Advertisement
ನಗರದ ಡಾ| ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂಮಹಾನಗರ ಪಾಲಿಕೆ ಸಂಯುಕ್ತಾಶ್ರಯದಲ್ಲಿ ರಾಷ್ಟ್ರಕವಿ ಕುವೆಂಪು ಜನ್ಮ ದಿನದ ಅಂಗವಾಗಿ ವಿಶ್ವಮಾನವ ದಿನಾಚರಣೆಯನ್ನು ಕುವೆಂಪು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಬರಹದ ಮೂಲಕ ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದ ಮೇರು ವ್ಯಕ್ತಿತ್ವದ ನುಡಿ-ನಡೆಯಲ್ಲಿ ಸಾಮ್ಯತೆ ಕಂಡುಕೊಂಡ ಯುಗದ ಕವಿ ಅವರಾಗಿದ್ದಾರೆ. ಬುದ್ಧ, ಬಸವ, ಬಸವಾದಿ ಶರಣರು ಸೇರಿದಂತೆ ನಾಡಿನ ಖ್ಯಾತ ಕವಿಗಳ ಬದುಕು ಮತ್ತು ಬರಹ ಇಂದಿನ ಪೀಳಿಗೆ ಮಾದರಿಯಾಗಿದೆ ಎಂದರು. ಹೈದ್ರಾಬಾದ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಹೈ.ಕ. ಭಾಗದ ವ್ಯಾಪ್ತಿಯ ಗ್ರಂಥಾಲಯಗಳಿಗೆ ಪುಸ್ತಕ ಸರಬರಾಜು ಮಾಡಲು ಇಲ್ಲಿನ ಲೇಖಕರಿಂದ ಪುಸ್ತಕಗಳನ್ನು ಖರೀದಿಸಲಾಗುವುದು. ಈ ಸಂಬಂಧ ವಾರದಲ್ಲಿ ಆದೇಶ ಹೊರಡಿಸಲಾಗುವುದು ಎಂದು ತಿಳಿಸಿದರು.
Related Articles
ಜಿಪಂ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಲಾಜಿ, ಕರ್ನಾಟಕ ತೊಗರಿ ಮಂಡಳಿ ಅಧ್ಯಕ್ಷ ಭಾಗಣ್ಣಗೌಡ
ಪಾಟೀಲ, ಪಾಲಿಕೆ ಮಹಾಪೌರ ಶರಣಕುಮಾರ ಮೋದಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಪ್ರೊ| ಬಿ.ಡಿ. ಕಲಬುರಗಿ, ಶಿಷ್ಠಾಚಾರ ತಹಶೀಲ್ದಾರ ಪ್ರಕಾಶ ಚಿಂಚೋಳಿಕರ, ಅಪ್ಪಾರಾವ್ ಅಕ್ಕೋಣಿ, ಡಾ| ವಾಸುದೇವ
ಸೇಡಂ ಹಾಗೂ ಸಾಹಿತಿಗಳು, ಉಪನ್ಯಾಸಕರು, ವಿವಿಧ ಕಾಲೇಜಿನ ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.
Advertisement
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ ಸ್ವಾಗತಿಸಿದರು. ಡಾ| ಚಿ.ಸಿ. ನಿಂಗಣ್ಣನಿರೂಪಿಸಿದರು. ಇದಕ್ಕೂ ಮುನ್ನ ಕಲಾವಿದ ಬಸಯ್ಯ ಗುತ್ತೇದಾರ ಮತ್ತು ತಂಡದಿಂದ ಕುವೆಂಪು ಗೀತ ಗಾಯನ ಮತ್ತು ವಿವಿಧ ಕಾಲೇಜು ವಿದ್ಯಾರ್ಥಿಗಳಿಂದ ಕವಿತೆ ವಾಚನ ನಡೆಯಿತು