Advertisement

ಕುವೈಟ್‌: ಸೇವೆಯಲ್ಲಿ ಭಾರತೀಯರೇ ಮುಂದು

12:50 PM Apr 27, 2020 | Sriram |

ಉಡುಪಿ/ ಬಂಟ್ವಾಳ: ಕೇವಲ 50ರಿಂದ 60 ಲಕ್ಷ ಜನಸಂಖ್ಯೆ ಹೊಂದಿರುವ ಪುಟ್ಟ ದೇಶ ಕುವೈಟ್‌. ಕೋವಿಡ್‌-19 ಸೋಂಕು ಈ ದೇಶವನ್ನೂ ಬಿಟ್ಟಿಲ್ಲ. ಇಲ್ಲಿ ಕೋವಿಡ್‌-19 ಸೋಂಕಿತರಲ್ಲಿ ಭಾರತೀಯ ಮೂಲದವರೇ ಹೆಚ್ಚು ಅನ್ನುವುದು ಬೇಸರದ ವಿಷಯ. ಶೇ. 70ರಷ್ಟು ಭಾರತೀಯರು ಸೋಂಕಿಗೆ ಒಳಗಾಗಿದ್ದಾರೆ.

Advertisement

ಹೀಗೆಂದು ಮಾಹಿತಿ ನೀಡಿದವರು ಅಲ್ಲಿನ ಸಾಲಿ¾ಯಾ ನಗರದಖಾಸಗಿ ಆರೋಗ್ಯ ಸಂಸ್ಥೆಯಲ್ಲಿ ಮೇಲ್ವಿಚಾರಕರಾದ‌ ಬ್ರಹ್ಮಾವರದ ಮಟಪಾಡಿಯ ಸತ್ಯನಾರಾಯಣ ಭಂಡಾರಿ ಮತ್ತು ಕುವೈಟ್‌ನಲ್ಲಿ ಅಟೋಮೊಬೈಲ್‌ ಟೆಕ್ನಿಶಿಯನ್‌ ಉದ್ಯೋಗದಲ್ಲಿರುವ ಬಂಟ್ವಾಳ ಮೂಲದ ಜಯಂತ್‌ ನಾಯ್ಕ ಸರಪಾಡಿ.

ಲಾಕ್‌ಡೌನ್‌ ಹೇಗೆ ಜಾರಿಯಲ್ಲಿದೆ ಅನ್ನುವ ಬಗ್ಗೆ ಅವರಿಬ್ಬರು ದೂರವಾಣಿ ಮೂಲಕ ಅನಿಸಿಕೆ ತಿಳಿಸಿದ್ದಾರೆ. ಕುವೈಟ್‌ನಲ್ಲಿ ಭಾರತಮೂಲದವರು ಹೆಚ್ಚಾಗಿ ಉದ್ಯೋಗದಲ್ಲಿದ್ದಾರೆ. ಮಿನಿಸ್ಟ್ರಿಯಲ್‌ ಆಫ್ ಹೆಲ್ತ್‌ ತಂಡದಲ್ಲಿ ಕೇರಳ, ಉಡುಪಿ, ಮಂಗಳೂರು ಭಾಗದ ವೈದ್ಯರು, ನರ್ಸ್‌ಗಳು ಹೆಚ್ಚು.
ರಾತ್ರಿ ಕರ್ಫ್ಯೂ ಕುವೈಟ್‌ನಲ್ಲಿ ಬೆಳಗ್ಗೆ 6ರಿಂದ ಸಂಜೆ 5ರ ತನಕ ಸಣ್ಣ ದಿನಸಿ ಅಂಗಡಿಗಳು, ಸೂಪರ್‌ ಮಾರ್ಕೆಟ್‌ ಇತ್ಯಾದಿ ತೆರೆದಿರುತ್ತವೆ. ಬಳಿಕ ಬೆಳಗ್ಗೆ5ರ ವರೆಗೂ ಕರ್ಫ್ಯೂ.

ಈ ಹೊತ್ತಿನಲ್ಲಿ ಮನೆಯಿಂದ ಹೊರಗೆ ಹೋದರೆ ಪೊಲೀಸರು ಬಂಧಿಸು ತ್ತಾರೆ.ನಿಯಮ ಉಲ್ಲಂಘಿಸಿದರೆ 1,000 ಕೆಡಿ (ಸುಮಾರು 2 ಲಕ್ಷ ರೂ.) ದಂಡ ಹಾಗೂ 3 ವರ್ಷ ಜೈಲು ಶಿಕ್ಷೆ. ಅನ್ಯ ದೇಶದವರಾಗಿದ್ದರೆ ಸುದೀರ್ಘ‌ ಅವಧಿ ಜೈಲಿನಲ್ಲಿರಿಸುತ್ತಾರೆ. ಶಿಕ್ಷೆಯ ಬಳಿಕ ಆವರು ಅಲ್ಲಿ ಇರುವಂತಿಲ್ಲ, ಸ್ವದೇಶಕ್ಕೆ ತೆರಳಬೇಕು.

ಕಾರ್ಮಿಕರು ಸಂಕಷ್ಟದಲ್ಲಿ
ಸರಕಾರಿ ಸಿಬಂದಿ, ಅಧಿಕಾರಿಗಳಿಗೆ ಮನೆಯಿಂದಲೇ ಕೆಲಸದ ಹೊಣೆ. ಕಾರ್ಖಾನೆ ಇತ್ಯಾದಿ ಉತ್ಪಾದನ ಕ್ಷೇತ್ರಗಳ ಕಾರ್ಮಿಕರಿಗೆ ಕಡ್ಡಾಯ ರಜೆ ನೀಡಿದ್ದು, ಈ ಅವಧಿಯಲ್ಲಿ ಅರ್ಧ ಸಂಬಳ ನೀಡಲಾಗುತ್ತದೆ. ಅಂಥ ಕಾರ್ಮಿಕರು ಹೆಚ್ಚು ಸಮಸ್ಯೆಗೆ ಸಿಲುಕಿದ್ದಾರೆ.

Advertisement

ಭಾರತೀಯರ ಸೇವೆ
ಸೋಂಕು ಪೀಡಿತರ ಸೇವೆಯಲ್ಲಿ ಭಾರತೀಯರೇ ಹೆಚ್ಚಾಗಿ ತೊಡಗಿಸಿ ಕೊಂಡಿದ್ದಲ್ಲದೆ ಸೋಂಕಿತರಲ್ಲಿ ಭಾರತೀಯರೇ ಹೆಚ್ಚಿರುವುದರಿಂದ ಕೆಲ ದಿನಗಳ ಹಿಂದೆ ಭಾರತದ ವೈದ್ಯರು, ಶುಶ್ರೂಷಕಿಯರು, ಟೆಕ್ನೀಶಿಯನ್‌ ಒಳಗೊಂಡ 15 ಮಂದಿಯ ತಂಡ ಕುವೈಟ್‌ಗೆ ಆಗಮಿಸಿ ವೈದ್ಯಕೀಯ ಸೇವೆ ಒದಗಿಸುತ್ತಿದೆ. ಭಾರತ ಸರಕಾರ ಕುವೈಟ್‌ನಲ್ಲಿರುವ ಭಾರತೀಯರ ಜೀವ ರಕ್ಷಣೆಗೆ ಕೈಗೊಂಡ ಕಾಳಜಿಗೆ ನಾವೆಲ್ಲರೂ ಹೆಮ್ಮೆಪಡಬೇಕು ಎಂದು ಹೇಳುತ್ತಾರೆ ಅವರು.

ಕೋವಿಡ್‌-19 ವಿರುದ್ಧ ಭಾರತ ಸಮರ್ಥವಾಗಿ ಹೋರಾಡುತ್ತಿದೆ. 130 ಕೋಟಿ ಜನಸಂಖ್ಯೆ ಇರುವ ದೇಶದಲ್ಲಿ ನಿಯಂತ್ರಣ ಸವಾಲು. ಉಳಿದ ದೇಶಗಳಿಗೆ ಹೋಲಿಸಿದಾಗ ಭಾರತ ಉತ್ತಮ ಸ್ಥಿತಿಯಲ್ಲಿದೆ. ಭಾರತೀಯರು ಆಯುರ್ವೇದಕ್ಕೆ ಹೆಚ್ಚು ಒತ್ತು ಕೊಡುವ ಕಾರಣ ಅವರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿದ್ದು ಸೋಂಕಿನ ಪ್ರಮಾಣ ಕಡಿಮೆಯಾಗಲು ಕಾರಣವಾಗಿರಬಹುದು.
– ಜಯಂತ್‌ ನಾಯ್ಕ ಸರಪಾಡಿ

ಕುವೈಟ್‌ ಜನತೆ ಲಾಕ್‌ಡೌನ್‌ ನಿಯಮಗಳನ್ನು ಚೆನ್ನಾಗಿ ಪಾಲನೆ ಮಾಡುತ್ತಿದ್ದಾರೆ. ಭಾರತದಲ್ಲಿ ಜನರು ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ನಿಯಮ ಪಾಲಿಸಿ ಸರಕಾರದ ಜತೆ ನಿಲ್ಲಬೇಕು.
– ಸತ್ಯನಾರಾಯಣ ಭಂಡಾರಿ, ಮಟಪಾಡಿ

Advertisement

Udayavani is now on Telegram. Click here to join our channel and stay updated with the latest news.

Next