ದುಬೈ: ಟಿ20 ಕ್ರಿಕೆಟ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಒಂದೇ ಪಂದ್ಯದಲ್ಲಿ ಎರಡು ಸೂಪರ್ ಓವರ್‌ಗಳು ದಾಖಲಾಗಿವೆ. ಈ ಹಿಂದೆ ಯಾವುದೇ ಪಂದ್ಯದಲ್ಲಿ ಇಂತಹದ್ದೊಂದು ಬೆಳವಣಿಗೆ ಆಗಿರಲಿಲ್ಲ. ಪಂಜಾಬ್-ಮುಂಬೈ ನಡುವಿನ ಪಂದ್ಯ ಇಂತಹದ್ದೊಂದು ಅಪರೂಪದ ಘಟನೆಗೆ ಸಾಕ್ಷಿಯಾಯಿತು
ಸೂಪರ್ ಓವರ್ ಸೂಪರ್
ನಿಗದಿತ ಓವರ್‌ನಲ್ಲಿ ಪಂದ್ಯ ಟೈಗೊಂಡ ಬಳಿಕ ಮೊದಲ ಸೂಪರ್ ಓವರ್ ನಡೆಯಿತು. ಅಲ್ಲಿ ಎರಡು ವಿಕೆಟ್ ಕಳೆದುಕೊಂಡ ಪಂಜಾಬ್ 5 ರನ್ ಗಳಿಸಿತು. ಮುಂಬೈಗೆ6 ರನ್ ಗುರಿ ಲಭಿಸಿತು. ಇದನ್ನು ಬೆನ್ನತ್ತಿದ ಮುಂಬೈ 1 ವಿಕೆಟ್ ನಷ್ಟಕ್ಕೆ ತಾನೂ ಸರಿಯಾಗಿ 5 ರನ್ ಗಳಿಸಿತು! ಕಡೆಗೆ ಮತ್ತೂಂದು ಸೂಪರ್ ಓವರ್‌ಗೆ ಹೋಗಲು ನಿರ್ಧರಿಸಲಾಯಿತು. ಅಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಕ್ರಿಸ್ ಜೋರ್ಡಾನ್ ಓವರ್‌ನಲ್ಲಿ 11 ರನ್ ಗಳಿಸಿತು. ಇದನ್ನು ಬೆನ್ನತ್ತಿದ ಪಂಜಾಬ್ 15 ರನ್ ಗಳಿಸಿ, ನಾಲ್ಕೇ ಎಸೆತದಲ್ಲಿ ಜಯಿಸಿತು
ಒಂದೇ ದಿನದಲ್ಲಿ 3 ಸೂಪರ್ ಓವರ್
ಒಂದೇ ದಿನ ಮೂರು ಸೂಪರ್ ಓವರ್ ಸಂಭವಿಸಿದ್ದು ಬಹುಶಃ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲಿರಬೇಕು. ಭಾನುವಾರ ಹೈದರಾಬಾದ್-ಕೋಲ್ಕತ ನಡುವಿನ ಮೊದಲ ಪಂದ್ಯವೂ ಸೂಪರ್ ಓವರ್‌ನಲ್ಲೇ ನಿರ್ಧಾರವಾಗಿತ್ತು. ಅದಾದ ಬಳಿಕ ಪಂಜಾಬ್-ಮುಂಬೈ ಪಂದ್ಯದಲ್ಲಿ ಎರಡು ಸೂಪರ್ ಓವರ್ ನಡೆಯಿತು!