Advertisement

ಕುವೆಟ್ಟು: ರಸ್ತೆ ಬದಿಗಳಲ್ಲೇ ಕೋಳಿ ತ್ಯಾಜ್ಯ; ಸ್ಥಳೀಯರ ಆತಂಕ

08:10 PM Apr 26, 2019 | mahesh |

ಬೆಳ್ತಂಗಡಿ: ಗುರುವಾಯನಕೆರೆ ಸಹಿತ ಕುವೆಟ್ಟು ಗ್ರಾಮದ ಕೆಲವು ಪ್ರದೇಶದ ರಸ್ತೆ ಬದಿಗಳಲ್ಲಿ ಕಿಡಿಗೇಡಿಗಳು ಕೋಳಿ ತ್ಯಾಜ್ಯಗಳನ್ನು ಎಸೆಯುತ್ತಿದ್ದು, ಅದು ದುರ್ನಾತ ಬೀರುವ ಜತೆಗೆ ಆರೋಗ್ಯದ ಮೇಲೂ ಪರಿಣಾಮ ಬೀರಲಿದೆ ಎಂದು ಸ್ಥಳೀಯ ನಾಗರಿಕರು ಆತಂಕ ವ್ಯಕ್ತಪಡಿಸಿದ್ದಾರೆ.

Advertisement

ಗುರುವಾಯನಕೆರೆ ಪೇಟೆಯ ಸೇತುವೆ ಕೆಳಗೆ ಕೋಳಿ ತ್ಯಾಜ್ಯವನ್ನು ರಾತ್ರಿ ಸಮಯದಲ್ಲಿ ತಂದು ಹಾಕಲಾಗುತ್ತಿದೆ. ಪಿಲಿಚಾಮುಂಡಿಕಲ್ಲು, ವರಕಬೆ, ಮದ್ದಡ್ಕ ಸಮೀಪದ ಸುಂಟಾನ್‌ಗುರಿ, ಸಬರಬೈಲು ಶಾಲಾ ಬಲಿ ಮತ್ತು ಮದ್ದಡ್ಕ ಅಲಂದಿಲ-ಸಬರಬೈಲು ಸಂಪರ್ಕ ರಸ್ತೆಯ ಬದಿಯಲ್ಲಿ ದಿನನಿತ್ಯ ತ್ಯಾಜ್ಯ ಎಸೆಯಲಾಗುತ್ತಿದೆ ಎಂಬ ಆರೋಪವಿದೆ. ಹೀಗಾಗಿ ಈ ಪ್ರದೇಶಗಳಲ್ಲಿ ತೆರಳುವ ವಾಹನದವರು, ಪಾದಚಾರಿಗಳು ಮೂಗು ಮುಚ್ಚಿಕೊಂಡೇ ಹೋಗಬೇಕಾದ ಪರಿಸ್ಥಿತಿ ಇದೆ. ಕೋಳಿ ಫಾರ್ಮ್ಗಳನ್ನು ನಡೆಸುತ್ತಿರುವವರು ಹಾಗೂ ಮಾರಾಟ ಅಂಗಡಿಗಳನ್ನು ಹೊಂದಿರುವವರು ತ್ಯಾಜ್ಯವನ್ನು ಸೂಕ್ತವಾಗಿ ಸ್ವಂತ ಜಾಗದಲ್ಲಿ ವಿಲೇ ಮಾಡಬೇಕು ಎಂಬ ನಿಯಮವಿದ್ದರೂ ಕೆಲವರು ಅದನ್ನು ಗಾಳಿಗೆ ತೂರುತ್ತಿದ್ದಾರೆ ಎಂಬ ಆರೋಪವಿದೆ.

ಈ ಕುರಿತು ಸಂಬಂಧಪಟ್ಟ ಇಲಾಖೆ ಹಾಗೂ ಗ್ರಾ.ಪಂ. ಕ್ರಮ ಕೈಗೊಂಡು ಇಂತಹ ಕಿಡಿಗೇಡಿಗಳ ವಿರುದ್ಧ ಪ್ರಕರಣ ದಾಖಲಿಸಲಿ ಎಂದು ನಾಗರಿಕರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next