ಕಲೀಮಲ್ಯಾಂಗ್ ಬ್ಲಾಕ್ ಹ್ಯಾಟ್ ಟೀಮ್‌ನ ಕಿಡಿಗೇಡಿಗಳು ವೆಬ್‌ಸೈಟ್ ಹ್ಯಾಕ್ ಮಾಡಿ “ಸೇವ್ ಪ್ಯಾಲೆಸ್ತಿನ್-ಇಸ್ರೇಲ್ ಡಾಗ್” ಎಂಬ ಬರಹ ಹಾಕಿದ್ದರು.
Advertisement
ವಿಷಯ ತಿಳಿಯುತ್ತಿದ್ದಂತೆ ವಿವಿ ಸಿಬಂದಿ ವೆಬ್‌ಸೈಟ್ ಡೌನ್ ಮಾಡಿದರು. ಮಧ್ಯಾಹ್ನದ ವೇಳೆಗೆ ಆಕ್ಷೇಪಾರ್ಹ ಬರಹ ತೆಗೆದು ಹಾಕಲಾಗಿದೆ. ಈಗಾಗಲೇ ಮೌಖೀಕವಾಗಿ ದೂರು ನೀಡಲಾಗಿದೆ. ಶುಕ್ರವಾರ ಪೂರ್ಣ ಪ್ರಮಾಣದಲ್ಲಿ ವೆಬ್‌ಸೈಟ್ ಕಾರ್ಯನಿರ್ವಹಿಸಲಿದೆ ಎಂದು ವಿವಿ ಅಧಿಕಾರಿಗಳು ತಿಳಿಸಿದ್ದಾರೆ. ವಿವಿಯ ಪ್ರವೇಶ, ಪರೀಕ್ಷೆ, ಶುಲ್ಕ ಪಾವತಿ ಸಹಿತ ಪ್ರತಿಯೊಂದಕ್ಕೂ ವಿದ್ಯಾರ್ಥಿಗಳು ವೆಬ್‌ಸೈಟ್ ಅನ್ನು ಅವಲಂಬಿಸಿದ್ದು, ಗುರುವಾರ ವಿದ್ಯಾರ್ಥಿಗಳಿಗೆ ತೀವ್ರ ಸಮಸ್ಯೆಯಾಯಿತು.