ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದರ ಜತೆಗೆ ಫಲಪುಷ್ಪ ಪ್ರದರ್ಶನಕ್ಕೆ ಕುವೆಂಪು ಅವರ ಮತ್ತೂಂದು
ಪ್ರತಿಕೃತಿ ಸೇರ್ಪಡೆಯಾಗಿದೆ. ಆ.4ರಿಂದ ಫಲಪುಷ್ಪ ಪ್ರದರ್ಶನ ಆರಂಭಗೊಂಡಿದ್ದು, ಇದುವರೆಗೂ ಸುಮಾರು 52,85,230 ರೂ. ಟಿಕೆಟ್ ಶುಲ್ಕ ಸಂಗ್ರಹವಾಗಿದೆ. ಬುಧವಾರ ಲಾಲ್‌ಬಾಗ್‌ಗೆ 10 ಸಾವಿರ ಮಂದಿ ವಯಸ್ಕರು, 600 ವಿದ್ಯಾರ್ಥಿಗಳು, 2 ಸಾವಿರ ಮಂದಿ ಪಾಸ್ ಪಡೆದವರು ಸೇರಿ 12600 ಮಂದಿ ಭೇಟಿ ನೀಡಿ ಫಲಪುಷ್ಪ ಪ್ರದರ್ಶನ ವೀಕ್ಷಿಸಿದ್ದಾರೆ. ಪ್ರದರ್ಶನವು ಆ.15ರವರೆಗೆ
ನಡೆಯಲಿದ್ದು, ವೀಕೆಂಡ್ ಮತ್ತು ಸ್ವಾತಂತ್ರ್ಯದಿನೋತ್ಸವ ಇರುವುದರಿಂದ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು, ಪ್ರವಾಸಿಗರು ಬರುವ ನಿರೀಕ್ಷೆ ಇದೆ ಎಂದು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಡಾ.ಜಗದೀಶ್ ತಿಳಿಸಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮ: ಕುವೆಂಪು ಅವರ ಮಲೆಗಳಲ್ಲಿ ಮದುಮಗಳು ಕಾದಂಬರಿಯ ದಾರ್ಶನಿಕ ರೂಪ ಎಂಬ ವಿಷಯದ ಮೇಲೆ ನಾಟಕಕಾರ ಡಾ. ಕೆ.ವೈ. ನಾರಾಯಣ ಸ್ವಾಮಿ ಉಪನ್ಯಾಸ ನೀಡಿದರು. ಸದ್ವಿದ್ಯಾ ಶಾಲಾ ಮಕ್ಕಳಿಂದ ಜಲಗಾರ ನಾಟಕದ ಪ್ರದರ್ಶನ ನಡೆಯಿತು
ಇಂದಿನ ವಿಶೇಷ: ಆ.10ರಂದು ಸಂಜೆ 5ಕ್ಕೆ ಕಾನೂರು ಹೆಗ್ಗಡಿತಿ ಕಾದಂಬರಿಯಲ್ಲಿ ಚಿತ್ರಿಸಿರುವ ಆಧುನಿಕತೆಯ ವಿನ್ಯಾಸ ಎಂಬ
ವಿಷಯ ಕುರಿತು ಡಾ. ಜೆ. ಬಾಲಕೃಷ್ಣ ಉಪನ್ಯಾಸ ನೀಡಲಿದ್ದಾರೆ. ಸಂಜೆ 6 ಗಂಟೆಯಿಂದ ವಿವಿಧ ಕಲಾತಂಡಗಳಿಂದ ಕುವೆಂಪು ಗೀತೆಗಳ ಗಾಯನ ಕಾರ್ಯಕ್ರಮ ನಡೆಯಲಿದೆ.
Advertisement
ನೂಲಿನಲ್ಲಿ ಕುವೆಂಪು: ಬುಧವಾರ ಪುಷ್ಪ ಪ್ರದರ್ಶನಕ್ಕೆ ಹೊಸದೊಂದು ಕಲಾಕೃತಿ ಸೇರ್ಪಡೆಗೊಂಡಿದೆ. ಕೇವಲ ಉಕ್ಕಿನಮೊಳೆಗಳು ಮತ್ತು ಕಪ್ಪು ಬಣ್ಣದ ದಾರವನ್ನು ಬಳಸಿ ಸೃಷ್ಟಿಸಿರುವ ಕುವೆಂಪು ಪ್ರತಿಕೃತಿ ಇದಾಗಿದೆ. ಗಿರಿನಗರದ ಶಾಂತಿನಿಕೇತನ ಶಾಲೆ
ಯವರು ಈ ಕಲಾಕೃತಿಯನ್ನು ನಿರ್ಮಿಸಿದ್ದು, ವೀಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಈ ಕಲಾಕೃತಿಯನ್ನು ಲೋಕಾರ್ಪಣೆ
ಮಾಡಿದ ದೊಡ್ಡರಂಗೇಗೌಡ, “ಇದು ಸೃಜನೋದ್ಯಾನ. ಇಲ್ಲಿ ಕುವೆಂಪು ಜೀವನದ ಅನುರಣನ, ಮನೋನಂದನದ ಸವಿ ಸ್ಪಂದನ” ಎಂದು ಬಣ್ಣಿಸಿದರು.
ಬಳಸಿಕೊಂಡು ಎಂಟು ತಂಡಗಳನ್ನು ರಚಿಸಲಾಗಿದ್ದು, ಕಸದ ಸಮಸ್ಯೆಯನ್ನು ಯಶಸ್ವಿಯಾಗಿ ನಿರ್ವಹಿಲಾಗುತ್ತಿದೆ. ಗಾಜಿನ ಮನೆ, ಬ್ಯಾಂಡ್‌ಸ್ಟಾಂಡ್, ವಿವಿಧ ಮಳಿಗೆಗಳ ಪ್ರದೇಶ, ಫೋಟೋ ಗ್ಯಾಲರಿ, ಸಂಗೀತ ವೇದಿಕೆ ಪ್ರದೇಶದಲ್ಲಿ ಸ್ವಲ್ಪವೂ ಕಸ ಬೀಳದಂತೆ ನಿರ್ವಹಿಸಲು 3 ತಂಡಗಳನ್ನು ನೇಮಕ ಮಾಡಲಾಗಿದೆ. ಉಳಿದ 4 ತಂಡಗಳನ್ನು ಲಾಲ್‌ಬಾಗ್‌ನ ನಾಲ್ಕು ಪ್ರವೇಶದ್ವಾರಗಳಿಂದ ಗಾಜಿನಮನೆಯವರೆಗೂ ತ್ಯಾಜ್ಯವಸ್ತುಗಳು ಎಲ್ಲಿಯೂ ಕಾಣದಂತೆ ಸ್ವತ್ಛವಾಗಿಡಲು ಬಳಸಿಕೊಳ್ಳಲಾಗುತ್ತಿದೆ. ಮತ್ತೂಂದು ತಂಡಕ್ಕೆ ಫುಡ್‌ಕೋರ್ಟ್‌ಗಳ ಸುತ್ತಮುತ್ತ ಕಸ ಬೀಳದಂತೆ ನೋಡಿಕೊಳ್ಳುವ ಜವಾಬ್ದಾರಿ ವಹಿಸಲಾಗಿದೆ.