Advertisement

Kyadiguppa: ಶಿಕ್ಷಕ ಬಸವರಾಜ ವಾಲೀಕಾರ ಅವರಿಗೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ

10:08 PM Sep 02, 2023 | Team Udayavani |

 ಕುಷ್ಟಗಿ: ವಿಧ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಸುವ ನಿಟ್ಟಿನಲ್ಲಿ ಅವರ ಕ್ರಿಯಾಶೀಲತೆಗೆ ತಾಲೂಕಿನ ವಿಜ್ಞಾನ ಶಿಕ್ಷಕ ಬಸವರಾಜ ವಾಲೀಕಾರ ಅವರಿಗೆ ಪ್ರಸಕ್ತ ಸಾಲಿನ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಒಲಿದಿದೆ.

Advertisement

ತಾಲೂಕಿನ ಕ್ಯಾದಿಗುಪ್ಪ ಸರ್ಕಾರಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕರಾಗಿರುವ ಬಸವರಾಜ ವಾಲೀಕಾರ ಅವರಿಗೆ ಈ ಪ್ರಶಸ್ತಿ ಅನಿರೀಕ್ಷಿತವೆನಿಸಿದೆ. ಈ ಪ್ರಶಸ್ತಿ ನಿರೀಕ್ಷಿಸಿರಲಿಲ್ಲ. ಕಳೆದ ವರ್ಷ ನೆರೆಬೆಂಚಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾ ಕಂಪಾಪೂರಮಠ ಅವರಿಗೆ ಒಲಿದಿತ್ತು. ಪುನಃ ಇದೇ ತಾಲೂಕಿಗೆ ರಾಜ್ಯ ಮಟ್ಟದ ಪ್ರಶಸ್ತಿ ಸಾದ್ಯತೆ ಕಡಿಮೆ ಎನ್ನುವುದು ತರ್ಕವಾಗಿತ್ತು. ಆದರೀಗ ಆ ತರ್ಕ ಹುಸಿಯಾಗಿಸಿದ್ದು ನನ್ನ ಪ್ರಯೋಗಾತ್ಮಕ ವಿಜ್ಞಾನ ಮಾದರಿಗಳಿಗೆ ಈ ಪ್ರಶಸ್ತಿ ಸಂದಿದ್ದು ಪ್ರಶಸ್ತಿಯಿಂದ ನನ್ನ ಜವಾಬ್ದಾರಿ ದ್ವಿಗುಣವಾಗಿಸಿದೆ ಎಂದರು.

ಪ್ರತಿ ವರ್ಷ ವಿಜ್ಞಾನ ಮಾದರಿಗಳ ವಿಶೇಷತೆಗಳ ಮೂಲಕ ತಾಲೂಕಾ ಮಟ್ಟದಿಂದ ರಾಷ್ಟ್ರಮಟ್ಟದವರೆಗೆ ಗಮನ ಸೆಳೆದ ಕೀರ್ತನೆ ಇವರಿಗೆ ಸಲ್ಲುತ್ತದೆ. 2009ರಲ್ಲಿ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಹಳ್ಳಿಯ ಮಕ್ಕಳನ್ನು ದೆಹಲಿಯಲ್ಲಿ ಪ್ರತಿನಿಧಿಸಿ ರಾಷ್ಟ್ರೀಯ ಮಟ್ಟದಲ್ಲಿ ಮಿಂಚುವಂತೆ ಮಾಡಿದ್ದರು.ರಾಷ್ಟ್ರೀಯ ಮಟ್ಟದ ಇನ್ಪ್ಸಾಯರ್ ಅವಾರ್ಡನಲ್ಲಿ ವಿದ್ಯುತ್ ಪರಿಣಾಮಗಳ ಪ್ರಯೋಗದ ಮೂಲಕ ಗಮನ ಸೆಳೆದಿದ್ದರು. ಗ್ರಾಮೀಣ ಪ್ರದೇಶದ ಮಕ್ಕಳನ್ನು ವಿಜ್ಞಾನ ವಿಷಯದಲ್ಲಿ ಆಸಕ್ತಿ ಬೆಳೆಸಿ ಪ್ರತಿ ವರ್ಷ ತಾಲೂಕಾ ಮಟ್ಟದಿಂದ ಜಿಲ್ಲಾಮಟ್ಟದ ಹಲವು ಬಾರಿ ಪ್ರಶಸ್ತಿ ಪಡೆದಿದ್ದರು. ಪ್ರತಿ ವರ್ಷವೂ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಇವರ ಮಾದರಿ ಪ್ರಶಸ್ತಿ ಖಾತ್ರಿಯಾಗಿತ್ತು. ಅಲ್ಲದೇ ಎರಡು ಬಾರಿ ರಾಜ್ಯಮಟ್ಟದ ಪ್ರಶಸ್ತಿಯಿಂದ ರಾಷ್ಟ್ರಮಟ್ಟದಲ್ಲಿ ಪ್ರತಿನಿಧಿಸುವ ಮಟ್ಟಿಗೆ ವಿಧ್ಯಾರ್ಥಿಗಳನ್ನು ತಯಾರು ಮಾಡಿದ ಅವರ ಅವಿರತ ಸೇವೆಗೆ ಈ ಪ್ರಶಸ್ತಿ ಪರಿಗಣಿಸಲ್ಪಟ್ಟಿದೆ.

ಬಸವರಾಜ ವಾಲೀಕಾರ ಅವರ 14 ವರ್ಷದ ಸೇವೆಯಲ್ಲಿ ಸೇಬಿನಕಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2002ರಿಂದ 7 ವರ್ಷ ಸೇವೆ ನಂತರ ಪ್ರೌಢಶಾಲೆ ಶಿಕ್ಷಕರಾಗಿ 12 ವರ್ಷ ಹಿರೇಗೊಣ್ಣಾಗರ ಸರ್ಕಾರಿ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಕಳೆದ ಒಂದೂವರೆ ವರ್ಷದಿಂದ ಕ್ಯಾದಿಗುಪ್ಪ ಸರ್ಕಾರಿ ಪ್ರೌಢಶಾಲೆಯಲ್ಲಿ ಸದ್ಯ ಸೇವೆಯಲ್ಲಿದ್ದಾರೆ.2017-18ರಲ್ಲಿ ತಾಲೂಕಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ, 2022-23ರಲ್ಲಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದಿರುವ ವಿಜ್ಞಾನ ಶಿಕ್ಷಕ ಬಸವರಾಜ್ ವಾಲೀಕಾರ ಅವರು ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಸದಸ್ಯರಾಗಿದ್ದಾರೆ. 2022-23ರಲ್ಲಿ ಜಿಲ್ಲಾ ಮಟ್ಟದ ಕಲಿಕಾ ಮಿತ್ರರಾಗಿ ಇಲಾಖೆಯ ಮಾರ್ಗದರ್ಶನದಂತೆ 2022-23ರಲ್ಲಿ ವಿಜ್ಞಾನ ಚಿಗುರು ಪುಸ್ತಕ ತಯಾರಿಸಿದ್ದಾರೆ. 2021ರಲ್ಲಿ ವಿಜ್ಞಾನ ವಿಷಯ ಪಾಸಿಂಗ್ ಪ್ಯಾಕೇಜ್ ತಯಾರಿಸಿ ಎಲ್ಲಾ ಶಾಲೆಗಳಿಗೆ ತಲುಪಿಸಿದ್ದಾರೆ. ಈ ಬಾರಿಯ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿರುವುದು ತಾಲೂಕಿನ ಹೆಮ್ಮೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next