Advertisement

“Kya Yaar…”; 2019ರ ವಿಶ್ವಕಪ್ ಕುರಿತು ಪ್ರಶ್ನೆ: ಪತ್ರಕರ್ತನ ಬಾಯಿ ಮುಚ್ಚಿಸಿದ ರೋಹಿತ್

08:38 PM Oct 04, 2023 | Team Udayavani |

ಹೊಸದಿಲ್ಲಿ: ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮ ಅವರು ಯಾವಾಗಲೂ ತಮ್ಮ ಹಾಸ್ಯದ ಪ್ರತಿಕ್ರಿಯೆಗಳಿಗೆ ಹೆಸರುವಾಸಿಯಾಗಿದ್ದು,ಬುಧವಾರ ಅವರು ಸುದ್ದಿಗಾರರೊಬ್ಬರಿಗೆ ನೀಡಿದ ತೀಕ್ಷ್ಣವಾದ ಉತ್ತರಗಳು ವೈರಲ್ ಆಗಿವೆ.

Advertisement

ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ರ ಕ್ಯಾಪ್ಟನ್ಸ್ ಡೇ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯಲ್ಲಿ ವರದಿಗಾರರೊಬ್ಬರು ರೋಹಿತ್ ಅವರಿಗೆ 2019 ರ ವಿಶ್ವಕಪ್ ಪಂದ್ಯಾವಳಿಯ ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್ ನಡುವಿನ ಫೈನಲ್ ಪಂದ್ಯದ ವಿವಾದಾತ್ಮಕ ಅಂತ್ಯದ ಬಗ್ಗೆ ಕೇಳಿದರು. ಸ್ವಲ್ಪ ಗರಂ ಆಗಿ ಉತ್ತರಿಸಿದ ರೋಹಿತ್,’ ಕ್ಯಾ ಯಾರ್…(ಯೇ ಮೇರಾ ಕಾಮ್ ನಹೀ ಘೋಷಿತ್ ಕರ್ನಾ) ವಿಜೇತರನ್ನು ನಿರ್ಧರಿಸುವುದು ನನ್ನ ಕೆಲಸವಲ್ಲ’ ಎಂದು  ಬಾಯಿ ಮುಚ್ಚಿಸಿದರು.

ನ್ಯೂಜಿಲ್ಯಾಂಡ್ 241/8 (50) ಮಾಡಿತ್ತು, ಇಂಗ್ಲೆಂಡ್ ಕೂಡ 241 (50) ಆಲೌಟಾಗಿತ್ತು. ಸೂಪರ್ ಓವರ್ ಕೂಡ ಟೈ ಆಗಿತ್ತು, ಆದರೆ ಇಂಗ್ಲೆಂಡ್‌ನ ಉತ್ತಮ ಬೌಂಡರಿ ಎಣಿಕೆ (26) ನ್ಯೂಜಿಲ್ಯಾಂಡ್ (17) ಬಾರಿಸಿತ್ತು, ಅತೀ ರೋಚಕ  ಪಂದ್ಯದಲ್ಲಿ  ಮೊದಲ ಬಾರಿಗೆ  ವಿಶ್ವಕಪ್ ಪ್ರಶಸ್ತಿಯನ್ನು ಗೆಲ್ಲಲು ಸಹಕಾರಿಯಾಗಿತ್ತು. ಇದು ಕ್ರಿಕೆಟ್ ಲೋಕದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next