಸಿದ್ಧ ಕ್ಯಾಮನಹಳ್ಳಿ ಶ್ರೀ ಆಂಜನೇಯ ಸ್ವಾಮಿ ದನಗಳ ಜಾತ್ರೆ ಕಳೆದ 2 ವರ್ಷಗಳಿಂದ ಕೊರೋನಾ ನಂತರ ಚರ್ಮ ಗಂಟು ರೋಗದಿಂದ ಕಲೆಗೊಂಡಿದ್ದ ದನಗಳ ಜಾತ್ರೆ ಈಗ ಸಾವಿರಾರು ರಾಸುಗಳು ಸೇರುವ ಮುಖಾಂತರ ಪ್ರತಿ ವರ್ಷದಂತೆ ಸಾಂಪ್ರದಾಯಿಕ ಮುಂದುವರೆಯುವ ಮೂಲಕ ಕ್ಯಾಮೇನಹಳ್ಳಿ ದನದ ಜಾತ್ರೆಗೆ ಕಳೆ ಬಂದಿದೆ.
ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ರಾಜ್ಯದ ಪ್ರಸಿದ್ಧ ಧಾರ್ಮಿಕ ಕ್ಷೇತ್ರದಲ್ಲೂಂದಾದ ಕ್ಯಾಮೇನಹಳ್ಳಿ ಶ್ರೀ ಆಂಜನೇಯ ಸ್ವಾಮಿ ಧನಗಳ ಜಾತ್ರೆ ಮಕರ ಸಂಕ್ರಾಂತಿ ಮರುದಿನ ಪ್ರತಿ ವರ್ಷ ಲಕ್ಷಾಂತರ ರಾಸುಗಳು ಸಂಕ್ರಾಂತಿ ಸುಗ್ಗಿಯ ನಂತರ ಮನೆ ಬಿಟ್ಟು ಜಾತ್ರೆ ಸೇರುವುದು ವಾಡಿಕೆಯಾಗಿದ್ದು, ಕಳೆದ ಎರಡು ಮೂರು ವರ್ಷಗಳಿಂದ ಕೊರೋನಾ ದಿಂದ ದನಗಳ ಜಾತ್ರೆ ಸ್ಥಗಿತಗೊಂಡು ಈಗ ಮತ್ತೆ ಸಾವಿರಾರು ರಾಸುಗಳು ಸೇರುವ ಮುಖೇನ ರಾಜಕಳೆ ಬಂದಿದೆ.
ಕ್ಯಾಮೇನಹಳ್ಳಿ ಆಂಜನೇಯ ಸ್ವಾಮಿ ದನಗಳ ಜಾತ್ರೆಗೆ ರಾಸುಗಳನ್ನು ಮಾರಲು ಆಗೋ ಖರೀದಿಸಲು ರಾಜ್ಯ ಅಷ್ಟೇ ಅಲ್ಲದೆ ಹೊರರಾಜ್ಯಗಳಿಂದಲೂ ಜನ ಆಗಮಿಸಲಿದ್ದು, ತುಮಕೂರು ಜಿಲ್ಲೆ ಆಂಧ್ರ ತಮಿಳ್ ನಾಡು ತೆಲಂಗಾಣದಿಂದಲೂ ಹಲವು ರೈತರು ಹಾಗೂ ವ್ಯವಹಾರ ಈ ಜಾತ್ರೆಯಲ್ಲಿ ರಾಸುಗಳನ್ನು ಕೊಳ್ಳುವ ಭರಾಟೆಯಲ್ಲಿ ಕೋಟ್ಯಾಂತರ ರೂಪಾಯಿ ವ್ಯವಹಾರ ನಡೆಯುವ ಮುಖೇನಾ ಮತ್ತೆ ಕ್ಯಾಮೇನಹಳ್ಳಿ ಶ್ರೀ ಆಂಜನೇಯ ಸ್ವಾಮಿ ದನಗಳ ಜಾತ್ರೆಯ ಗತವೈಭವ ಮರುಕಳಿಸಿದೆ.
ದನಗಳ ಚರ್ಮ ಗಂಟು ರೋಗ ರಾಜ್ಯಾದ್ಯಂತ ಕ್ಷಣಿಸುತ್ತಿದ್ದು, ಸರ್ಕಾರ ಮತ್ತು ಆಡಳಿತ ಮುಂಜಾಗ್ರತೆಯಿಂದ ಕೆಲವು ಧನಗಳ ಜಾತ್ರಗಳನ್ನ ಸ್ಥಿಗಿತಗೊಳಿಸಿದರಾದರೂ ಈ ಬಾರಿ ಉತ್ತಮ ಮಳೆಯಾಗಿ ರೈತರಲ್ಲಿ ಮಂದಹಾಸ ಬೀರುವ ಸಂದರ್ಭದಲ್ಲಿ ಉತ್ತಮ ರಾಸುಗಳಿಲ್ಲದೆ ಧನದ ಜಾತ್ರೆಗಳು ಅನಿವಾರ್ಯವಾಗಿದ್ದು ಅದೇ ಮಾದರಿಯಲ್ಲಿ ಕ್ಯಾಮೇನಹಳ್ಳಿ ಅಕ್ಕ ಪಕ್ಕದ ನೂರಾರು ಗ್ರಾಮಗಳ ರೈತರುಗಳು ನಮಗೆ ಮಳೆಗಾಲದಲ್ಲಿ ಉತ್ತಮ ಮಳೆಯಾದ ಕಾರಣ ಬೇಸಾಯಕ್ಕೆ ರಾಸುಗಳ ಅವಶ್ಯಕತೆ ಇದೆ ದಯಮಾಡಿ ದನದ ಜಾತ್ರೆಗೆ ಅವಕಾಶ ಕಲ್ಪಿಸಿಕೊಡಿ ಎಂದು ಮನವಿಯ ನಂತರ ಸಾರ್ವಜನಿಕರು ಯಾವುದನ್ನು ಲೆಕ್ಕಿಸದೆ ಸಾವಿರಾರು ರಾಸುಗಳು ಸೇರುವ ಮುಖ್ಯೇನಾ ಜಾತ್ರೆಯ ಕಳೆ ಪ್ರತಿ ವರ್ಷದಂತೆ ರಂಗೇರಿದೆ.
ಈ ದನದ ಜಾತ್ರೆಯು 5 ದಿನಗಳ ಕಾಲ ನಡೆಯುವ ಸಾಧ್ಯತೆಗಳಿದ್ದು, ಇದೇ ತಿಂಗಳ 28 ರಂದು ಬ್ರಹ್ಮ ರಥೋತ್ಸವ ನಡೆಯಲಿದ್ದು ಅಲ್ಲಿಯವರೆಗೂ ತುಂಬು ದನಗಳ ಜಾತ್ರೆ ನಡೆಯುವ ಸಾಧ್ಯತೆ ಇರುವುದರಿಂದ ಮತ್ತೆ ಕ್ಯಾಮೇನಹಳ್ಳಿ ಶ್ರೀ ಆಂಜನೇಯ ಸ್ವಾಮಿಯ ದನಗಳ ಜಾತ್ರೆ ಹಾಗೂ ಬ್ರಹ್ಮ ರಥೋತ್ಸವ ಗತವೈಭವನ ಮರುಕಳಿಸಲಿದೆ ಎನ್ನಲಾಗಿದೆ.
ಇದನ್ನೂ ಓದಿ: ರಾಜ್ಯಪಾಲ ಹುದ್ದೆಗೆ ಭಗತ್ ಸಿಂಗ್ ಕೋಶಿಯಾರಿ ವಿದಾಯ?