ಕುವೈಟ್ ಸಿಟಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು 7 ಇಸ್ಲಾಂ ರಾಷ್ಟ್ರಗಳ ವಲಸಿಗರಿಗೆ ನಿಷೇಧ ಹೇರಿದ ಬೆನ್ನಲ್ಲೇ ಕುವೈಟ್ ಪಾಕಿಸ್ಥಾನ ಸೇರಿದಂತೆ 5 ರಾಷ್ಟ್ರಗಳಿಗೆ ವೀಸಾ ನೀಡುವುದನ್ನು ನಿಷೇಧಿಸಿದೆ.
Advertisement
ವಲಸಿಗರ ಸಮಸ್ಯೆ ಮತ್ತು ಇಸ್ಲಾಮಿಕ್ ಉಗ್ರವಾಗದಿಗಳ ಕಾರಣದಿಂದ ಉಗ್ರ ಸಂತ್ರಸ್ತ ರಾಷ್ಟ್ರಗಳಾದ ಸಿರಿಯಾ, ಇರಾಕ್ ಅಫ್ಘಾನಿಸ್ತಾನ ,ಇರಾಕ್ ಮತ್ತು ಪಾಕಿಸ್ತಾನ ದೇಶದ ಪ್ರಜೆಗಳಿಗೆ ಇನ್ಮುಂದೆ ಕುವೈಟ್ ವೀಸಾ ನೀಡಲಾಗುವುದಿಲ್ಲ ಎಂದು ಸರಕಾರ ಹೇಳಿಕೊಂಡಿದೆ.
2011 ರಲ್ಲೆ ಕುವೈಟ್ ಸಿರಿಯಾ ಸಂತ್ರಸ್ತ್ರರಿಗೆ ಬಾಗಿಲು ಮುಚ್ಚಿತ್ತು. ಅಲ್ಲಿಂದಲೇ ವೀಸಾ ನೀಡುವುದನ್ನು ನಿಲ್ಲಿಸಿತ್ತು.